Tumakuru News : ತುಮಕೂರು ಯಲ್ಲಾಪುರದಲ್ಲಿ ಫುಟ್ಬಾತ್ ಕಟೌಸ್ ಸಮಸ್ಯೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದೆ. ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tumakuru News : ಯಲ್ಲಾಪುರದಲ್ಲಿ ಫುಟ್ಬಾತ್ ಕಟೌಸ್ ಸಾರ್ವಜನಿಕರ ಆಕ್ರೋಶ
ಇಡೀ ನಗರದಲ್ಲಿ ಸಮಸ್ಯೆಗಳು ಹೆಚ್ಚಾಗಿವೆ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಳೆಯುತ್ತಿರುವ ನಗರ, “2ನೇ ಬೆಂಗಳೂರು” ಎಂಬ ಖ್ಯಾತಿ ಪಡೆದಿದ್ದರೂ, ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಲವಾರು ಸಮಸ್ಯೆಗಳು ಇಡೀ ನಗರವನ್ನೇ ಆವರಿಸಿವೆ. ಇತ್ತ ಪೋಲಿಕೆಯವರು ಮಹಾನಗರ ಪಾಲಿಕೆಯನ್ನು ವಿಸ್ತರಿಸಲು ತೀರ್ಮಾನಿಸಿದ್ದು, ನಗರದ ಸ್ವಚ್ಛತೆಗೇ ಸಮಸ್ಯೆಯಾಗಿದೆ.
MUST READ : Tumakuru News : ಗೋಡೆಕೆರೆ ಗ್ರಾಮದಲ್ಲಿ ಸಾರಿಗೆ ಸೌಲಭ್ಯವಿಲ್ಲದೆ ಜನ ಪರದಾಟ
ಯಲ್ಲಾಪುರದಲ್ಲಿ ಫುಟ್ಬಾತ್ ಇಲ್ಲದಂತೆ
ತುಮಕೂರಿನ ವಾರ್ಡ್ ನಂಬರ್ 2, ಯಲ್ಲಾಪುರದಲ್ಲಿ ಫುಟ್ಬಾತ್ ಇದ್ದರೂ ಇಲ್ಲದಂತಾಗಿದೆ. ಪ್ರತಿನಿತ್ಯ ಓಡಾಡುವ ಜನರಿಗೆ ತೊಂದರೆ ಉಂಟುಮಾಡುತ್ತಿದೆ. ಅಂತರಸನಹಳ್ಳಿಯಿಂದ ಯಲ್ಲಾಪುರ ಬಸ್ ನಿಲ್ದಾಣಕ್ಕೆ ಸಂಪರ್ಕಿಸುವ ಫುಟ್ಬಾತ್ ಬಳಿ ಗಿಡ-ಗಂಟೆಗಳು ಹೆಚ್ಚಾಗಿದ್ದು, ಸಾರ್ವಜನಿಕರು ಕಸ ಎಸೆದು ತೊಂದರೆ ನಿವಾರಣೆಗೆ ಪ್ರಯತ್ನಿಸುತ್ತಿದ್ದಾರೆ.
ಸಾರ್ವಜನಿಕರ ಆಕ್ರೋಶ
ಸುಮಾರು ಒಂದು ವರ್ಷದಿಂದ ಫುಟ್ಬಾತ್ ಸಮಸ್ಯೆ ಇದೇ ರೀತಿ ಇರುತ್ತಿದ್ದು, ಪಾಲಿಕೆ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಸ್ವಚ್ಛತೆಗಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾದಚಾರಿಗಳು ಓಡಾಡಲು ಭಯಪಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
WATCH NOW : YALLAPURA | ಪಾದಚಾರಿ ರಸ್ತೆಯಿಲ್ಲ! ಜನರ ಪರದಾಟಕ್ಕೆ ಕಾರಣವಾದ ಪಾಲಿಕೆ ವಿರುದ್ಧ ರೊಚ್ಚಿಗೆದ್ದ ಸಾರ್ವಜನಿಕರು!




