Sand Mafia : ಗಡಿ ತಾಲೂಕಾದ ಪಾವಗಡದಲ್ಲಿ ಎಗ್ಗಿಲ್ಲದೇ ಮರಳು ದಂಧೆ ನಡೆಯುತ್ತಿದ್ದ, ರಾತ್ರೋ ರಾತ್ರಿ ಮರಳುಗಳನ್ನು ಬಗೆದು ಜೆಸಿಬಿ ಮೂಲಕ ಸಾಗಾಟ ಮಾಡ್ತಾ ಇದ್ದಾರೆ.

ಗಡಿ ತಾಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಮರಳು ದಂಧೆ..?
ಗಡಿ ತಾಲೂಕಾದ ಪಾವಗಡದಲ್ಲಿ ಎಗ್ಗಿಲ್ಲದೇ ಮರಳು ದಂಧೆ ನಡೆಯುತ್ತಿದ್ದ, ರಾತ್ರೋ ರಾತ್ರಿ ಮರಳುಗಳನ್ನು ಬಗೆದು ಜೆಸಿಬಿ ಮೂಲಕ ಸಾಗಾಟ ಮಾಡ್ತಾ ಇದ್ದಾರೆ, ಇನ್ನು ಈ ಮರಳು ದಂಧೆಯಲ್ಲಿ ಅಧಿಕಾರಿಗಳು ಪಾಲಾಗಿ ದ್ದಾರಾ ಎಂದು ಸ್ಥಳೀಯರು ಆರೋಪ ಮಾಡ್ತಿದ್ದಾರೆ. ಹೌದು ಪಾವಗಡ ತಾಲೂಕಿನ ನಾಗಲಮಡಿಕೆ ವ್ಯಾಪ್ತಿಯ ತಿಮ್ಮನಹಳ್ಳಿ, ವಡ್ರೇವೋ ಸೇರಿ ಉತ್ತರ ಪಿನಾಕಿನಿ ನದಿಯ ಸುತ್ತಮುತ್ತಲ ಗ್ರಾಮಗಳಲ್ಲಿ ದಂಧೆಕೋರರು ಮರಳನ್ನು ಬಗೆದು ಸಾಗಾಟ ಮಾಡ್ತಾ ಇರೋದು ಕಂಡು ಬಂದಿದೆ.
ಮರಳು ದಂಧೆಯಲ್ಲಿ ಅಧಿಕಾರಿಗಳು ಶಾಮೀಲು ಆರೋಪ
ಮೊದಲೇ ಮಳೆ ಬೆಳೆಯಲ್ಲದೇ ಬರಡು ಪ್ರದೇಶ ಎಂದು ಹೆಸರುವಾಸಿಯಾದ ಪಾವಗಡ ತಾಲೂಕಿನಲ್ಲಿ ಅಂತರ್ಜಲ ಕುಸಿತಕ್ಕೆ ಮರಳು ದಂಧೆಯೂ ಕೂಡ ಒಂದಾಗಿದ್ದು, ಕೆರೆ, ಉತ್ತರಪಿನಾಕಿನಿ ನದಿಯ ಒಡಲಲ್ಲಿರೋ ಗ್ರಾಮಗಳಲ್ಲಿ ಮರಳನ್ನು ರಾತ್ರೋ ರಾತ್ರಿ ಸಾಗಾಟ ಮಾಡ್ತಾ ಇದ್ದು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡ್ತಾ ಇದ್ದಾರೆ. ಇನ್ನು ಈ ಮರಳು ದಂಧೆಯಲ್ಲಿ ದೊಡ್ಡ ದೊಡ್ಡ ಪ್ರಭಾವಿಗಳೇ ಇದ್ದಾರಂತೆ, ಅಲ್ದೇ ಮರಳು ದಂಧೆ ನಡೆಸಲು ಪೊಲೀಸರಿಗೆ ಮಂತ್ಲಿ ಇನ್ಕಂ ಕೂಡ ಹೋಗ್ತಾ ಇದೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ರು.
ಇದನ್ನು ಓದಿ : ಬೆಂಗಳೂರಿನಲ್ಲಿ ಇಂದು ಸಂಜೆ BJP ಕೋರ್ ಕಮಿಟಿ ಸಭೆ

ಹಲವು ಬಾರಿ ದೂರು ನೀಡಿದ್ರು ಕ್ರಮ ಕೈಗೊಳ್ಳದ ಇಲಾಖೆ
ಇನ್ನು, ನದಿಯ ಸುತ್ತು ಮುತ್ತಲಿನ ಹಳ್ಳಿಗಳ ರೈತರು ಮರಳು ದಂಧೆ ಬಗ್ಗೆ ಹಲವು ಬಾರಿ ಪೋಲಿಸ್ ಇಲಾಖೆಗೆ ಗಮನಕ್ಕೆ ತಂದರು ಸಹ ಯಾವುದೇ ಪ್ರಯೋಜನ ಪಡೆಯುತ್ತಿಲ್ಲ. ಹಲವು ಬಾರಿ 112 ಪೋಲಿಸ್ ಸಿಬ್ಬಂದಿ ಗಮನಕ್ಕೆ ತಂದರು ಸಹ ಬಂದು ನೋಡಿ ಹೋಗ್ತಾರೆ ಅಷ್ಟೇ ಯಾವುದೇ ಕ್ರಮ ಆಗ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ರು,

ಇದನ್ನು ನೋಡಿ : ಶಿರಾದಲ್ಲಿ ಎಗ್ಗಿಲ್ಲದೆ ಮಣ್ಣು ಮಾಫಿಯಾ ಹಾವಳಿ




