Suresh Gowda Birthday: ಮಾನ್ಯ ಜನಪ್ರಿಯ ಶಾಸಕರಾದ ಬಿ.ಸುರೇಶ್ ಗೌಡ ಅವರು ನಾಳೆ 60ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.

ಸುರೇಶ್ ಗೌಡರ 60ನೇ ಹುಟ್ಟುಹಬ್ಬಕ್ಕೆ ಭರ್ಜರಿ ಸಿದ್ಧತೆ
ತುಮಕೂರು ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಯ ಹರಿಕಾರ, ಧೀನ ದಲಿತರ ಆಶಾಕಿರಣ, ಬಡವರ ಬಂಧು, ತುಮಕೂರು ಗ್ರಾಮಾಂತರ ಕ್ಷೇತ್ರದ ಧಣಿ ಅದು ಸುರೇಶ್ ಗೌಡ ಅವರು.. ಅಪ್ಪಟ ರಾಜಕಾರಣಿ, ಗ್ರಾಮಾಂತರ ಕ್ಷೇತ್ರದ ಮನೆ ಮಗನಾಗಿ ಕ್ಷೇತ್ರದ ಜನಕ್ಕಾಗಿ ಸದಾ ದುಡಿಯುವ ಮನಸ್ಸಿರೋ ವ್ಯಕ್ತಿ ಅಂದ್ರೆ ಅದು ಬಿ.ಸುರೇಶ್ ಗೌಡ ಅವರು. ಮಾನ್ಯ ಜನಪ್ರಿಯ ಶಾಸಕರಾದ ಬಿ.ಸುರೇಶ್ ಗೌಡ ಅವರು ನಾಳೆ 60ನೇ ವಸಂತಕ್ಕೆ ಕಾಲಿಡಲಿದ್ದು, ಸುರೇಶ್ ಗೌಡ ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಇನ್ನು ನಾಳೆ ಸುರೇಶ್ ಗೌಡ ಅವರ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಗ್ರಾಮಾಂತರದ ಮಂಡಲದ ವತಿಯಿಂದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
ನಾಳೆ ಶಾಸಕ ಸುರೇಶ್ ಗೌಡ ಅವರ ಹುಟ್ಟು ಹಬ್ಬದ ಅಂಗವಾಗಿ ಶಿವಗಂಗೆಯ ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೇರವೇರಿಸಲಾಗುತ್ತೆ. ಶಿವಗಂಗೆಯ ಶ್ರೀ ಗಂಗಾಧರೇಶ್ವರ ದೇಗುಲದ ಬಳಿ ಸುಮಾರು 200 ಕಾರುಗಳಲ್ಲಿ ಮಾನ್ಯ ಸುರೇಶ್ ಗೌಡ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಕಾರ್ಯಕರ್ತರು ಸಕಲ ಸಿದ್ಧತೆ ಮಾಡಿಕೊಳ್ಳಲಾ ಗಿದೆ, ಬಳಿಕ ಸಿದ್ದಗಂಗಾ ಮಠದಲ್ಲಿ ಶ್ರೀಗಳ ಆಶೀರ್ವಾದವನ್ನು ಸುರೇಶ್ ಗೌಡ ಅವರು ಪಡೆಯಲಿದ್ದಾರೆ. ಇದಾದ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲನ್ನು ವಿತರಣೆ ಮಾಡಲು ಕಾರ್ಯಕ್ರಮ ರೂಪಿಸಲಾಗಿದ್ದು, ಅಲ್ಲಿಂದ ಬಾಣವರದ ಶಕ್ತಿಸೌಧದಲ್ಲಿ ಅಭಿಮಾನಿಗಳಿಂದ ಕೇಕ್ ಕಟ್ ಮಾಡಿಸುವ ಕಾರ್ಯಕ್ರಮವನ್ನು ಅಭಿಮಾನಿ ಗಳು ಆಯೋಜನೆ ಮಾಡಿದ್ದಾರೆ. ಇದಾದ ಬಳಿಕ ಬೆಳ್ಳಾವಿ ಮಠ ಹಾಗೂ ದೇವರಾಯನ ದುರ್ಗಕ್ಕೆ ತೆರಳಿ ಆಶೀರ್ವಾದ ವನ್ನು ಪಡೆಯಲಿದ್ದಾರೆ.
ಇದನ್ನು ನೋಡಿ : ಗಣೇಶ ವಿಸರ್ಜನೆ ವೇಳೆ SURESH GOWDA , MLA JYOTHI GANESH ಮಸ್ತ್ ಡ್ಯಾನ್ಸ್

