HASANAMBA TEMPLE OPEN
ಸಾಮಾನ್ಯವಾಗಿ ಕೆಲವೊಂದು ಊರುಗಳಿಗೆ ದೇವರ ಹಿನ್ನೆಲೆಯಲ್ಲಿ ಬಂದಿರುವಂತಹ ಹೆಸರುಗಳಿವೆ. ಇಂತಹ ಸಾಲಿನಲ್ಲಿ ಸೇರುವ ಊರು ಹಾಸನ , ಈ ನಗರಕ್ಕೆ ಹಾಸನಾಂಬೆ ಯಿಂದಲೇ ಬಂದ ಹೆಸರಿದು. ಹಿಂದೆ ಹಾಸನಕ್ಕೆ ಸಿಂಹಾಸನಪುರಿ ಎಂಬ ಹೆಸರಿತ್ತು. ಕಾಲಾನಂತರದಲ್ಲಿ ಹಾಸನ ಎಂದಾಗಿದೆ. ಶಕ್ತಿಮಾತೆಯ ಸ್ವರೂಪವಾಗಿಯುವ HASANAMBE ಕ್ಷೇತ್ರದ ವಿಶೇಷತೆ ಎಂದರೆ ಈ ತಾಯಿಯು ವರ್ಷಕ್ಕೊಮ್ಮೆ ದೀಪಾವಳಿಯ ಸಂದರ್ಭದಲ್ಲಿ ತೆರೆಯುತ್ತದೆ.
ವರ್ಷಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಪವಿತ್ರ ಕ್ಷೇತ್ರ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ (HASANAMBA TEMPLE OPEN) ದಿನಗಣನೆ ಆರಂಭವಾಗಿದೆ. ಅ.9 ರಂದು ಮಧ್ಯಾಹ್ನ 12 ಗಂಟೆ ನಂತರ ಆಶ್ವೀಜ ಮಾಸದ ಮೊದಲ ಗುರುವಾರ, ಶಾಸ್ತ್ರೋಕ್ತವಾಗಿ ದೇವಾಲಯದ ಬಾಗಿಲು ತೆರೆಯಲಿದೆ. ಪ್ರತಿವರ್ಷದಂತೆ ಈ ವರ್ಷವೂ ಜಾತ್ರೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗಿವೆ.

ದರ್ಶನಕ್ಕೆ 13 ದಿನಗಳ ಅವಕಾಶ
ಅ.9ರಂದು ಗರ್ಭಗುಡಿ ಶುಚಿತ್ವ ಕಾರ್ಯದ ನಿಮಿತ್ತ ಸಾರ್ವಜನಿಕ ಹಾಸನಾಂಬೆಯ ದರ್ಶನ ಇರುವುದಿಲ್ಲ. ಆದರೆ ಅ.10ರಿಂದ ಆರಂಭವಾಗಿ ಅ.22ರ ವರೆಗೆ, 13 ದಿನಗಳ ಕಾಲ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ನಂತರ, ಅ.23 ರಂದು ಬಲಿಪಾಡ್ಯಮಿ ಸಂಪ್ರದಾಯದಂತೆ ಬಾಗಿಲು ಮತ್ತೆ ಮುಚ್ಚಲಾಗುತ್ತದೆ.
ಇದೀಗ ಮೊದಲ ಬಾರಿಗೆ: VIP ಪಾಸ್ಗಳಿಗೆ ಗುಡ್ಬೈ, GOLD PASS ಗೆ ವೆಲ್ಕಂ
ಇನ್ನು ಇದೇ ಮೊದಲ ಬಾರಿಗೆ ಹಾಸನಾಂಬೆ ದರ್ಶನಕ್ಕಿದ್ದ VIP, VVIP PASS ಗಳನ್ನು ರದ್ದುಪಡಿಸಿ ಗೋಲ್ಡ್ ಪಾಸ್ (GOLD PASSA) ವ್ಯವಸ್ಥೆ ಮಾಡುವುದಾಗಿ ಜಿಲ್ಲಾಡಳಿತ ತಿಳಿಸಿದೆ.
ವಾಟ್ಸಾಪ್ ಚಾಟ್ಬಾಟ್: ಭಕ್ತರಿಗೆ ತಂತ್ರಜ್ಞಾನದ ಅನುಭೂತಿ
ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಹಾಸನಾಂಬೆಯ ದರ್ಶನಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ, TICKET BOOKING, ದರ್ಶನ ಸಮಯ, ಇ-ಹುಂಡಿ, ಸರತಿ ಸಾಲಿನ ಸ್ಥಿತಿಗತಿ ಮೊದಲಾದ ಸೇವೆಗಳು ಈಗ ವಾಟ್ಸಾಪ್ ಚಾಟ್ಬಾಟ್ (WhatsApp Chatbot) ಮೂಲಕ ಲಭ್ಯ. ದೇವಾಲಯದ ಆಡಳಿತ ಮಂಡಳಿಯು AI ತಂತ್ರಜ್ಞಾನ ಬಳಸಿಕೊಂಡು ಭಕ್ತರಿಗೆ ಸುಲಭ ಹಾಗೂ ಸುಗಮ ದರ್ಶನ ಅನುಭವ ಒದಗಿಸಲು ಮುಂದಾಗಿದೆ.

ಭದ್ರತೆಗೆ 100+ ಸಿಸಿಟಿವಿ ಕ್ಯಾಮೆರಾ (CC CAMERA)
ನೂಕುನುಗ್ಗಲು, ತಪ್ಪು ಘಟನೆಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ 100 ಕ್ಕೂ ಹೆಚ್ಚು CC TV CAMERA ಗಳನ್ನು ಅಳವಡಿಸಲು ನಿರ್ಧರಿಸಿದೆ.ಇನ್ನು ಸಂಚಾರಿ ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆ, ಪ್ರಸಾದ ವಿತರಣೆ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳು ಸಿದ್ಧಗೊಂಡಿವೆ.
ಮುಖ್ಯಮಂತ್ರಿಗಳ ಭೇಟಿ ಸಾಧ್ಯತೆ
ದಕ್ಷಿಣ ಭಾರತ ವೈಷ್ಣೋದೇವಿ ಎಂದೇ ಹಾಸನಾಂಬೆ ಪ್ರಖ್ಯಾತಿ. ರಾಜ್ಯ ಮಾತ್ರವಲ್ಲ ದೇಶದ ಮೂಲೆ ಮೂಲೆಯಿಂದಲೂ ತಾಯಿ ದರ್ಶನಕ್ಕೆ ಭಕ್ತರು ಆಗಮಿಸುತ್ತಾರೆ. ಇವತ್ತಿನಿಂದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸ ತಯಾರಿ ಇನ್ನಷ್ಟು ಚುರುಕುಗೊಳ್ಳಲಿದ್ದು, ಈ ಬಾರಿ CM ಕೂಡ ಹಾಸನಾಂಬೆ ದರುಶನಕ್ಕೆ ಆಗಮಿಸೋ ಸಾಧ್ಯತೆ ಇದೆ.




