Tumakuru News : ಗುಬ್ಬಿ ಎಸ್ಎಸ್ಎಲ್ಸಿ ಫಲಿತಾಂಶ ಸಭೆಯಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್ ಶಿಕ್ಷಕರಿಗೆ ಎಚ್ಚರಿಕೆ

Tumakuru News : ಗುಬ್ಬಿ ಎಸ್ಎಸ್ಎಲ್ಸಿ ಫಲಿತಾಂಶ ಸಭೆಯಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್ ಶಿಕ್ಷಕರಿಗೆ ಎಚ್ಚರಿಕೆ
ಗುಬ್ಬಿ ತಾಲ್ಲೂಕಿನಲ್ಲಿ ನಡೆದ ಎಸ್ಎಸ್ಎಲ್ಸಿ ಫಲಿತಾಂಶ ಪರಿಶೀಲನಾ ಸಭೆಯಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್ 38% ಫಲಿತಾಂಶ ನೀಡಿದ ಶಾಲಾ ಮುಖ್ಯ ಶಿಕ್ಷಕರಿಗೆ ಸಸ್ಪೆಂಡ್ ಎಚ್ಚರಿಕೆ ನೀಡಿದರು. ತಹಶೀಲ್ದಾರ್ ಆರತಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಸೂಚಿಸಿದರು.
38% ಫಲಿತಾಂಶ – ಶಾಸಕರಿಂದ ಶಿಕ್ಷಕರಿಗೆ ಎಚ್ಚರಿಕೆ
ಗುಬ್ಬಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಎಸ್ಎಸ್ಎಲ್ಸಿ SSLC ಫಲಿತಾಂಶ ಪ್ರಗತಿ ಪರಿಶೀಲನಾ ಸಭೆ ವೇಳೆ ಶಾಸಕ ಎಸ್.ಆರ್. ಶ್ರೀನಿವಾಸ್ SR SRINAVAS ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕೇವಲ 38% ಫಲಿತಾಂಶ ಬಂದಿರುವುದರ ಬಗ್ಗೆ ಗಂಭೀರ ಅಸಮಾಧಾನ ವ್ಯಕ್ತಪಡಿಸಿದರು.
MUST READ: Chikkanayakanahalli Controversy: ಚಿಕ್ಕನಾಯಕನಹಳ್ಳಿಯಲ್ಲಿ ಮಹನೀಯರ ಜಯಂತಿ ವಿವಾದ
ಅವರು ಶಿಕ್ಷಕರಿಗೆ ಸಸ್ಪೆಂಡ್ ಮಾಡುವ ಎಚ್ಚರಿಕೆ ನೀಡುತ್ತಾ,
“ಕ್ಷೇತ್ರ ಶಿಕ್ಷಣಾಧಿಕಾರಿ ನನ್ನ ಕೈಗೆ ಸಿಗೋದಿಲ್ಲ. ಹಾಗಿದ್ದರೆ ಶಿಕ್ಷಕರ ಕೈಗೆ ವಿದ್ಯಾರ್ಥಿಗಳು ಹೇಗೆ ಸಿಗ್ತಾರೆ?”
ಎಂದು ತರಾಟೆಗೆ ತೆಗೆದುಕೊಂಡರು.
ತಹಶೀಲ್ದಾರ್ ಆರತಿ – ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಆರತಿ ಬಿ. ARATHI .Bಅವರು, ವಿದ್ಯಾರ್ಥಿಗಳ ಕನಿಷ್ಠ ಅಂಕಗಳಿಗೆ ಪ್ರಾಮುಖ್ಯತೆ ನೀಡಬೇಕು ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯವಾಗಬೇಕು ಎಂದು ಸೂಚಿಸಿದರು.
“ಸರ್ಕಾರದ ನಿಯಮಾನುಸಾರ ಬೋಧನೆ ಮಾಡಿದಷ್ಟೇ ಸಾಲದು. ನಿಮಗೆ ನಿಮ್ಮದೇ ಆದ ಯೋಜನೆಗಳು ಬೇಕು,”
ಎಂದು ಅವರು ಶಿಕ್ಷಕರಿಗೆ ತಿಳಿಸಿದರು.
Tumakuru News : ಉಪಪ್ರಾಂಶುಪಾಲರ ನಿರ್ಲಕ್ಷ್ಯಕ್ಕೆ ಗರಂ ಆದ ತಹಶೀಲ್ದಾರ್
ಗುಬ್ಬಿ ಜೂನಿಯರ್ ಕಾಲೇಜಿನ ಉಪಪ್ರಾಂಶುಪಾಲರು ರಾಷ್ಟ್ರೀಯ ಹಬ್ಬಗಳಿಗೂ ಭಾಗವಹಿಸದೆ, ಸಮಯಕ್ಕೆ ಬರದೇ, ಬೇಜವಾಬ್ದಾರಿ ತೋರಿಸುತ್ತಿದ್ದಾರೆ ಎಂದು ತಹಶೀಲ್ದಾರ್ ಆರತಿ ಗರಂ ಆದರು.
ಈ ಬಗ್ಗೆ ಅವರು ಶಾಸಕರಿಗೂ ಮಾಹಿತಿ ನೀಡಿದರು.
ಸಭೆಗೆ ತಾಲ್ಲೂಕಿನ ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ಹಾಜರು
ಗುಬ್ಬಿ ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಈ ಸಭೆಯಲ್ಲಿ ಭಾಗವಹಿಸಿ, ಮುಂದಿನ ದಿನಗಳಲ್ಲಿ ಫಲಿತಾಂಶವನ್ನು ಸುಧಾರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
MUST WATCH : CAUGHT RED HANDED | STING OPERATIONನಲ್ಲಿ ಬಯಲಾದ ಅಕ್ರಮ ಮದ್ಯ ದಂಧೆ | PRAJASHAKTHI STING |




