Chikkanayakanahalli : ಚಿಕ್ಕನಾಯಕನಹಳ್ಳಿಯ ಬೋರನಕಣಿವೆ ಜಲಾಶಯ ಇಂದು ಅಧಿಕಾರಿಗ ಳ ನಿರ್ಲಕ್ಷ್ಯದಿಂದ ಅಪಾಯದಲ್ಲಿದೆ.

ಮೈಸೂರಿನ ಚಾಮರಾಜೇಂದ್ರ ಒಡೆಯರ್ ಅವ್ರ ಸಮಯದಲ್ಲಿ 1888ರಲ್ಲಿ ನಿರ್ಮಿಸಲಾದ ಇತಿಹಾಸ ಪ್ರಸಿದ್ದವಾದ, ಚಿಕ್ಕನಾಯಕನಹಳ್ಳಿಯ ಬೋರನಕಣಿವೆ ಜಲಾಶಯ ಇಂದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಾಯದಲ್ಲಿದೆ. ಸಣ್ಣ ನೀರಾವರಿ ಇಲಾಖೆಗೆ ಒಳಪಡುವ ಈ ಜಲಾಶಯದಲ್ಲಿ ನಿರ್ವಹಣೆಯ ಕೊರತೆಯಿಂದ ಗಿಡ ಗಂಟೆಗಳು ದಟ್ಟವಾಗಿ ಬೆಳೆದಿದ್ದು, ಇದ್ರಿಂದ ಅಣೆಕಟ್ಟೆಯಲ್ಲಿ ನೀರು ಸೋರಿಕೆಯಾಗ್ತಿದೆ ಎಂದು ಸ್ಥಳೀಯರು ಆತಂಕ ಹೊರಹಾಕುತ್ತಿದ್ದಾರೆ.
ಸುವರ್ಣಮುಖಿ ನದಿಗೆ ಅಡ್ಡವಾಗಿ ನಿರ್ಮಿಸಲಾದ ಈ ಜಲಾಶಯವು, ಈ ಭಾಗದ ನೀರಾವರಿ ಹಾಗೂ ಕೃಷಿಗೆ ಅತ್ಯಂತ ಉಪಯುಕ್ತವಾಗಿದೆ. ಇದಲ್ದೇ ಬೋರನಕಣಿವೆ ಜಲಾಶಯವು ನೈಸರ್ಗಿಕ ಸೌಂದರ್ಯದಿಂದ ಕೂಡಿರುವ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಈ ಪ್ರಕೃತಿ ಸೌಂದರ್ಯವನ್ನ ಸವಿಯಲು ಸಾವಿರಾರು ಪ್ರವಾಸಿಗರು ಬರುತ್ತಿದ್ರು. ಆದ್ರೆ, ಇದೀಗ ಇಲ್ಲಿ ಮೂಲಭೂತ ಸೌಕರ್ಯಗಳ ಅಭಾವದಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.
ಇದನ್ನು ಓದಿ : ಸ್ನೇಹಿತರೊಂದಿಗೆ ಈಜಲು ಹೋಗಿ 17ರ ಬಾಲಕ ಸಾವು

ಇನ್ನು ಈ ಜಲಾಶಯದಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸರಿಯಾದ ರಸ್ತೆ ಇದ್ರೂ ಕೂಡ , ನಿರ್ವಹಣೆ ಇಲ್ಲದ ಕಾರಣ ಗಿಡ ಗಂಟೆಗಳ ಬೆಳೆದು, ಪ್ರವಾಸಿಗರಿಗೆ ಉಸಿರು ಕಟ್ಟುವ ವಾತಾವರಣ ನಿರ್ಮಾಣವಾಗಿದೆ. ಮೊದಲೆಲ್ಲಾ ಅಧಿಕಾರಿಗಳು ಜಲಾಶಯದಲ್ಲಿ ಗಿಡಗಳು ಬೆಳೆದ ತಕ್ಷಣವೇ ಅವುಗಳನ್ನ ತೆಗೆದು ಹಾಕುತ್ತಿದ್ರು. ಈಗ ಗಿಡಗಳು ಬೆಳೆದು, ಅದರ ಬೇರುಗಳು ಹಬ್ಬಿರೋದ್ರಿಂದ, ಜಲಾಶಯದಲ್ಲಿ ನೀರು ಜಿನುಗುತ್ತಿದ್ದು, ಹೀಗೆ ಮುಂದು ವರೆದ್ರೆ ಜಲಾಶಯಕ್ಕೆ ತೊಂದ್ರೆಯಾಗುತ್ತದೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.
ಇನ್ನು 2022ರ ಸೆಪ್ಟಂಬರ್ ನಲ್ಲಿ, ಸುಮಾರು 22 ವರ್ಷಗಳ ನಂತರ ಸಂಪೂರ್ಣವಾಗಿ ತುಂಬಿ ಕೋಡಿ ಬಿದ್ದಿತ್ತು. ಈಗ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣದಿಂದ ಜಲಾಶಯ ಗಂಭೀರ ಸಮಸ್ಯೆ ಎದುರಿಸುತ್ತಿದೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಇದನ್ನು ನೋಡಿ : ಗಬ್ಬೆದ್ದು ನಾರುತ್ತಿದೆ ಕೃಷಿ ಉತ್ಪನ್ನ ಮಾರುಕಟ್ಟೆ




