Farmers Protest : ಹುಳಿಯಾರಿನ ಸಂತೆ ಸ್ಥಳದಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದ್ದು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.

ನಾಲ್ಕನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಧರಣಿ
ಹುಳಿಯಾರಿನ ಸಂತೆ ಸ್ಥಳದಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದ್ದು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೀಗಾಗಿ ಸೌಕರ್ಯವನ್ನು ಒದಗಿಸಿ ಕೊಡೋವರೆಗೂ ನಾವು ಹೋರಾಟ ನಿಲ್ಲಿಸಲ್ಲ ಎಂದು ರೈತ ಸಂಘದಿಂದ ಪಟ್ಟಣ ಪಂಚಾಯಿತಿ ಎದುರು ಆಹೋ ರಾತ್ರಿ ಧರಣೆ ನಡೆಸುತ್ತಿದ್ದು, ಧರಣಿಯು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಇದನ್ನು ಓದಿ : ಹೊಸ ಲುಕ್ನಲ್ಲಿ ವಿಜಯ್ ದೇವರಕೊಂಡ
ಯಾವೊಬ್ಬ ಅಧಿಕಾರಿಯಿಂದಲೂ ರೈತರಿಗೆ ಸಿಗದ ಸ್ಪಂದನೆ
ಇನ್ನು ನಾಲ್ಕನೇ ದಿನಕ್ಕೆ ಕಾಲಿಟ್ಟ ಧರಣಿಗೆ ಹೆಚ್ಚಿನ ಶಕ್ತಿ ನೀಡಲು, 11ನೇ ದಿನದಿಂದ ಉಪವಾಸ ಸತ್ಯಾಗ್ರಹ ನಡೆಸಲು ರೈತ ಸಂಘ ತೀರ್ಮಾನ ಮಾಡಿದೆ. ಇದೇ ವೇಳೆ ರೈತ ಸಂಘದ ಚಂದ್ರಣ್ಣ ಮಾತನಾಡಿ, ಕಳೆದ ಎರಡು ಮೂರು ದಶಕಗಳಿಂದಲೂ ಸುಂಕ ವಸೂಲಿ ಮಾಡುವ ಪಟ್ಟಣ ಪಂಚಾಯ್ತಿಗೆ ಮೂಲಭೂತ ಸೌಕರ್ಯ ನೀಡುವಂತೆ. ತಿಂಗಳಿಂದ 2 ಹಂತದ ಚಳುವಳಿ ಮಾಡಿದ್ದೇವೆ. ಆದ್ರೆ ಶಾಸಕರಾದ ಸುರೇಶ್ ಬಾಬು ಅವ್ರು ಹುಳಿಯಾರಿಗೆ ಕಾರ್ಯಕ್ರಮಗಳ ನಿಮಿತ್ತ ಬಂದಿದ್ರೂ, ಕೂಡ ಇತ್ತ ತಿರುಗು ನೋಡಿಲ್ಲ. ಹೀಗಾಗಿ ಮಳೆ, ಗಾಳಿ ಏನೇ ಬಂದ್ರೂ, ಸಹ ನಮ್ಮ ಬೇಡಿಕೆಗಳು ಈಡೇರುವವರೆಗೂ ನಾವು ಧರಣಿಯಿಂದ ಹಿಂದೆ ಸರಿಯಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ರು.
ಹುಳಿಯಾರಿನಲ್ಲಿ ಕಸದ ಸಮಸ್ಯೆ
ಇನ್ನು ಇದೇ ವೇಳೆ ಪಟ್ಟಣ ಪಂಚಾಯಿತಿ ನೌಕರರು ಮಾತನಾಡಿ, ಇದು ಇಂದಿನ ಸಮಸ್ಯೆಯಲ್ಲ ನಾನು ಕೆಲಸಕ್ಕೆ ಸೇರಿದಾಗಿನಿಂದ್ಲೂ, ಹುಳಿಯಾರಿನಲ್ಲಿ ಕಸದ ಸಮಸ್ಯೆ ನೀಗಿಲ್ಲ. ಅಲ್ದೇ ಇಲ್ಲಿ ಕಸ ಹಾಕುವುದಕ್ಕೂ ಜಾಗ ಇಲ್ಲ, ಎಲ್ಲಿ ಹೋದ್ರೂ ವಾಪಸ್ ಕಳಿಸ್ತಾರೆ. ಮೊದಲು ಕೆರೆಯಲ್ಲಿ ಕಸವನ್ನ ಹಾಕ್ತಿದ್ವೀ, ಈಗ ಎಲ್ಲೂ ಜಾಗ ಇಲ್ಲ, ಹೀಗಾಗಿ ಕಸ ಬೀದಿಯಲ್ಲೆ ಇರುತ್ತೇ, ನಾವೇನು ಮಾಡೋದು ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ ಎಂದ್ರು.
ಇದನ್ನು ನೋಡಿ : ರಸ್ತೆ, ಚರಂಡಿ ಇಲ್ಲ, ನೀರಂತೂ ಇಲ್ವೇ ಇಲ್ಲ ಗ್ರಾ.ಪಂ ಹೆಡ್ ಕ್ವಾಟರ್ ಗತಿ ಅದೋಗತಿ..!





