John Campbell : ಬರೋಬ್ಬರಿ 23 ವರ್ಷಗ ಬಳಿಕ ವೆಸ್ಟ್ ಇಂಡೀಸ್ ತಂಡದ ಆರಂಭಿಕ ಬ್ಯಾಟರ್ರೊಬ್ಬರು ಭಾರತದಲ್ಲಿ ಟೆಸ್ಟ್ ಶತಕ ಸಿಡಿಸಿದ್ದಾರೆ.

ಬರೋಬ್ಬರಿ 23 ವರ್ಷಗ ಬಳಿಕ ವೆಸ್ಟ್ ಇಂಡೀಸ್ ತಂಡದ ಆರಂಭಿಕ ಬ್ಯಾಟರ್ರೊಬ್ಬರು ಭಾರತದಲ್ಲಿ ಟೆಸ್ಟ್ ಶತಕ ಸಿಡಿಸಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ದ್ವಿತೀಯ ಇನಿಂಗ್ಸ್ನಲ್ಲಿ ಕಣಕ್ಕಿಳಿದ ಕ್ಯಾಂಪ್ಬೆಲ್ 115 ರನ್ ಬಾರಿಸಿ ಮಿಂಚಿದರು.
John Campbell 2002ರ ಬಳಿಕ ಮೊದಲ ಶತಕ
ಇದಕ್ಕೂ ಮೊದಲು 2002ರಲ್ಲಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ವಾವೆಲ್ ಹಿಂಡ್ಸ್ 100 ರನ್ ಗಳಿಸಿದ್ದೇ ಭಾರತದಲ್ಲಿ ವೆಸ್ಟ್ ಇಂಡೀಸ್ ಓಪನರ್ನಿಂದ ಬಂದ ಕೊನೆಯ ಶತಕವಾಗಿತ್ತು. 23 ವರ್ಷಗಳ ಬಳಿಕ ಇದೇ ಸಾಧನೆಯನ್ನು ಪುನರಾವರ್ತಿಸಿದ ಕ್ಯಾಂಪ್ಬೆಲ್, ತಂಡಕ್ಕೆ ಭರ್ಜರಿ ಪ್ರಾರಂಭ ಒದಗಿಸಿದರು.

ದ್ವಿತೀಯ ಇನಿಂಗ್ಸ್ನಲ್ಲಿ ಭದ್ರ ಸ್ಥಿತಿ
ಕ್ಯಾಂಪ್ಬೆಲ್ ಅವರ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. 67 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 225 ರನ್ಗಳನ್ನು ಕಲೆ ಹಾಕಿದೆ. ಮುಂದಿನ ಆಟದ ಫಲಿತಾಂಶ ನಿರ್ಧಾರಾತ್ಮಕವಾಗಲಿದೆ.

ಇದನ್ನು ಓದಿ : ಮರಕ್ಕೆ ಕ್ರೂಸರ್ ಡಿಕ್ಕಿ – ಇಬ್ಬರು ಮೃತ್ಯು




