Metro Ticket Price : ಬೆಂಗಳೂರು ನಗರದಲ್ಲಿ ಮೆಟ್ರೋ ಟಿಕೆಟ್ ದರಗಳಲ್ಲಿ ಏರಿಕೆ ಕಂಡುಬಂದಿದೆ.

ಬೆಂಗಳೂರು ನಗರದಲ್ಲಿ ಮೆಟ್ರೋ ಟಿಕೆಟ್ ದರಗಳಲ್ಲಿ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬಿಎಂಆರ್ಎಸಿಎಲ್ (BMRCL) ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಈ ಕುರಿತು ಬಿಎಂಆರ್ಎಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜೆ.ರವಿಶಂಕರ್ ಅವರಿಗೆ ಖಾಸಗಿ ಪತ್ರವೊಂದನ್ನು ಬರೆದಿದ್ದಾರೆ.
“ಹೈಸ್ಕೂಲ್ ಮಕ್ಕಳೂ ಇಂತಹ ಲೆಕ್ಕಾಚಾರ ಮಾಡುತ್ತಿಲ್ಲ” – ತೇಜಸ್ವಿ ಸೂರ್ಯ ಟೀಕೆ
ತೇಜಸ್ವಿ ಸೂರ್ಯ ತಮ್ಮ ಪತ್ರದಲ್ಲಿ, ಮೆಟ್ರೋ ದರ ಪರಿಷ್ಕರಣೆಯಲ್ಲಿ ಆಗಿರುವ ಲೆಕ್ಕದ ತಪ್ಪುಗಳನ್ನು ಗಂಭೀರವಾಗಿ ಖಂಡಿಸಿದ್ದಾರೆ. “ಹೈಸ್ಕೂಲ್ ವಿದ್ಯಾರ್ಥಿಗಳೂ ಇಷ್ಟು ಕಚ್ಚಾ ಲೆಕ್ಕ ಮಾಡಲ್ಲ” ಎಂದು ಬಿಎಂಆರ್ಎಸಿಎಲ್ಗೆ ತೀವ್ರ ವ್ಯಂಗ್ಯವಾಡಿದ್ದಾರೆ.
FFC ಶಿಫಾರಸು ಮರೆತ ಬಿಎಂಆರ್ಎಸಿಎಲ್?
ಹೈಕೋರ್ಟ್ ನಿರ್ದೇಶನದಂತೆ ಬಿಎಂಆರ್ಎಸಿಎಲ್ ದರ ನಿಗದಿ ಸಮಿತಿಯ (Fare Fixation Committee – FFC) ವರದಿ ಬಿಡುಗಡೆ ಮಾಡಿದ್ದರೂ, ಅದರ ಶಿಫಾರಸುಗಳ ಪ್ರಕಾರ ದರ ಪರಿಷ್ಕರಣೆ ಮಾಡಲಾಗಿಲ್ಲ ಎಂಬುದು ಸಂಸದರ ಆಕ್ಷೇಪ.
ತೇಜಸ್ವಿ ಸೂರ್ಯ ಹೇಳುವ ಪ್ರಕಾರ,
- ಬಿಎಂಆರ್ಎಸಿಎಲ್ ಶೇ. 105% ದರ ಏರಿಕೆ ಮಾಡಿದ್ದು ಅಸಮಂಜಸವಾಗಿದೆ.
- ಸರಿಯಾದ ಲೆಕ್ಕಾಚಾರದ ಪ್ರಕಾರ ಇದು ಶೇ. 50-55% ಮಿತಿ ಒಳಗಿರಬೇಕಿತ್ತು.
ಇದನ್ನು ಓದಿ : VEERENDRA PUPPY ವಿರುದ್ಧ ಅಕ್ರಮ ONLINE ಬೆಟ್ಟಿಂಗ್ ಕೇಸ್ | ಚಳ್ಳಕೆರೆಯ ಹಲವೆಡೆ ED ದಾಳಿ

ಆಡಳಿತ ವೆಚ್ಚದಲ್ಲಿ ಸಹ ಅತಿರೇಕ?
ಅದಕ್ಕೂ ಮಿಕ್ಕಿ, ಬಿಎಂಆರ್ಎಸಿಎಲ್ ತನ್ನ ನಿರ್ವಹಣೆ ಮತ್ತು ಆಡಳಿತ ವೆಚ್ಚವನ್ನು ಶೇ. 118.5 ಎಂದು ತೋರಿಸಿದರೂ, ವಾಸ್ತವದಲ್ಲಿ ಅದನ್ನು ಶೇ. 366 ರಷ್ಟು ಎತ್ತಿ ತೋರಿಸಿದೆ ಎಂಬ ಆರೋಪವಿದೆ. ಈ ರೀತಿಯ ಲೆಕ್ಕದ ತಪ್ಪುಗಳು, ಜನಸಾಮಾನ್ಯರ ಮೇಲಿನ ಬೋಜನ್ನು ಹೆಚ್ಚಿಸುತ್ತವೆ ಎಂದು ತೇಜಸ್ವಿ ಸೂರ್ಯ ಎಚ್ಚರಿಸಿದ್ದಾರೆ.
“ಪ್ರಯಾಣಿಕರ ಬಾಧೆ ಕಡಿಮೆ ಮಾಡಿ”
ಫೆಬ್ರವರಿ 2025ರ ದರ ಏರಿಕೆಯ ಬಳಿಕವೇ ಪ್ರಯಾಣಿಕರು ಈಗಾಗಲೇ ಹೆಚ್ಚು ಬಾಧೆ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮತ್ತಷ್ಟು ಭಾರವಾದ ದರ ಏರಿಕೆ ಅನ್ಯಾಯಕರ ವಾಗಿದೆ ಎಂದು ತೇಜಸ್ವಿ ಸೂರ್ಯ ಅಭಿಪ್ರಾಯ ಪಟ್ಟಿದ್ದಾರೆ. ಬಿಎಂಆರ್ಎಸಿಎಲ್ ಈ ದೋಷಗಳನ್ನು ತಕ್ಷಣ ಸರಿಪಡಿಸಿ, ಸಾರ್ವಜನಿಕರ ಮೇಲಿನ ಹಣಕಾಸಿನ ಹೊರೆ ಕಡಿಮೆ ಮಾಡಲು ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇದನ್ನು ನೋಡಿ : ತುಮಕೂರಿನಲ್ಲಿ ಜನರ ಆಕ್ರೋಶ – ಭುಗಿಲೆದ್ದ ಪ್ರತಿಭಟನೆ!





