Actor Umesh : ಸ್ಯಾಂಡಲ್ವುಡ್ನ ಹಿರಿಯ ಹಾಸ್ಯ ನಟ ಉಮೇಶ್ ಅವರು ಮನೆಯಲ್ಲಿ ಬಿದ್ದು ಗಾಯಗೊಂಡು ಶಾಂತಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸ್ಯಾಂಡಲ್ವುಡ್ನ ಹಿರಿಯ ಹಾಸ್ಯ ನಟ ಉಮೇಶ್ ಅವರು ಮನೆಯಲ್ಲಿ ಬಿದ್ದು ಗಾಯಗೊಂಡು ಶಾಂತಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ವೇಳೆ ಅವರಿಗೆ ಲಿವರ್ ಕ್ಯಾನ್ಸರ್ ಇರುವುದೆಂದು ವೈದ್ಯರು ದೃಢಪಡಿಸಿದ್ದಾರೆ.
ಲಿವರ್ ಕ್ಯಾನ್ಸರ್ ನಾಲ್ಕನೇ ಹಂತ
ಲಿವರ್ನಲ್ಲಿ ಕ್ಯಾನ್ಸರ್ ಉಂಟಾಗಿದ್ದು, ಅದು ಬೇರೆ ಅಂಗಗಳಿಗೆ ಹರಡಿದೆ. ಕ್ಯಾನ್ಸರ್ ಖಚಿತಪಡಿಸಲು ಇನ್ನೂ ಕೆಲವು ಟೆಸ್ಟ್ ಮಾಡಬೇಕಿದೆ. ಹೀಗಾಗಿ ಲಿವರ್ ಒಳಗೆ ಇರುವ ಗಡ್ಡೆಯನ್ನು ತೆಗೆದು ಪರೀಕ್ಷೆಗೆ ಕಳುಹಿಸುತ್ತೇವೆ. ಸದ್ಯ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದೆ. ಇಂಜೆಕ್ಷನ್ನಲ್ಲಿ ಗಡ್ಡೆ ಕರಗಿಸುವ ಪ್ರಯತ್ನ ನಡೆಯುತ್ತಿದೆ. ಗುಣಮುಖರಾಗುವ ಸಾಧ್ಯತೆ ಇದೆʼʼ ಎಂದು ವೈದ್ಯರು ಹೇಳಿದ್ದಾರೆ.
ಇದನ್ನು ಓದಿ : ಸ್ಮಾರ್ಟ್ ಸಿಟಿ ಎಡವಟ್ಟು – ಸೂಚನಾ ಫಲಕದಲ್ಲಿ ಅಕ್ಷರಗಳೇ ಕಾಣಿಸ್ತಿಲ್ಲ

350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ
ಮೈಸೂರಿನಲ್ಲಿ ಜನಿಸಿದ ಉಮೇಶ್, 4ನೇ ತರಗತಿಯಲ್ಲಿ ನಾಟಕಗಳಲ್ಲಿ ನಟನೆ ಪ್ರಾರಂಭಿಸಿದರು. 1960ರಲ್ಲಿ ತೆರೆಕಂಡ ‘ಮಕ್ಕಳ ರಾಜ್ಯ’ ಚಿತ್ರದಿಂದ ಬೆಳ್ಳಿತೆಗೆ ಬಂದ ಅವರು, 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯಭರಿತ ಪಾತ್ರಗಳಿಂದ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ.
ಪ್ರಶಸ್ತಿ ಪುರಸ್ಕೃತ ನಟ
ಇನ್ನು 1975ರಲ್ಲಿ ‘ಕಥಾ ಸಂಗಮ’ ಚಿತ್ರದ ಅಭಿನಯಕ್ಕೆ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಿಕ್ಕಿದ್ದು, ಹಾಸ್ಯ ನಟನೆಯಿಂದ ವಿಶೇಷ ಸ್ಥಾನ ಪಡೆದಿದ್ದಾರೆ. 2023ರಲ್ಲಿ ಬಿಡುಗಡೆಯಾದ ‘ಡೇರ್ಡೆವಿಲ್ ಮುಸ್ತಫ’ ಉಮೇಶ್ ಅವರ ಕೊನೆಯ ಚಿತ್ರವಾಗಿದೆ.

ಇದನ್ನು ನೋಡಿ : ಮನೆಯಲ್ಲಿ ಜಾರಿಬಿದ್ದ ಸ್ಯಾಂಡಲ್ವುಡ್ ನಟ ಉಮೇಶ್ ಆರೋಗ್ಯ ಹೇಗಿದೆ?




