Tumakuru : ಬಾವಿಗೆ ಬಿದ್ದು, ಬಾಲಕ ಸಾವು.

ಶಾಲೆಗೆ ಹೋಗು ತಪ್ಪಿಸಬೇಡ ಎಂದು ಪೋಷಕರು ಬಾಲಕನಿಗೆ ಬುದ್ದಿ ಮಾತು ಹೇಳಿದ್ದೇ ತಪ್ಪಾಗಿ ಹೋಗಿದೆ. ಬುದ್ದಿ ಮಾತಿಗೆ ಮನನೊಂದು ಬಾಲಕ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
Tumakuru – ಬುದ್ದಿ ಹೇಳಿದ್ದಕ್ಕೆ ಮನನೊಂದು ಆತ್ಮಹತ್ಯೆ
ತುಮಕೂರು ಜಿಲ್ಲೆಯ ಚನ್ನಕಾಟಯ್ಯನ ಗುಡ್ಲು ಗ್ರಾಮದ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ತಪ್ಪದೇ ಶಾಲೆಗೆ ಹೋಗು ಎಂದು ಚಾಲಕನಿಗೆ ಬುದ್ದಿ ಹೇಳಿದ್ದಕ್ಕೆ ಮನನೊಂದು ಬಾಲಕ ಸಾವಿಗೆ ಶರಣಾಗಿದ್ದಾನೆ. ಜಗದೀಶ್ (14) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯಾಗಿದ್ದಾನೆ.
ಇದನ್ನು ಓದಿ : Greather Bengaluru ಪ್ರಾಧಿಕಾರದ ಚುನಾವಣೆಗೆ ಮುಹೂರ್ತ ಫಿಕ್ಸ್

ಪ್ರಕರಣ ದಾಖಲು
ಕೆಂಕೆರೆ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಜಗದೀಶ್, ಚನ್ನಕಾಟಯ್ಯನ ಗುಡ್ಲು ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಇದನ್ನು ನೋಡಿ : ತಾಕತ್ತಿದ್ದರೆ ಅರಸೀಕೆರೆಗೆ ಬಂದು ಸ್ಪರ್ಧಿಸಿ H.D.ರೇವಣ್ಣಗೆ ಶಿವಲಿಂಗೇಗೌಡ ಚಾಲೆಂಜ್




