Tragedy at Markonahalli Dam : ಕುಣಿಗಲ್ ತಾಲೂಕಿನ ಪ್ರಸಿದ್ಧ ಮಾರ್ಕೋನಹಳ್ಳಿ ಡ್ಯಾಂನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಜಲಾಶಯ ವೀಕ್ಷಣೆಗೆ ತೆರಳಿದ್ದ 6 ಮಂದಿ ಜಲಸಮಾಧಿ ಆಗಿದ್ದಾರೆ.

ಮಾರ್ಕೋನಹಳ್ಳಿ ಡ್ಯಾಂನಲ್ಲಿ ಘೋರ ದುರಂತ
ಕುಣಿಗಲ್ ತಾಲೂಕಿನ ಪ್ರಸಿದ್ಧ ಮಾರ್ಕೋನಹಳ್ಳಿ ಡ್ಯಾಂನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಜಲಾಶಯ ವೀಕ್ಷಣೆಗೆ ತೆರಳಿದ್ದ 6 ಮಂದಿ ಜಲಸಮಾಧಿ ಆಗಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಡ್ಯಾಂಗೆ ತುಮಕೂರಿನ ನಿವಾಸಿಗಳು ಕುಣಿಗಲ್ನ ಮಾಗಡಿ ಪಾಳ್ಯ ಗ್ರಾಮದ ಸಂಬಂಧಿಕರ ಮನೆಗೆ ತೆರಳಿದ್ರು, ಮಧ್ಯಾಹ್ದನ ಊಟ ಮುಗಿಸಿಕೊಂಡು ಡ್ಯಾಂ ವೀಕ್ಷಣೆಗೆ ತೆರಳಿದ್ದ ವೇಳೆ ಅವಘಡ ಸಂಭವಿಸಿದೆ.
ಇದನ್ನು ಓದಿ : HD Devegowda : Farmer Prime MinisterHD DeveGowda ಅವರ ಆರೋಗ್ಯದಲ್ಲಿ ಏರುಪೇರು
ಜಲಾಶಯದ ಹಿನ್ನೀರಿನಲ್ಲಿ ಕೊಚ್ಚಿ ಹೋದ 6 ಮಂದಿ
ಇಂದು ಮಧ್ಯಾಹ್ನ ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿಕೊಂಡು ಜಲಾಶಯದ ವೀಕ್ಷಣೆಗೆಂದು ತೆರಳಿದ್ದ ವೇಳೆ, ಜಲಾಶಯದ ಹಿನ್ನಿರಿಗೆ ಇಳಿದಿದ್ರು. ಈ ವೇಳೆ ನೀರು ರಭಸವಾಗಿ ಹರಿಯುತ್ತಿದ್ದು ಆರು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ರೆ, ಮತ್ತೋರ್ವರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ತುಮಕೂರಿನ ಬಿ.ಜಿ ಪಾಳ್ಯದವರು ಎನ್ನಲಾದ ಜಿಯಾ, ಅರ್ಬಿನ್, ತಬಾಸುಮ್ , ಶಬಾನ, ಮಿಫ್ರಾ, ಮಹಿಬ್ ನೀರಿನಲ್ಲಿ ಕೊಚ್ಚಿ ಹೋಗಿದ್ರೆ, ಇವರ ಜೊತೆಗಿದ್ದ ನವಾಜ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
MUST WATCH : ಬರಗೂರಲ್ಲಿ ರಾಜಕೀಯದ ಆಟ – ರಾಜಕೀಯಕ್ಕಾಗಿ ಊರು ಹಾಳು ಮಾಡಿದ್ರು! | NAMMA NADE NEMMOORA KADE CN HALLI |
ಮೃತದೇಹಗಳಿಗಾಗಿ ಶೋಧಕಾರ್ಯ
ಇನ್ನು ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದ್ದು, ನಾಲ್ವರ ಮೃತ ದೇಹಗಳಿಗಾಗಿ ಶೋಧಕಾರ್ಯ ನಡೆಸಲಾಗ್ತಿದೆ. ಸದ್ಯ ಈ ಸಂಬಂಧ ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗ್ತಿದೆ.




