ಅನುದಾನ ದುರುಪಯೋಗ – ಪಾವಗಡ PDO ಶಿವಾನಂದ ಸಾತಿಹಾಳ್ ಅಮಾನತು.

ಅನುದಾನ ದುರುಪಯೋಗ ಮತ್ತು ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ಕೋಟಿಗುಡ್ಡ ಗ್ರಾಮ ಪಂಚಾಯಿತಿಯ ಹಿಂದಿನ ಪಿಡಿಓ ಹಾಗೂ ಹಾಲಿ ಪೊನ್ನಸಮುದ್ರ ಪಿಡಿಓ ಆಗಿರುವ ಶಿವಾನಂದ ಸಾತಿಹಾಳ ಅವರನ್ನು ಅಮಾನತು ಮಾಡಲಾಗಿದೆ.
ಅಮಾನತ್ತು ಆದೇಶ
ಪಾವಗಡ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜಾ ಬಿ.ವಿ. ಅವರು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ಅಮಾನತ್ತು ಆದೇಶ ಹೊರಡಿಸಿದ್ದಾರೆ.
READ THIS : ದಿಢೀರ್ ಏರಿಕೆ ಕಂಡ Gold Rate – ಇಂದಿನ ದರ ಎಷ್ಟಿದೆ?

ಅನುಮತಿ ಇಲ್ಲದೆ ಬೇರೆಡೆಗೆ ಹೋಗಬಾರದು
ಅಲ್ದೇ ಆರೋಪಗಳ ಹಿನ್ನೆಲೆ ಇಲಾಖೆಯ ವಿಚಾರಣೆ ಬಾಕಿ ಇರಿಸಿ ಶಿವಾನಂದ ಸಾತಿಹಾಳ ಅವರನ್ನು ತಕ್ಷಣದಿಂದ ಅಮಾನತ್ತಿನಲ್ಲಿರಿಸಲಾಗಿದ್ದು, ಅಮಾನತ್ತು ಅವಧಿಯಲ್ಲಿ ಅವರಿಗೆ ನಿಯಮಾನುಸಾರ ಜೀವನಾಧಾರ ಭತ್ಯೆ ನೀಡಲಾಗುವುದು. ಜೊತೆಗೆ ಸಕ್ಷಮ ಪ್ರಾಧಿಕಾರಿಯ ಅನುಮತಿ ಇಲ್ಲದೆ ಬೇರೆಡೆಗೆ ಹೋಗಬಾರದು ಎಂದು ಸೂಚಿಸಲಾಗಿದೆ.

MUST WATCH : ವ್ಯಾಪಾರಿಗಳಿಂದ FOOTPATH ಒತ್ತುವರಿ..! – ಒತ್ತುವರಿ ತೆರವು ಕಾರ್ಯ ಯಾವಾಗ ?




