Tumakuru News :ತುಮಕೂರಿನ ಕುಣಿಗಲ್ kunigal ರಸ್ತೆ ಸದಾಶಿವ ನಗರ 5ನೇ ಮುಖ್ಯರಸ್ತೆ ಬಳಿ 30 ದಿನಗಳಿಂದ UGD ನೀರು ಹರಿಯುತ್ತಿದೆ. ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರು ಪಾಲಿಕೆಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tumakuru News : ತುಮಕೂರು ಸ್ಮಾರ್ಟ್ ಸಿಟಿ smart city ಅಂತಾ ಕರೆಸಿಕೊಳ್ತಾ ಇದ್ರೂ ಇತ್ತೀಚೆಗೆ ಅನೇಕ ಸಮಸ್ಯೆಗಳಿಂದ ಗಾರ್ಬೇಜ್ ಸಿಟಿಯಾಗಿ ಬದಲಾಗ್ತಿದೆ. ನಗರಾದ್ಯಂತ ಗುಂಡಿಬಿದ್ದಿರು ರಸ್ತೆಗಳು, ಎಲ್ಲೆಂದರಲ್ಲಿ ಕಸದ ರಾಶಿ. ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುವಂತಾಗಿದೆ. ಈ ಕುರಿತಾಗಿ ನಿಮ್ಮ ಪ್ರಜಾಶಕ್ತಿ ಟಿವಿ ವರದಿಯನ್ನು ಬಿತ್ತರಿಸುತ್ತಿದ್ದು, ಅದ್ಯಾಕೋ ಅಧಿಕಾರಿಗಳು ಸಮಸ್ಯೆಗಳತ್ತ ಗಮನಹರಿಸದೆ ಜಾಣ ಕುರುಡುತನ ತೋರುತ್ತಿದ್ದಾರೆ. ಇತ್ತ ತುಮಕೂರಿನ ಕುಣಿಗಲ್ ರಸ್ತೆ ಸದಾಶಿವ ನಗರ 5ನೇ ಮುಖ್ಯರಸ್ತೆ ಬಳಿ ಕಳೆದ 30 ದಿನಗಳಿಂದ ರಸ್ತೆ ತುಂಬಾ ಯುಜಿಡಿ ನೀರು ಹರಿಯುತ್ತಿದ್ದು , ಸಾರ್ವಜನಿಕರು ಹಾಗೂ ರಸ್ತೆ ಪಕ್ಕದ ಅಂಗಡಿಯವರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ತುಮಕೂರು ಕುಣಿಗಲ್ ರಸ್ತೆಯಲ್ಲಿ 30 ದಿನಗಳಿಂದ UGD ನೀರು ಹರಿವುದರಿಂದ ಸಾರ್ವಜನಿಕರ ಕಷ್ಟ
ತುಮಕೂರು smart city ಸ್ಮಾರ್ಟ್ ಸಿಟಿಯಾಗಿದ್ದರೂ, ಇತ್ತೀಚೆಗೆ ಅನೇಕ ಸಮಸ್ಯೆಗಳಿಂದ ನಗರ “ಗಾರ್ಬೇಜ್ ಸಿಟಿ” Garbage City ಯಾಗಿ ಬದಲಾಗುತ್ತಿದೆ. ಗುಂಡಿಬಿದ್ದಿರು ರಸ್ತೆಗಳು, ಎಲ್ಲೆಂದೆ ಕಸದ ರಾಶಿ, ಸ್ವಚ್ಛತೆ ಇಲ್ಲದ ಪರಿಸರದಿಂದ ಸಾರ್ವಜನಿಕರು ಗಬ್ಬೆದ್ದು ನಾರುವಂತಾಗಿದ್ದಾರೆ.
ಇದನ್ನೂ ಓದಿ: Hosuru Land Dispute: ಹೊಸೂರು ಗ್ರಾಮದ 3 ಅಡಿ ಜಾಗಕ್ಕಾಗಿ ಕುಟುಂಬ ಜಗಳ
Tumakuru News :Kunigal ರಸ್ತೆ UGD ಸಮಸ್ಯೆ ಮತ್ತು ಪರಿಣಾಮಗಳು
ಕಳೆದ 30 ದಿನಗಳಿಂದ, ಕುಣಿಗಲ್ kunigal ರಸ್ತೆ ಸದಾಶಿವ sadashivanagara ನಗರ 5ನೇ ಮುಖ್ಯರಸ್ತೆ ಬಳಿ ಯುಜಿಡಿ UGD ನೀರು ನದಿಯಂತೆ ಹರಿಯುತ್ತಿದೆ. ಸಾರ್ವಜನಿಕರು ಹಾಗೂ ರಸ್ತೆ ಪಕ್ಕದ ಅಂಗಡಿಯವರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿಯಾಗಿದೆ. ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ.
