Apartment barrier collapses : ಉಳ್ಳಾಲದಲ್ಲಿ ಅಪಾರ್ಟ್ಮೆಂಟ್ನ ತಡೆಗೋಡೆ ಕುಸಿದು ಬಿದ್ದಿದ್ದು, ಪರಿಣಾಮ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಸೋಮವಾರ ಮುಂಜಾನೆ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು ನಗರದಲ್ಲಿ ಹಲವು ಅಡಚಣೆಗಳು ಉಂಟಾಗಿವೆ. ಉಳ್ಳಾಲದಲ್ಲಿ ಅಪಾರ್ಟ್ಮೆಂಟ್ ತಡೆಗೋಡೆ ಕುಸಿದು ಬಿದ್ದಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಮಕ್ಕಳ ಆಟದ ಸ್ಥಳದ ಹಾನಿ
ಇನ್ನು ಅಪಾರ್ಟ್ಮೆಂಟ್ ತಡೆಗೋಡೆ ಕುಸಿತದ ಪರಿಣಾಮ ಮಕ್ಕಳು ಆಟವಾಡುವ ಪ್ರದೇಶಕ್ಕೆ ಹಾನಿ ಉಂಟುಮಾಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಇನ್ನು ಘಟನೆಯ ನಂತರ ಅಪಾರ್ಟ್ಮೆಂಟ್ ಸಂಕೀರ್ಣಕ್ಕೆ ನೀರು ನುಗ್ಗಿದ್ದು, ಒಂದು ಕಾರು ಹಾನಿಗೊಂಡಿದೆ
Apartment barrier collapses – 24 ಗಂಟೆಗಳಲ್ಲಿ 6.8 ಮಿಮೀ ಮಳೆ
ಇನ್ನು ಭಾನುವಾರ ಬೆಳಿಗ್ಗೆ 8.30 ರಿಂದ ಸೋಮವಾರ ಬೆಳಿಗ್ಗೆ 8.30ರ ತನಕ 24 ಗಂಟೆಗಳಲ್ಲಿ 6.8 ಮಿಮೀ ಮಳೆಯಾಗಿದೆ. ಇದರ ಪರಿಣಾಮವಾಗಿ ಹೆಬ್ಬಾಳದ ಕೆಲವೊಂದು ಭಾಗಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ಇದನ್ನು ನೋಡಿ : ಹಿಂದೂ ಮಹಾಗಣಪತಿ ವಿಸರ್ಜನೋತ್ಸವ ಪಾನಕ ಹಂಚಿದ ಮುಸ್ಲಿಂ ಬಾಂಧವರು | NAGAVALLI TUMKUR |
ಮರ ಬಿದ್ದು ಸಂಚಾರದ ಅಡಚಣೆ
ನಾಗವಾರ ಜಂಕ್ಷನ್ ಬಳಿ ಮರದ ಕೊಂಬೆ ರಸ್ತೆ ಮೇಲೆ ಬಿದ್ದು ಸಂಚಾರಕ್ಕೆ ತೊಂದರೆಯಾ ಯಿತು. ಪೀಣ್ಯದಲ್ಲಿಯೂ ಮರ ಉರುಳಿ ಬಿದ್ದ ಪರಿಣಾಮ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಬಳಿಕ ಸಂಚಾರ ಪೊಲೀಸರು ಬದಲಿ ಮಾರ್ಗಗಳನ್ನು ಬಳಸುವಂತೆ ಸೂಚನೆ ನೀಡಿದರು.
BBMP ಯಿಂದ ಕ್ರಮ
ಇನ್ನೊಂದೆಡೆ, ದುರ್ಬಲ ಮರಗಳು ಮತ್ತು ಕೊಂಬೆಗಳನ್ನು ಗುರುತಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಯ ಅರಣ್ಯ ವಿಭಾಗಕ್ಕೆ ನಿರ್ದೇಶನ ನೀಡಲಾಗಿದ್ದು, ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ (Mahesh Rao) ಈ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : CM SIDDRAMAIAH SUDDENLY INSPECTS ROAD REPAIRS IN BENGALURU : ಬೆಂಗಳೂರಲ್ಲಿ ಸಿದ್ದು ಸಿಟಿ ರೌಂಡ್ಸ್




