Murder Case : ಮಾನವೀಯತೆಯೆಂಬ ಮಾತು ಅರ್ಥ ಕಳೆದುಕೊಂಡಂತಾಗಿದೆ. ರಾಜ್ಯದ ರಾಮನಗರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆದ ಎರಡು ಭೀಕರ ಘಟನೆಗಳು ಜನರ ಮನಸ್ಸು ಬೆಚ್ಚಿಬೀಳುವಂತೆ ಮಾಡಿವೆ.

Murder Case : ರಾಮನಗರದಲ್ಲಿ ಪಾಪಿ ಮಗನ ಕ್ರೂರ ಕೃತ್ಯ
ರಾಮನಗರ ತಾಲೂಕಿನ ಜಾಲಮಂಗಲದಲ್ಲಿ ನಡೆದ ಈ ಘಟನೆ ಅತಿಭೀಕರವಾಗಿದೆ.ಸರೋಜಮ್ಮ (60) ಎಂಬ ಮಹಿಳೆಯನ್ನು ಅವರ ಪುತ್ರ ಅನಿಲ್ (36) ಕತ್ತು ಸೀಳಿ ಕೊಲೆ ಮಾಡಿದ ಆರೋಪ ಕೇಳಿಬಂದಿದೆ.ತಾಯಿಯು ಜಮೀನು ಮಾರಾಟ ಮಾಡಿ ಬಂದ ಹಣವನ್ನು ನೀಡಲಿಲ್ಲವೆಂದು ಕೋಪಗೊಂಡ ಅನಿಲ್, ಮಹಿಳೆಯ ಕತ್ತು ಕೊಯ್ದು ಸ್ಥಳದಲ್ಲೇ ಕೊಂದಿದ್ದಾನೆ.ತೀವ್ರ ರಕ್ತಸ್ರಾವದಿಂದ ಸರೋಜಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಹಾಗೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಈ ಘಟನೆಯು ರಾಮನಗರ ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಜನರಲ್ಲಿ ಆಕ್ರೋಶ ಹುಟ್ಟಿಸಿದೆ.
ಕುಡಿಯಲು ಹಣ ಕೊಡಲಿಲ್ಲವೆಂದು ತಾಯಿಯ ಕತ್ತು ಕೊಯ್ದ ಮಗ ಬಾಗಲಕೋಟೆಯಲ್ಲಿ ಬೆಚ್ಚಿಬೀಳುವ ಕೃತ್ಯ
ಇನ್ನೊಂದು ಅಮಾನುಷ ಘಟನೆ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದಿದೆ.ಇಲ್ಲಿ ವೆಂಕಟೇಶ್ ಗಿರಿಸಾಗರ (28) ಎಂಬ ಯುವಕನು, ಮದ್ಯ ಕುಡಿಯಲು ಹಣ ಕೊಡಲಿಲ್ಲವೆಂದು ತಾಯಿಯನ್ನೇ ಕ್ರೂರವಾಗಿ ಕೊಂದಿದ್ದಾನೆ.ತಾಯಿ ಶಾವಕ್ಕ ಗಿರಿಸಾಗರ (58) ಅವರ ಕೈಕಾಲು ಕಟ್ಟಿ, ಬಾಯಲ್ಲಿ ಬಟ್ಟೆ ತುರುಕಿ, ಕುತ್ತಿಗೆ ಕೊಯ್ದು ಕೊಲೆ ಮಾಡಿ ಬಳಿಕ ಪರಾರಿಯಾಗಿದ್ದಾನೆ.
ಸಂಜೆಯಾದರೂ ತಾಯಿ ಕಾಣಿಸದಿದ್ದರಿಂದ ನೆರೆಹೊರೆಯವರು ಮನೆಗೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಶವ ಬಿದ್ದಿರುವುದು ಕಂಡು ಬಂದಿದೆ.
ಕೂಡಲೇ ಕಲಾದಗಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.
ಎರಡು ಜಿಲ್ಲೆಗಳಲ್ಲಿ ತಾಯಿಯ ಹತ್ಯೆ – ಜನರಲ್ಲಿ ಆಕ್ರೋಶ
ರಾಮನಗರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಒಂದೇ ದಿನ ನಡೆದ ಈ ಎರಡು ಕೊಲೆ ಪ್ರಕರಣಗಳು ರಾಜ್ಯದಾದ್ಯಂತ ತೀವ್ರ ಆಕ್ರೋಶ ಹುಟ್ಟಿಸಿವೆ.ಹೆತ್ತ ತಾಯಿಯನ್ನೇ ಕೊಲ್ಲುವಷ್ಟು ಕ್ರೂರತನ ತೋರಿದ ಇಬ್ಬರು ಪುತ್ರರ ವಿರುದ್ಧ ಜನ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸುತ್ತಿದ್ದಾರೆ.




