BBK 12 : ಬಿಗ್ ಬಾಸ್ ಕನ್ನಡ ಸೀಸನ್ 12 ಮೊದಲ ಎರಡು ವಾರ “ಜಂಟಿ ಮತ್ತು ಒಂಟಿ” ಎಂಬ ವಿಶೇಷ ಕಾನ್ಸೆಪ್ಟ್ನೊಂದಿಗೆ ಮುಂದುವರೆದಿತ್ತು.

ಬಿಗ್ ಬಾಸ್ ಕನ್ನಡ ಸೀಸನ್ 12 ಮೊದಲ ಎರಡು ವಾರ “ಜಂಟಿ ಮತ್ತು ಒಂಟಿ” ಎಂಬ ವಿಶೇಷ ಕಾನ್ಸೆಪ್ಟ್ ನೊಂದಿಗೆ ಮುಂದುವರೆದಿತ್ತು. ಗ್ರ್ಯಾಂಡ್ ಓಪನಿಂಗ್ ದಿನ ಕಿಚ್ಚ ಸುದೀಪ್ ಅವರು ಓಟಿಂಗ್ ಆಧಾರದ ಮೇಲೆ ಕೆಲ ಸ್ಪರ್ಧಿ ಗಳನ್ನು ಒಂಟಿಯಾಗಿ ಹಾಗೂ ಇನ್ನೂ ಕೆಲ ಸ್ಪರ್ಧಿಗಳನ್ನು ಜಂಟಿಯಾಗಿ ಮನೆಯೊಳಗೆ ಕಳುಹಿಸಿದರು. ಒಂಟಿ ಸದಸ್ಯರು ಮನೆಯೊಳಗೆ ಒಬ್ಬೊಬ್ಬರೆ ಆರಾಮವಾಗಿ ಇದ್ದರೆ, ಜಂಟಿ ಸದಸ್ಯರು ತಮ್ಮ ಪಾರ್ಟ್ನರ್ ಜೊತೆ ಹಗ್ಗ ಕಟ್ಟಿಕೊಂಡು ಜೊತೆಯಲ್ಲೇ ಇರಬೇಕಿತ್ತು. ಮೊದಲ ಎರಡು ವಾರ ಹೀಗೆ ನಡೆದಿದೆ. ಇದೀಗ ಜಂಟಿ-ಒಂಟಿ ಆಟಕ್ಕೆ ಬ್ರೇಕ್ ಬಿದ್ದಿದೆ.
ಮೂರನೇ ವಾರದ ಮೊದಲ ದಿನವೇ ಬಿಗ್ ಬಾಸ್ ಅವರು, ‘‘ಜಂಟಿಗಳ ಮಧ್ಯೆ ಇರುವ ಈ ಬಂಧವನ್ನು ಮುರಿದು ಜಂಟಿ-ಒಂಟಿ ಆಟಕ್ಕೆ ಪೂರ್ಣ ವಿರಾಮ ನೀಡುವ ಸಮಯ ಬಂದಿದೆ’’ ಎಂದು ಘೋಷಿಸಿದ್ದಾರೆ. ಇದರೊಂದಿಗೆ ಎಲ್ಲ ಜಂಟಿ ಸ್ಪರ್ಧಿಗಳು ಒಂಟಿಯಾಗಲು ತಯಾರಾಗಬೇಕಾಯಿತು ಮತ್ತು ಅಗತ್ಯವಿದ್ದರೆ ಕಾರಣ ಹೇಳಬೇಕಾಯಿತು.
ಈ ಸಂದರ್ಭದಲ್ಲಿ, ಕಾವ್ಯ ಶೈವ ಗಿಲ್ಲಿ ನಟನೊಂದಿಗೆ ತಮ್ಮ ಜಂಟಿ ಪ್ರವಾಸವನ್ನು ಮುಗಿಸಲು ನಿರ್ಧರಿಸಿದರು. ‘‘ಗಿಲ್ಲಿ ನನ್ನ ಜೊತೆ ಎಲ್ಲ ಅಂದ್ರೆ ನನ್ನ ವೈಯಕ್ತಿಕ ಆಟ ಕೂಡ ಕಾಣುತ್ತೆ.. ನನ್ಗೆ ಜಂಟಿಯಿಂದ ಮುಕ್ತಿ ಬೇಕು’’ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಇದರೊಂದಿಗೆ ಇವರಿಬ್ಬರ ಹಗ್ಗವನ್ನು ಕತ್ತರಿಸಿ ಅವರನ್ನು ಪ್ರತ್ಯೇಕಿಸಲಾಗಿದೆ.