ಹುಟ್ಟುಹಬ್ಬದ ಪ್ರಯುಕ್ತ ಹೆಬ್ಬೂರು ಮೈದಾನದಲ್ಲಿ ಸಂಜೆ ಸಂಗೀತ ಸಂಜೆ
ಇನ್ನು ಶಾಸಕ ಸುರೇಶ್ ಗೌಡ ಅವರ ಹುಟ್ಟುಹಬ್ಬದ ಅಂಗವಾಗಿ ನಾಳೆ ಸಂಜೆ ಹೆಬ್ಬೂರು ಹೈಸ್ಕೂಲ್ ಮೈದಾನದಲ್ಲಿ ಸಂಗೀತ ಸಂಜೆಯನ್ನು ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ವಿಪಕ್ಷ ನಾಯಕ ಆರ್. ಅಶೋಕ್ ಭೇಟಿ ನೀಡಿ ಸುರೇಶ್ ಗೌಡ ಅವರ ಹುಟ್ಟುಹಬ್ಬಕ್ಕೆ ಶುಭಹಾರೈಸಲಿದ್ದಾರೆ ಎಂದು ಸುರೇಶ್ ಗೌಡ ಅವರ ಅಭಿಮಾನಿಗಳು ತಿಳಿಸಿದ್ರು.
ಹೆಬ್ಬೂರಲ್ಲಿ ಬೃಹತ್ ವೇದಿಕೆ, 10 ಸಾವಿರ ಮಂದಿಗೆ ಊಟದ ಸಿದ್ಧತೆ
ಇನ್ನು, ಸುರೇಶ್ ಗೌಡ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಹೆಬ್ಬೂರು ಬಳಿ ಬೃಹತ್ ವೇದಿಕೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ರಾಜೇಶ್ ಕೃಷ್ಣನ್ ತಂಡದಿಂದ ಮನೋರಂಜನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಹಲವು ಮಂದಿ ಕಲಾವಿಧರು ಭಾಗಿಯಾಗಲಿದ್ದಾರೆ. ಅಲ್ಲದೇ ಕಾರ್ಯಕ್ರಮಕ್ಕೆ ಸುಮಾರು 10 ಸಾವಿರ ಮಂದಿ ಆಗಮಿಸುವ ಸಾದ್ಯತೆ ಇದ್ದು, ಅಭಿಮಾನಿಗಳು, ಕಾರ್ಯಕರ್ತರಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ, ಇತ್ತ ಸುರೇಶ್ ಗೌಡ ಅವರ ಹುಟ್ಟುಹಬ್ಬಕ್ಕೆ ಬರುವ ಕಾರ್ಯಕರ್ತರಿಗೆ ಊಟದ ವ್ಯವಸ್ಥೆಗೆ ಶಕ್ತಿಸೌಧದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.
ಇದನ್ನು ಓದಿ : ಸೌಜನ್ಯ ಹತ್ಯೆ ಖಂಡಿಸಿ ತುಮಕೂರಿನಲ್ಲಿ ಆಕ್ರೋಶದ ಕಿಚ್ಚು

ತುಮಕೂರು ಗ್ರಾಮಾಂತರದಲ್ಲಿ ಫ್ಲೆಕ್ಸ್ಗಳ ಮಹಾಪೂರ
ನಾಳೆ ಸುರೇಶ್ ಗೌಡ ಅವರ ಹುಟ್ಟುಹಬ್ಬ ಇರೋದ್ರಿಂದ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಲ್ಲೆಲ್ಲೂ ಸುರೇಶ್ ಗೌಡ ಅವರಿಗೆ ಶುಭಕೋರುವ ಫ್ಲೆಕ್ಸ್ಗಳನ್ನು ಹಾಕಲಾಗಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.
ಮೂರು ಬಾರಿ ಶಾಸಕರಾಗಿರೋ ಸುರೇಶ್ ಗೌಡ ಅವರು ಸದಾ ಜನರಿಗಾಗಿಯೇ ತಮ್ಮ ಜೀವನವನ್ನು ಮುಡಿಪಿಟ್ಟಿ ದ್ದಾರೆ. ಸದಾ ನಗುಮೊಗದಿಂದಲೇ ತಮ್ಮ ಕ್ಷೇತ್ರದ ಜನರಿಗಾಗಿ ದುಡಿಯುತ್ತಿದ್ದು ಜನರಿಗಾಗಿ ಮತ್ತಷ್ಟು ಕೆಲಸ ಮಾಡುವಂತಾಗಲಿ ಎಂಬುದು ಜನರ ಹಾಗೂ ಪ್ರಜಾಶಕ್ತಿ ಟಿವಿಯ ಆಶಯವಾಗಿದೆ.