ಅಂಗಡಿ ಮಾಲೀಕರು ಅಭಿಪ್ರಾಯಪಟ್ಟಿದ್ದಾರೆ:
- “ಈ ರಸ್ತೆಯಲ್ಲಿ ಹೆಚ್ಚಿಗೆ ನೀರು ಹರಿಯುತ್ತಿದ್ದು, ಅಂಗಡಿಗೆ ಬರೋದಕ್ಕೂ ಆಗುತ್ತಿಲ್ಲ.”
- “ನೀರು ಹರಿದು ಪಾಚಿ ಕಟ್ಟಿದೆ, ಪಾಲಿಕೆಯವರು ಬಂದು ಸ್ವಚ್ಛ ಮಾಡುತ್ತೇವೆ ಎಂದು 30 ದಿನಗಳಿಂದ ಸುಳ್ಳು ಹೇಳುತ್ತಿದ್ದಾರೆ.”
ಸಾರ್ವಜನಿಕರ ಆಕ್ರೋಶ
ಸಾರ್ವಜನಿಕರು ಮಾತನಾಡಿ ಪಾಲಿಕೆಯವರು tumakuru maha nagara palike ನಗರದಲ್ಲಿ ಸಮಸ್ಯೆ ಇದ್ರೆ ಕರೆ ಮಾಡಿ ಬಂದು ಬಗೆಹರಿಸುತ್ತೇವೆ ಎಂದು ಹೇಳುತ್ತಾರೆ, ಆದರೆ ನಮ್ಮ ಕಡೆ ಬಂದು ಸ್ವಚ್ಛ ಮಾಡುವ ಕೆಲಸ ಮಾಡ್ತಿಲ್ಲ ಎಂದು ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದರು ಇಲ್ಲಿ ಹೆಚ್ಚಿಗೆ ನೀರು ಹರಿಯುತ್ತಿದ್ದು, ಅಂಗಡಿಗೆ ಬರೋದಕ್ಕೂ ಆಗ್ತಿಲ್ಲ. ನೀರು ಹರಿದು ಹರಿದು ಪಾಚಿ ಕಟ್ಟಿದೆ. ಪಾಲಿಕೆಯವರು ನಗರದಲ್ಲಿ ಸಮಸ್ಯೆ ಇದ್ರೆ ಕಾಲ್ ಮಾಡಿ ಬಂದು ಬಗೆಹರಿಸುತ್ತೇವೆ ಎಂದು ಹೇಳುತ್ತಾರೆ. ಆದರೆ, ಕುಣಿಗಲ್ kunigal ರಸ್ತೆಯಲ್ಲಿ ನದಿಯಂತೆ ಹರಿಯುತ್ತಿರುವ ಯುಜಿಡಿ ನೀರಿನ ಬಗ್ಗೆ ಪಾಲಿಕೆಯವರಿಗೆ ಕರೆ ಮಾಡಿದ್ರೆ ಬರ್ತೀವಿ, ಕ್ಲೀನ್ clean ಮಾಡ್ತಿವಿ ಅಂತ 30 ದಿನದಿಂದ ಸುಳ್ಳು ಹೇಳ್ತಿದ್ದಾರೆ ಎಂದು ಬೇಸರ ಹೊರಹಾಕಿದ್ರು.
ಮುಂದಿನ ಕ್ರಮಗಳು ಮತ್ತು ನಿರೀಕ್ಷೆಗಳು
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸಮಸ್ಯೆಯನ್ನ ಬಗೆಹರಿಸುತ್ತಾರಾ, ಇಲ್ವಾ ಅನ್ನೋದನ್ನ ಕಾದು ನೋಡಬೇಕಿದೆ .
MUST WATCH :ರಾಜ್ಯಾದ್ಯಂತ ಸಮೀಕ್ಷೆ ಅವಧಿ ವಿಸ್ತರಣೆ- ತಪ್ಪುತ್ತಿಲ್ಲ ಜಾತಿ ಜನಗಣತಿ ಸಮೀಕ್ಷೆ ಗೊಂದಲ




