Hassan Protest News – ಅಟ್ರಾಸಿಟಿ ಪ್ರಕರಣಗಳ ವಿರುದ್ಧ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

Hassan protest news – ಅಟ್ರಾಸಿಟಿ ಪ್ರಕರಣಗಳ ವಿರುದ್ಧ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಕಾರಣ ಪೊಲೀಸರೊಂದಿಗೆ ವಾಗ್ವಾದ ಉಂಟಾಗಿ, ಸಂತೋಷ್ ಹಾಗೂ ಕಾರ್ಯಕರ್ತರನ್ನು ಬಂಧಿಸಲಾಯಿತು.
Hassan protest ಅಟ್ರಾಸಿಟಿ ಪ್ರಕರಣಗಳ ವಿರುದ್ಧ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಪ್ರತಿಭಟನೆ
ಈ Hassan protest ಗೆ ಪೊಲೀಸರ ಅನುಮತಿ ಇರಲಿಲ್ಲ. ಜೊತೆಗೆ ಶೀಘ್ರದಲ್ಲೇ ಹಾಸನಾಂಬೆ ಉತ್ಸವ ಆರಂಭವಾಗುತ್ತಿದ್ದರಿಂದ, ಪೊಲೀಸರು ಸಾಮೂಹಿಕ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದರು.
ಆದರೆ, ಸಂತೋಷ್ ಮತ್ತು ಪೊಲೀಸರ ನಡುವೆ ವಾಗ್ವಾದ ಮತ್ತು ಮಾತಿನ ಚಕಮಕಿ ಉಂಟಾಗಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಯಿತು.ಬಳಿಕ ಪೊಲೀಸರು ಸ್ಥಳದಲ್ಲಿದ್ದ ಶಾಮಿಯಾನ ಮತ್ತು ಕುರ್ಚಿಗಳನ್ನು ತೆರವುಗೊಳಿಸಿದರು.
Hassan protest ಬಂಧನಕ್ಕೂ ಮುನ್ನ ಸಂತೋಷ್ ಅವರ ಆಕ್ರೋಶ
ಪೋಲೀಸರ ಕ್ರಮಕ್ಕೆ ಆಕ್ರೋಶಗೊಂಡ ಎನ್.ಆರ್. ಸಂತೋಷ್ ಹಾಗೂ ಕಾರ್ಯಕರ್ತರು, ಬಿಸಿಲ ಮಧ್ಯೆಯೇ ಧರಣಿ ಮುಂದುವರಿಸಿದರು.
DYSP ಬಿ.ಆರ್. ಗೋಪಿ, ಗ್ರಾಮಾಂತರ ಠಾಣೆ ಸಿಪಿಐ ಅರುಣ್ ಕುಮಾರ್, ನಗರ ಪಿಎಸ್ಐ ದಿಲೀಪ್ ಸೇರಿದಂತೆ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಣದಲ್ಲಿ ಇಡಲು ಪ್ರಯತ್ನಿಸಿದರು.
ಆದರೆ, ಅನುಮತಿ ಪಡೆಯದೆ ಧರಣಿ ಸತ್ಯಾಗ್ರಹ ನಡೆಸಿದ ಕಾರಣ, ಪೋಲೀಸರು ಎನ್.ಆರ್. ಸಂತೋಷ್ ಹಾಗೂ ಜೆಡಿಎಸ್–ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದರು.
ಇದನ್ನೂ ಓದಿ: Chikkanayakanahalli Road Problem: ಕೆಂಕೆರೆ ಅದಾನಿಕಲ್ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದ ಆರೋಪ
“ಪೊಲೀಸ್ ಕೇಸುಗಳಿಂದ ಜನರ ಸ್ವಾತಂತ್ರ್ಯ ಹರಣ” – ಸಂತೋಷ್ ಆರೋಪ
ಬಂಧನಕ್ಕೂ ಮುನ್ನ ಮಾತನಾಡಿದ ಸಂತೋಷ್ ಹೇಳಿದರು –
“ತಾಲ್ಲೂಕಿನಲ್ಲಿ ಬಡ ಜನರಿಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ. ಸಣ್ಣ ಅಸಮಾಧಾನ ಹೊರ ಹಾಕಿದವರ ಮೇಲೆ ದಲಿತ ದೌರ್ಜನ್ಯ ಕೇಸು ದಾಖಲಿಸುತ್ತಿದ್ದಾರೆ. ರಾಜಕೀಯ ಒತ್ತಡದಿಂದ ಪೊಲೀಸರು ಕೇಸು ಹಾಕುತ್ತಿದ್ದಾರೆ. ಇದು ನಿಲ್ಲಬೇಕು, ಇಲ್ಲದಿದ್ದರೆ ನಾನು ಆಮರಣ ಉಪವಾಸ ಸತ್ಯಾಗ್ರಹ ಮಾಡುತ್ತೇನೆ.ಪೋಲೀಸರು ನನ್ನನ್ನು ಬಂಧಿಸಿ ಜೈಲಿಗೆ ಹಾಕಿದರೂ, ಹೋರಾಟ ನಿಲ್ಲಿಸುವುದಿಲ್ಲ,” ಎಂದು ಸ್ಪಷ್ಟಪಡಿಸಿದರು
ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರಮುಖರು
ಈ Hassan protest news ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್, ಉಮೇಶ್ ಬೋಜನಾಯ್ಕ, ಜಯರಾಮು, ರಮೇಶ್ ನಾಯ್ಡು, ಶಿವನ್ ರಾಜ್, ಚಿದಾನಂದ, ರಘು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
MUST WATCH: TUMAKURU | ಗಂಡ ಸಲ್ಮಾನ್ ಪಾಷ ಮಾಡಿದ ಆರೋಪ ಸುಳ್ಳು- ಪತ್ನಿ ಸೈಯದ್ ನಿಖತ್ ಫರ್ದೋಸ್ ಸ್ಪಷ್ಟನೆ |




