Hasanamba Temple Open 2025 : ಹಾಸನದ ಪ್ರಸಿದ್ಧ ಹಾಸನಾಂಬೆ ದೇಗುಲದ ಬಾಗಿಲು ಇಂದು ತರೆಯಲಾಗಿದೆ.

ಹಾಸನಾಂಬೆ ದೇವಿಯ ದರ್ಶನ ಆರಂಭ
ಹಾಸನದ ಪ್ರಸಿದ್ಧ ಹಾಸನಾಂಬೆ ದೇವಾಲಯದ ಬಾಗಿಲು ಅ.9ರಂದು ತೆರೆಯಲಾಗಿದೆ. ದೇವಿ ದರ್ಶನ ವರ್ಷದಲ್ಲಿ ಒಂದೇ ಬಾರಿ, 14 ದಿನಗಳ ಕಾಲ ಸಿಗುತ್ತದೆ. ಈ ವರ್ಷ ಅ.9ರಿಂದ ಅ.23ರವರೆಗೆ ದೇವಾಲಯ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ.
ವರ್ಷಕ್ಕೊಮ್ಮೆ ತಾಯಿಯ ದರ್ಶನ
ಹಾಸನಾಂಬೆ ದೇವಿ ವರ್ಷದಲ್ಲಿ ಕೇವಲ 14 ದಿನ ಮಾತ್ರ ಭಕ್ತರಿಗೆ ದರ್ಶನ ನೀಡುತ್ತಾರೆ ಎಂಬ ಸಂಪ್ರದಾಯ ಹಿನ್ನೆಲೆ, ಲಕ್ಷಾಂತರ ಭಕ್ತರು ತಾಯಿಯ ದರ್ಶನಕ್ಕಾಗಿ ಹಾಸನಕ್ಕೆ ಆಗಮಿಸುತ್ತಿದ್ದಾರೆ. ದೇವಿಯ ಗರ್ಭಗುಡಿ ತೆರೆದಿರುವ ಈ ಅವಧಿಯಲ್ಲಿ, ದೇವಸ್ಥಾನದ ಸುತ್ತಮುತ್ತ ಭಕ್ತರ ನಂಬಿಕೆಯಿಂದ ತುಂಬಿರುತ್ತದೆ.
ಇಂದು ಮತ್ತು ಅ.23ರಂದು ದರ್ಶನ ಅವಕಾಶವಿಲ್ಲ
ಪದ್ಧತಿಯಂತೆ, ಅ.9 (ಇಂದು) ಮತ್ತು ಅ.23 ರಂದು ಸಾರ್ವಜನಿಕರಿಗೆ ದರ್ಶನವಿರುವಿದಿಲ್ಲ. ಈ ದಿನಗಳಲ್ಲಿ ದೇವಿಗೆ ವಿಶೇಷ ಪೂಜಾ ವಿಧಾನಗಳು ನಡೆಯುತ್ತವೆ. ಆದ್ದರಿಂದ ಗರ್ಭಗುಡಿ ಭಕ್ತರಿಗೆ ತೆರೆಯಲಾಗುವುದಿಲ್ಲ.
ಇದನ್ನು ನೋಡಿ : HASANAMBA TEMPLE OPEN : ಈ ವಾರ ಭಕ್ತರಿಗೆ ದರ್ಶನ ನೀಡಲಿರುವ ಹಾಸನಾಂಬೆ

ರಾತ್ರಿಯಿಂದಲೇ ಆರಂಭಗೊಂಡ ವಿಶೇಷ ಪೂಜೆ
ಹಾಸನಾಂಬೆ ದೇಗುಲದಲ್ಲಿ ರಾತ್ರಿಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಬೆಳಗಿನ ಜಾವದವರೆಗೆ ಜಪ, ಹೋಮ, ಅಭಿಷೇಕ ಮುಂತಾದ ವಿಧಿಗಳು ನಡೆದಿವೆ. ಮಧ್ಯಾಹ್ನ 12ರಿಂದ 12.30ರ ಒಳಗೆ ಗರ್ಭಗುಡಿಯ ಬಾಗಿಲು ತೆರೆಯಲಾಗುವುದು.
ದೇವಿಯ ವಸ್ತ್ರ ಶುದ್ಧೀಕರಣ
ಹಾಸನದ ಹುಣಸಿನಕೆರೆಯಲ್ಲಿ ಮಡಿವಾಳ ಸಮುದಾಯದವರು ದೇವಿಯ ವಸ್ತ್ರಗಳ ಶುದ್ಧೀಕರಣ ಮಾಡಿದ್ದಾರೆ. ಈ ವಸ್ತ್ರಗಳನ್ನು ನಂತರ ಹಾಸನಾಂಬೆ ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ್ ಅವರ ನೇತೃತ್ವದ ತಂಡ ದೇವಿಗೆ ಅಲಂಕರಿಸಿದೆ.
ಸರ್ವಾಲಂಕಾರಭೂಷಿತ ದೇವಿಗೆ ದರ್ಶನಕ್ಕೆ ಭಕ್ತರು ಸಜ್ಜು
ವಿಶೇಷ ಅಲಂಕಾರ ಮತ್ತು ಶುದ್ಧ ಪೂಜಾ ವಿಧಾನಗಳ ನಂತರ ದೇವಿಯು ಸರ್ವಾಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡಲು ಸಜ್ಜಾಗಿದ್ದಾರೆ. ಭಕ್ತರು ಕಣ್ತುಂಬಿಕೊಳ್ಳುವಂತಹ ಈ ದೃಶ್ಯಕ್ಕೆ ಸಾಕ್ಷಿಯಾಗಲು ಸಾವಿರಾರು ಜನರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.
ಇದನ್ನು ನೋಡಿ : ಶಿಕ್ಷಕರಿಗೆ S.R.ಶ್ರೀನಿವಾಸ್ ಖಡಕ್ ಎಚ್ಚರಿಕೆ ಶಾಸಕರ ಪ್ರಶ್ನೆಗಳಿಗೆ ಮಾಸ್ಟರ್ಸ್ ಶೇಕ್





