Actor Dulquer Salmaan : ಕೇರಳ ಹಾಗೂ ತಮಿಳುನಾಡಿನಾದ್ಯಂತ ಸುಮಾರು 17 ಕಡೆಗಳಲ್ಲಿ ED ದಾಳಿ ನಡೆಸಿದೆ. ಇದರಲ್ಲಿ ಪ್ರಖ್ಯಾತ ನಟರಾದ ದುಲ್ಕರ್ ಸಲ್ಮಾನ್ ಹಾಗು ಅಮಿತ್ ಚಕ್ಕಲಕಲ್ ಅವರ ಮನೆಗಳೂ ಸೇರಿದ್ದು, ಭಾರೀ ಕುತೂಹಲ ಮೂಡಿಸಿದೆ.

ಖ್ಯಾತ ನಟ ದುಲ್ಕರ್ ಸಲ್ಮಾನ್, (Dulquer Salmaan) ಪೃಥ್ವಿರಾಜ್ ಸುಕುಮಾರನ್ ಹಾಗೂ ಅಮಿತ್ ಚಕ್ಕಲ್ ಮನೆ ಸೇರಿದಂತೆ ಕೇರಳ ಹಾಗೂ ತಮಿಳುನಾಡಿನ ವಿವಿಧ 17 ಸ್ಥಳಗಳಲ್ಲಿ ಇಂದು ಬೆಳಗ್ಗೆ ಇನ್ಫೋರ್ಸ್ಮೆಂಟ್ ನಿರ್ದೇಶನಾಲಯ (ED) ಹಾಗೂ ಕಸ್ಟಮ್ಸ್ ಇಲಾಖೆಯು ಜಂಟಿಯಾಗಿ ದಾಳಿ ನಡೆಸಿದೆ.
ಭೂತಾನ್ ನಂತಹ ದೇಶಗಳಿಂದ ಅಕ್ರಮವಾಗಿ ಐಷಾರಾಮಿ ಕಾರುಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಈ ದಾಳಿ ನಡೆಯಿತು. ಈ ಪ್ರಕರಣದಲ್ಲಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ನೋಡಿ : CHIKKABALLAPURA | ದಾಯಾದಿಗಳ ನಡುವೆ ಗಲಾಟೆ ಆ ಗ್ರಾಮದಲ್ಲಿ ಏನಾಯ್ತು ಗೊತ್ತಾ

ಅಕ್ರಮವಾಗಿ ಆಮದುಗೊಂಡ ಕಾರುಗಳು ವಶಪಡಿಸಿಕೆ
ಈ ವರ್ಷದ ಸೆಪ್ಟೆಂಬರ್ನಲ್ಲಿ ನಡೆದ ದಾಳಿ ನಂತರ, ನಟರು ಸೇರಿದಂತೆ ಇತರ ವ್ಯಕ್ತಿಗಳಿಗೆ ಸೇರಿದ ಸುಮಾರು 40 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಾಹನಗಳ ಪೈಕಿ ದುಲ್ಕರ್ ಸಲ್ಮಾನ್ಗೆ ಸೇರಿದ ಲ್ಯಾಂಡ್ ರೋವರ್ ಡಿಫೆಂಡರ್ ಮತ್ತು ಇನ್ನೊಂದು ನಿಸ್ಸಾನ್ SUV ಪ್ರಮುಖವಾಗಿವೆ.
ನೇರ ಸಂಪರ್ಕ ಶಂಕೆ
ಕಸ್ಟಮ್ಸ್ ಇಲಾಖೆ ಮೂಲಗಳ ಪ್ರಕಾರ, ಈ ಕಾರುಗಳನ್ನು ಅಕ್ರಮ ಮಾರಾಟಗಾರರಿಂದ ಖರೀದಿ ಮಾಡಲಾಗಿದ್ದು, ನಟರು ಹಾಗೂ ಮಾರಾಟಗಾರರ ನಡುವೆ ನೇರ ಸಂಪರ್ಕ ವಿರಬಹುದೆಂಬ ಶಂಕೆಯಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ದಾಳಿಯ ವಿಸ್ತೃತಿ
ಇನ್ನು ಈ ದಾಳಿ ಕೇವಲ ನಟರ ಮನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಕೊಯಮತ್ತೂರಿನ ಉದ್ಯಮಿಗಳು, ಕಾರು ಡೀಲರ್ಗಳು ಹಾಗೂ ಕಳುಹಿಸುವ ಕಂಪನಿಗಳ ಮನೆ, ಕಚೇರಿ ಹಾಗೂ ಶೋರೂಮ್ಗಳ ಮೇಲೂ ಪರಿಶೀಲನೆ ನಡೆಯುತ್ತಿದೆ.
ಇದನ್ನು ಓದಿ : Dulquer Salmaan : ಖ್ಯಾತ ನಟ ದುಲ್ಕರ್ ಸಲ್ಮಾನ್ಗೆ ಸಮನ್ಸ್ ಜಾರಿ




