Chikkanayakanahalli : ಹುಳಿಯಾರು ಹೋಬಳಿಯ ದಸೂಡಿ ಸಮೀಪದ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ರುವ ಪುರಾತನ ಭೂತನ ಗುಡಿಯನ್ನು ನಿಧಿ ಕಳ್ಳರು ಧ್ವಂಸಗೊಳಿಸಿದ್ದಾರೆ.

ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯ ದಸೂಡಿ ಸಮೀಪದ ಸಾಮಾಜಿಕ ಅರಣ್ಯ ಪ್ರದೇಶದಲ್ಲಿರುವ ಪುರಾತನ ಭೂತನ ಗುಡಿಯನ್ನು ಗುರುವಾರ ರಾತ್ರಿ ನಿಧಿ ಕಳ್ಳರು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಗುಡಿ ಧ್ವಂಸ ಮಾಡಿ ದ ದುಷ್ಕರ್ಮಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.
ಸೋಮನಹಳ್ಳಿ–ದಸೂಡಿ ಮುಖ್ಯರಸ್ತೆ ಪಕ್ಕದ ಅರಣ್ಯ ಪ್ರದೇಶದ ಬಯಲಲ್ಲಿದ್ದ, ಈ ಪುರಾತನ ದೇವಾಲಯದಲ್ಲಿ ನಿಧಿ ಕಳ್ಳರು ಜೆಸಿಬಿ ಯಂತ್ರದ ಸಹಾಯದಿಂದ, ಸುಮಾರು ಏಳು ಅಡಿ ಆಳದ ಗುಂಡಿ ತೆಗೆದು ಶೋಧ ಕಾರ್ಯ ನಡೆಸಿದ್ದಾರೆ. ದೇವಾಲಯದ ಕಲ್ಲುಗಳು ಚದರಿಬಿದ್ದಿದ್ದು, ಸಂಪೂರ್ಣವಾಗಿ ಹಾನಿಗೊಳಗಾಗಿವೆ.

ಗ್ರಾಮಸ್ಥರ ಪ್ರಕಾರ, ಕಳೆದ ಮೂರು–ನಾಲ್ಕು ವರ್ಷಗಳಿಂದ ಕೆಲವು ಮಂದಿ ಇಲ್ಲಿ ನಿಧಿ ಹುಡುಕುವ ಪ್ರಯತ್ನ ಮಾಡುತ್ತಿದ್ದರು. ಈ ಬಾರಿ ಅವರು ಭೂತನ ಗುಡಿಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿರುವುದು ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿದೆ. ಭೂತನ ಗುಡಿ ಅಕ್ಕಪಕ್ಕದ ಜಮೀನಿನವರು ಹಾಗೂ ನೂಲೆನೂರು ಗ್ರಾಮದ ನಿವಾಸಿಗಳು ಒಟ್ಟಾಗಿ ಈ ದೇವಾಲಯವನ್ನು ಅಭಿವೃದ್ಧಿಪಡಿಸಿದ್ದರು. ಕುರಿಗಾಹಿಗಳೂ ಸೇರಿದಂತೆ ಸ್ಥಳೀಯರು ಈ ಗುಡಿಯನ್ನು ಪ್ರತ್ಯಕ್ಷ ದೈವವೆಂದು ಪೂಜಿಸುತ್ತಿದ್ದರು.
ಈ ಘಟನೆಗೆ ಸಂಬಂಧಿಸಿ ಗ್ರಾಮಸ್ಥರು ಹುಳಿಯಾರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : 23 ವರ್ಷಗಳ ಬಳಿಕ ಶತಕ ಬಾರಿಸಿದ ಜಾನ್ ಕ್ಯಾಂಪ್ಬೆಲ್





