ACCIDENT IN KOLAR : ಮದುವೆಯ ಆರತಕ್ಷತೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ಖಾಸಗಿ ಬಸ್ (Private Bus) ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಪರಿಣಾಮ ಸುಮಾರು 30ಕ್ಕೂ ಹೆಚ್ಚು ಗಾಯಗೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರದಲ್ಲಿ ಖಾಸಗಿ ಬಸ್ ಭೀಕರ ಅಪಾಘಾತ
ಮದುವೆಯ ಆರತಕ್ಷತೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ಖಾಸಗಿ ಬಸ್ (Private Bus) ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಪರಿಣಾಮ ಸುಮಾರು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಈ ಪೈಕಿ 10 ಜನರಿಗೆ ಗಂಭೀರ ಗಾಯಗಳಾಗಿವೆ. ಈ ದಾರುಣ ಘಟನೆ ಕೋಲಾರ ತಾಲ್ಲೂಕಿನ ಸುಗಟೂರು ಗ್ರಾಮದ ಬಳಿ ನೆನ್ನೆ (ಮಂಗಳವಾರ) ಸಂಜೆ ಸಂಭವಿಸಿದೆ.
ಆರತಕ್ಷತೆ ಮುಗಿಸಿ ತೆರಳುತ್ತಿದ ವೇಳೆ ಅಪಘಾತ
ಕೋಲಾರದ ವಧು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ವರನ ಮದುವೆ ಕಾರ್ಯಕ್ರಮ ಕೋಲಾರ ಹೊರವಲಯದ ರತ್ನ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿತ್ತು. ಮದುವೆಗೆ ಬಂದಿದ್ದ ಸಂಬಂಧಿಕರು ಮೂರು ಖಾಸಗಿ ಬಸ್ಗಳಲ್ಲಿ ಆಗಮಿಸಿದ್ದರು. ಆರತಕ್ಷತೆ ಮುಗಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ.

30ಕ್ಕೂ ಹೆಚ್ಚು ಮಂದಿ ಗಾಯ : 10 ಜನರ ಸ್ಥಿತಿ ಗಂಭೀರ
ಅಪಘಾತದ ವೇಳೆ ಬಸ್ಸಿನಲ್ಲಿ ಸುಮಾರು 55 ಜನರು ಪ್ರಯಾಣಿಸುತ್ತಿದ್ದರು. 30ಕ್ಕೂ ಹೆಚ್ಚು ಜನರು ಗಾಯಗೊಂಡಿ ದ್ದು, ಅವರಲ್ಲಿ 10 ಜನರ ಸ್ಥಿತಿ ಗಂಭೀರವಾಗಿದೆ. ಇನ್ನು ಗಾಯಾಳು ಗಳಲ್ಲಿ15 ಮಹಿಳೆಯರು ಸೇರಿದ್ದಾರೆ. ಈ ಭೀಕರ ಅಪಘಾತದಲ್ಲಿ ಬಸ್ ಕಾಲುವೆ ಉರುಳಿದ ಪರಿಣಾಮ ಬಸ್ ನಲ್ಲಿದ್ದ ಜನರೆಲ್ಲರೂ ಬಹುತೇಕ ನೀರಿಗೆ ಬಿದ್ದಿದ್ದಾರೆ, ಬಸ್ ಕಾಲುವೆಗೆ ಬಿದ್ದ ಪರಿಣಾಮ ಪಲ್ಟಿಯಾಗಿದೆ ಬಸ್ ನಲ್ಲಿದ್ದ ಜನರು ಗಾಬರಿಯಾಗಿ ಕಿರುಚಾಡಿದ್ದಾರೆ ಕೂಡಲೇ ಸ್ಥಳೀಯರು ಹಾಗೂ ಬಸ್ ನಲ್ಲಿದ್ದವರೆ ಜನರನ್ನು ರಕ್ಷಣೆ ಮಾಡಿ ಕೂಡಲೆ ಗಾಯಳುಗಳನ್ನು ಕೋಲಾರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.
ಅಪಘಾತದ ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ
ಅಪಘಾತದ ಸ್ಥಳಕ್ಕೆ ತಕ್ಷಣವೇ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮದುವೆ ನಿಮಿತ್ತ ಮಹಿಳೆಯರು ಧರಿಸಿದ್ದ ಚಿನ್ನಾಭರಣಗಳು ಹಾಗೂ ಮೊಬೈಲ್ ಗಳು ನೀರಿನಲ್ಲಿ ಕಳೆದುಹೋದಿರುವ ಮಾಹಿತಿ ಲಭಿಸಿದೆ.
ಈ ಘಟನೆಯ ಪರಿಣಾಮವಾಗಿ ಮದುವೆ ಮನೆಯ ಸಂಭ್ರಮ ಕ್ಷಣಾರ್ಧದಲ್ಲಿ ಕಣ್ಮರೆಯಾಗಿ, ಆತಂಕದ ವಾತಾವರಣವು ನಿರ್ಮಾಣವಾಯಿತು. ಸಂಬಂಧಿಕರು ತಕ್ಷಣವೇ ಆಸ್ಪತ್ರೆಗೆ ದೌಡಾಯಿಸಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಇದನ್ನು ಓದಿ : KOLAR ACCIDENT : TT ಹಾಗೂ BIKE ನಡುವೆ ಮುಖಾಮುಖಿ ಡಿಕ್ಕಿ




