Greather Bengaluru ಪ್ರಾಧಿಕಾರ ಅಡಿ ಇರುವ 5 ನಗರ ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.

ಸುಪ್ರೀಂಕೋರ್ಟ್ ಇಂದು Greater Bangalore Authority (GBA) ಚುನಾವಣೆಯನ್ನು ಜೂನ್ 30 ರೊಳಗೆ ನಡೆಸಲು ನಿರ್ದೇಶನ ನೀಡಿತು. ಜಿಬಿಎ ವ್ಯಾಪ್ತಿಯಲ್ಲಿರುವ 5 ಪಾಲಿಕೆಗಳಿಗೆ ಈ ಚುನಾವಣೆಯನ್ನು ಆಯೋಜಿಸಲು ಕೋರ್ಟ್ ಆದೇಶ ಹೊರಡಿಸಿದೆ.
ಇದನ್ನು ಓದಿ : Hassan|ರೈಲಿನಿಂದ ಬಿದ್ದು ಅಪರಿಚಿತ ವ್ಯಕ್ತಿ ಸಾವು

ಮಾರ್ಚ್ 16ರೊಳಗೆ ಮತದಾರರ ಪಟ್ಟಿ ಅಂತಿಮ
ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಎಜಿ ಶಶಿಕಿರಣ್ ಶೆಟ್ಟಿ ವಾದಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಕೀಲರು ಮೀಸಲಾತಿ ಪ್ರಕ್ರಿಯೆ ಫೆಬ್ರವರಿ 28 ರ ವರೆಗೆ ಮುಗಿಯಲಿದೆ ಎಂದು ತಿಳಿಸಿದರು. ಚುನಾವಣಾ ಆಯೋಗದ ವಕೀಲರು ಮತದಾರರ ಪರಿಶೀಲನೆ ಮಾರ್ಚ್ 16 ರೊಳಗೆ ಪೂರ್ಣಗೊಳ್ಳಲಿದೆ, ನಂತರ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ, ಹೀಗಾಗಿ ಮೇ ಕೊನೆಯ ವಾರವರೆಗೂ ಚುನಾವಣೆಗೆ ಅವಕಾಶ ಬೇಕೆಂದು ಮನವಿ ಮಾಡಿದರು.

ಜೂನ್ 30ರೊಳಗೆ ಚುನಾವಣೆ ನಡೆಸಿ
ಇದಕ್ಕೆ ಸುಪ್ರೀಂಕೋರ್ಟ್, ಅಂತಿಮವಾಗಿ ಜೂನ್ 30 ರೊಳಗೆ ಚುನಾವಣೆಯನ್ನು ಮುಗಿಸಲು ಸೂಚನೆ ನೀಡುವುದರೊಂದಿಗೆ, ರಾಜ್ಯ ಸರ್ಕಾರವನ್ನು ಮುಂದಿನ ಬಾರಿ ಸಮಯ ಕೇಳದಂತೆ ಎಚ್ಚರಿಸಿದೆ.
ಇದನ್ನು ನೋಡಿ : ನಿಧಿ ಸಿಕ್ಕಿರೋ ಲಕ್ಕುಂಡಿ ಗ್ರಾಮದ ಇತಿಹಾಸ ಏನು? ಮೂವರು ಅರಸರು ಆಳಿದ್ದ ಊರಿದು..!




