
MANDYA NEWS : ಕಂಠಪೂರ್ತಿ ಮದ್ಯಪಾನ ಮಾಡಿ BMTC ಚಾಲಕನೊಬ್ಬ KSRTC ಬಸ್ ನಿಲ್ದಾಣದಲ್ಲಿ ಪುಂಡಾಟ ಮೆರೆದಿರುವ ಘಟನೆ ತಡರಾತ್ರಿ ಮಂಡ್ಯ ನಗರದಲ್ಲಿ ನಡೆದಿದೆ.
ಘಟನೆ ವೇಳೆ ಮದ್ಯದ ಪ್ರಭಾವದಲ್ಲಿ ಚಾಲಕನು ತನ್ನ ಪ್ಯಾಂಟ್ ಹಾಗೂ ಶರ್ಟ್ವನ್ನೇ ಬಿಸಾಡಿ ಸಾರ್ವಜ ನಿಕ ಸ್ಥಳದಲ್ಲೇ ಅಸಭ್ಯ ವರ್ತನೆ ತೋರಿದ್ದಾನೆ. ಈತನ ವರ್ತನೆ ನೋಡಿ ಸ್ಥಳದಲ್ಲಿದ್ದ ಮಹಿಳಾ ಪ್ರಯಾಣಿ ಕರು ಭಯದಿಂದ ಹಾಗೂ ಮುಜುಗರದಿಂದ ಸ್ಥಳದಿಂದ ದೂರ ಸರಿದಿದ್ದಾರೆ. ಮತ್ತೊಂದೆಡೆ, ಚಾಲಕನು ಅವಾಚ್ಯ ಪದಗಳನ್ನು ಕೂಗಿ, ಶಿಳ್ಳೆ ಹಾಕಿ, ನಿಲ್ದಾಣದಲ್ಲಿಪುಂಡಾಟ ನಡೆಸಿದ್ದಾನೆ.
ಚಾಲಕನ ಕಿರಿಕಿರಿಯಿಂದ ತೀವ್ರ ಬೇಸತ್ತ ಪ್ರಯಾಣಿಕರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದು, ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲಾಗಿದೆ. ಸ್ಥಳೀಯ ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ, ಈತ ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ಸಂಸ್ಥೆ (BM TC)ಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ.




