
KICCHA SUDEEP : ಸ್ಯಾಂಡಲ್ವುಡ್ ಸ್ಟಾರ್ ಕಿಚ್ಚ ಸುದೀಪ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಮೆಂಟ್ ಮಾಡಿದವರ ವಿರುದ್ಧ ದೂರು ದಾಖಲಾಗಿದ್ದು, ಪ್ರಕರಣ ಗಂಭೀರ ತಿರುವು ಪಡೆದಿದೆ. ಅಖಿಲ ಕರ್ನಾಟಕ ಕಿಚ್ಚ ಸುದೀಪ್ ಸೇನಾ ಸಮಿತಿಯ ನವೀನ್ ಗೌಡ ಅವರು ಈ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಟ್ವಿಟರ್ನಲ್ಲಿ ನಟ ಸುದೀಪ್ ಅವರ ಫೇಕ್ ಫೋಟೋ ಬಳಸಿಕೊಂಡು ನಿಂದನಾತ್ಮಕ ಹಾಗೂ ಮಾನಹಾನಿಕರ ಕಾಮೆಂಟ್ಗಳನ್ನು ಪ್ರಕಟಿಸಲಾಗಿದೆ. ಇದು ಅವರ ವ್ಯಕ್ತಿತ್ವ ಹಾಗೂ ಅಭಿಮಾನಿಗಳ ಭಾವನೆಗೆ ಧಕ್ಕೆಯಾಗಿದ್ದು, ಸಾಮಾಜಿಕವಾಗಿ “ಸ್ಟಾರ್ ವಾರ್” ಎಂಬ ಅಹಿತಕರ ಪರಿಸ್ಥಿತಿಗೆ ಕಾರಣವಾಗಿದೆ.
ನವೀನ್ ಗೌಡ ಅವರು ಫೇಕ್ ಅಕೌಂಟ್ ಹೊಂದಿರುವ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ಈ ಬಗ್ಗೆ ಸೈಬರ್ ಕ್ರೈಂ ವಿಭಾಗ ತಕ್ಷಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಯ ನಟನೆಗೆ ಅಪಮಾನವಾಗುವ ರೀತಿಯ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂಬ ಮನವಿಯನ್ನು ಅವರು ಸಲ್ಲಿಸಿದ್ದಾರೆ.