ಆದರೆ, ಈ ಬಂಧವನ್ನು ಮುರಿಯುವ ಸಂದರ್ಭ ಡಾಗ್ ಸತೀಶ್ ಹಾಗೂ ಚಂದ್ರಪ್ರಭ ನಡುವೆ ಗಲಾಟೆ ನಡೆದಿದೆ. ಡಾಗ್ ಸತೀಶ್ ಮಾತನಾಡುತ್ತ, ನಾವು ಹಿಂದಿನ ರಾತ್ರಿ ಜಂಟಿಯಿಂದ ಮುಕ್ತಿ ಪಡೆಯುವುದಕ್ಕೆ ಏನಾದರೂ ನ್ಯೂಸೆನ್ಸ್ ಕ್ರಿಯೇಟ್ ಮಾಡೋಣ ಎಂದು ಮಾತನಾಡಿದ್ದೆವು. ಅದಕ್ಕೋಸ್ಕರ ಮನೆಯವರ ಮುಂದೆ ದೊಡ್ಡದಾಗಿ ಜಗಳ ಕೂಡ ಮಾಡಿದ್ದೆವು. ನಾವು ಬೇರೆ ಬೇರೆಯಾಗಿ ಇರಬೇಕು ಎಂದೇ ಡ್ರಾಮಾ ಮಾಡಿದ್ದೆವು ಎಂದು ಹೇಳಿದ್ದಾರೆ.
ಸತೀಶ್ ಮಾತಿನಿಂದ ರೊಚ್ಚಿಗೆದ್ದ ಚಂದ್ರಪ್ರಭ ಅವರು, ‘‘ನಾವು ಪ್ಲ್ಯಾನ್ ಮಾಡಿಕೊಂಡು ಮಾಡಿದ್ದೀವಿ ಎಂದು ಹೇಳಬೇಡಿ. ನಾನು ನಿಮ್ಮ ಜೊತೆ ಇದ್ದಾಗ ನೀವೇ ನನ್ನ ಮೇಲೆ ಮಾನಸಿಕ ಒತ್ತಡ ತಂದಿದ್ದೀರಿ. ನಾನು ಅಂದಿನಿಂದ ಲೇ ಕಣ್ಣೀರು ಹಾಕಿದ್ದೇನೆ ಎಂದಿದ್ದಾರೆ.
ಸತೀಶ್ ಕೂಡ ಅದಕ್ಕೆ ತಿರುಗೇಟು ಕೊಟ್ಟು, ‘‘ನೀವು ಒಳ್ಳೆಯವರಾಗಲು ನನ್ನನ್ನು ಕೆಟ್ಟವರನ್ನಾಗಿ ಮಾಡ್ತಾ ಇದ್ದೀರಾ!’’ ಎಂದು ಆಕ್ರೋಶ ವ್ಯಕ್ತಪಡಿಸಿದರು. ತೀವ್ರ ಭಾವನಾತ್ಮಕ ಕ್ಷಣಗಳಲ್ಲಿ ಚಂದ್ರಪ್ರಭ, ‘‘ನಿಮ್ಮ ಜೊತೆಗೆ ಮಾತನಾಡಿದ್ರೆ ಹುಚ್ಚು ಬರ್ತದೆ’’ ಎಂದೆನ್ನುವ ಮೂಲಕ ತಮ್ಮ ಕೈಗೆ ಕಟ್ಟಿದ್ದ ಹಗ್ಗವನ್ನು ಕಿತ್ತೆಸೆದು ಹೊರ ನಡೆದಿದ್ದಾರೆ.





