Tumakuru : ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರಿನಲ್ಲಿ ನಾನಾ ಅಭಿವೃದ್ಧಿ ಕೆಲಸಗಳು ಆಗ್ತಾ ಇವೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರಿನಲ್ಲಿ ನಾನಾ ಅಭಿವೃದ್ಧಿ ಕೆಲಸಗಳು ಆಗ್ತಾ ಇವೆ. ಆದ್ರೆ ಅಭಿವೃದ್ಧಿ ಕೆಲಸಗಳ ನಡುವೆ ಸ್ಮಾರ್ಟ್ ಸಿಟಿ ಕೆಲವೊಂದು ಯಡವಟ್ಟು ಮಾಡಿಕೊಳ್ತಾ ಇದ್ದು, ಹಣ ಲಪಟಾಯಿಸಲು ಹೀಗೆ ಮಾಡ್ತಾ ಇದ್ಯಾ ಎಂಬ ಅನುಮಾನ ಮೂಡಿದೆ.
ಸೂಚನಾಫಲಕದಲ್ಲಿ ಚಿಕ್ಕ ಚಿಕ್ಕ ಅಕ್ಷರಗಳಲ್ಲಿ ಮುದ್ರಣ
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ಜನರ ಅನುಕೂಲಕ್ಕಾಗಿ ನಗರದ ರಸ್ತೆಗಳು ಹಾಗೂ ಪ್ರಮುಖ ಸ್ಥಳಗಳ ಮಾರ್ಗಗಳನ್ನು ಹಾಕಲಾಗಿದೆ, ಆದ್ರೆ ಆ ಸೂಚನಾ ಫಲಕಗಳಲ್ಲಿ ಮಾರ್ಗಗಳನ್ನು ಚಿಕ್ಕ ಚಿಕ್ಕ ಅಕ್ಷರಗಳಲ್ಲಿ ಮುದ್ರಿಸಿದ್ದು ಇದ್ರಿಂದ ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡುತ್ತಿದೆ.
ಇದನ್ನು ಓದಿ : ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕಾಂತಾರ ಕ್ಕೆ ವಿಶೇಷ ಸ್ಥಾನ | ಸುಮಲತಾ
ಸಣ್ಣ ಅಕ್ಷರಗಳು ಕಾಣಿಸದೇ ಸವಾರರ ಪರದಾಟ
ಸಾರ್ವಜನಿಕರ ತೆರಿಗೆ ಹಣದಿಂದ ನಗರಾದ್ಯಂತ ಸ್ಮಾರ್ಟ್ ಸಿಟಿ ವತಿಯಿಂದ ಸೂಚನಾ ಫಲಕವನ್ನು ಅಳವಡಿ ಸಲಾಗಿದೆ. ಆದ್ರೆ ತೆರಿಗೆ ಹಣದಲ್ಲಿ ಕಾಟಾಚಾರಕ್ಕೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ಯಾ ಎಂಬ ಅನುಮಾನ ಶುರುವಾಗಿದೆ, ಯಾಕೆಂದ್ರೆ ಸೂಚನಾ ಫಲಕದಲ್ಲಿ ಮಾರ್ಗಗಳನ್ನು ಸಣ್ಣ ಅಕ್ಷರದಲ್ಲಿ ಮುದ್ರಿಸಲಾಗಿದ್ದು ಸವಾರರಿಗೆ ಕಾಣಿಸ್ತಾ ಇಲ್ಲ… ಇದ್ರಿಂದ ಸವಾರರು ಪ್ರಯಾಣದ ದಿಕ್ಕನ್ನೇ ಬದಲಾಯಿಸಿಕೊಳ್ಳುವಂತಾಗುತ್ತಿದೆ. ಅಲ್ದೇ ಸಣ್ಣ ಅಕ್ಷರದಲ್ಲಿ ಊರುಗಳ ಮಾರ್ಗಗಳ ಹೆಸರನ್ನು ಹಾಕಲಾಗಿದ್ದು, ಸೂಚನಾಫಲಕಗಳನ್ನು ನೋಡಿಕೊಂಡು ವಾಹನ ಚಲಾವಣೆ ಮಾಡುವ ವೇಳೆ ಅಪಘಾತಗಳಾಗುತ್ತವೆ ಎಂದು ಸಾಮಾಜಿಕ ಕಾರ್ಯಕರ್ತ ಇಮ್ರಾನ್ ಪಾಷಾ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ರು.

ಸ್ಮಾರ್ಟ್ ಸಿಟಿ ವಿರುದ್ಧ ಸಾರ್ವಜನಿಕರ ಆಕ್ರೋಶ
ಇನ್ನು ತುಮಕೂರಿನ ಆರೇಳು ವಾರ್ಡ್ಗಳು ಅಷ್ಟೇ ಸ್ಮಾರ್ಟ್ ಸಿಟಿ ಆಗಿರೋದು, ಎಲ್ಲಾ ವಾರ್ಡ್ಗಳು ಆಗಿಲ್ಲ. ಸೂಚನಾ ಫಲಕದಲ್ಲಿ ಇವರು ಹಾಕಿರೋ ಅಕ್ಷರಗಳು ನಡೆದುಕೊಂಡು ಹೋಗುವವರಿಗೆ ಮಾತ್ರ ಕಾಣಿಸುತ್ತದೆ ಆದ್ರೆ ಬೈಕ್ನಲ್ಲಿ ಹೋಗುವವರಿಗೆ ಮಾತ್ರ ಕಾಣಿಸಲ್ಲ ಎಂದು ಸ್ಮಾರ್ಟ್ ಸಿಟಿ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ರು.
ಒಟ್ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅನೇಕ ಅಭಿವೃದ್ಧಿ ಕೆಲಸಗಳು ಆಗಿದ್ರು ಕೂಡ, ಸಣ್ಣ ಪುಟ್ಟ ದೋಷಗಳಿಂದ ಸ್ಮಾರ್ಟ್ ಸಿಟಿ ಹಣ ಲೂಟಿ ಹೊಡಿತಾ ಇದ್ಯಾ ಎಂಬ ಅನುಮಾನ ಮೂಡಿಸಿದೆ.

ಇದನ್ನು ನೋಡಿ : ಕೊರಟಗೆರೆಯಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ – ಅಧಿಕಾರಿಗಳ ನಿರ್ಲಕ್ಷ್ಯ ಬಯಲು!




