
ಹಾಸನ ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಪಟೇಲ್ ಶಿವಪ್ಪ ಅವರನ್ನು ಅರಸೀಕೆರೆ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಪಟೇಲ್ ಶಿವಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ, ಕಳೆದ 40 ವರ್ಷಗಳಿಂದ ಸೇವೆ ಸಲ್ಲಿಸ್ತಾ ಬಂದಿದ್ದೇನೆ. ಯಾವುದೇ ಚ್ಯುತಿ ತರದೇ ಈ ಕೆಲಸವನ್ನ ಮಾಡುತ್ತಿದ್ದೇನೆ. ಗ್ರಾ.ಪಂ ಸದಸ್ಯರಿಂದ ಆಯ್ಕೆಗೊಂಡು ಕೆಪಿಸಿಸಿ ಅಧ್ಯಕ್ಷ, ಕೆಪಿಸಿಸಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಾಸನ ಜಿ. ಪಂಚಾಯತ್ ಸದಸ್ಯರಾಗಿ, ಮೈಸೂರು ಚಿಕ್ಕಮಂಗಳೂರು ಚಾಮರಾಜನಗರ ಹಾಸನ ಜಿಲ್ಲೆಗಳಲ್ಲಿ ಸಹ ಸಕ್ರಿಯವಾಗಿ ಸಂಘಟನೆ ಮಾಡಿದ್ದೇನೆ. ಇದ್ರ ಪ್ರತಿಫಲವಾಗಿ ಪಕ್ಷದ ವರಿಷ್ಠರು ಸೇರಿದಂತೆ ಕಾಂಗ್ರೆಸ್ ಪಕ್ಷ ಗುರುತಿಸಿ ಈ ಹುದ್ದೆಯನ್ನ ನನಗೆ ನೀಡಿದೆ. ಆದ್ರಿಂದ ಈ ಹುದ್ದೆಗೆ ನನ್ನಿಂದ ಚ್ಯುತಿ ಬರದ ರೀತಿಯಲ್ಲಿ ಕಾರ್ಯ ನಿರ್ವಹಿಸ್ತೇನೆ ಎಂದರು.
ಇನ್ನು ಇದೇ ವೇಳೆ ಜನಗಣತಿಯ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಜನಗಣತಿಯ ಬಗ್ಗೆ ಆಸಕ್ತಿ ವಹಿಸಿರುವುದಕ್ಕೆ ಮುಖ್ಯ ಕಾರಣ, ರಾಜ್ಯದ ಜನರ ಆರ್ಥಿಕ, ಸಾಮಾಜಿಕ ಸ್ಥಿತಿಯ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಮುಖ್ಯ ಉದ್ದೇಶದಿಂದ ಈ ಜನಗಣತಿ ನಡೆಸಲಾಗ್ತಿದೆ. ರಾಜ್ಯದಲ್ಲಿ ಬಹುತೇಕ ಶೇಕಡ 80ರಷ್ಟು ಹಿಂದುಳಿದ ವರ್ಗಗಳು ಬಡತನ ರೇಖೆಗಿಂತ ಕೆಳಗಿದ್ದಾರೆ. ಇದರ ಬಗ್ಗೆ ವಿಶೇಷ ಕಾಳಜಿ ವಹಿಸಲು, ಈ ಹಿಂದೆ ಇದ್ದ ದೇವರಾಜ ಅರಸುರವರನ್ನ ಬಿಟ್ರೆ ಸಿದ್ದರಾಮಯ್ಯ ಅವರೇ ಈ ಬಗ್ಗೆ ಚಿಂತನೆ ನಡೆಸ್ತಿರೋದು ಎಂದರು.
ಈ ವೇಳೆ ನಗರಸಭೆ ಅಧ್ಯಕ್ಷರಾದ ಎಂ ಸಮಿಉಲ್ಲಾ ರವರು ಪಟೇಲ್ ಶಿವಪ್ಪರವರಿಗೆ ಸನ್ಮಾನ ಮಾಡುವ ಮೂಲಕ ಶುಭ ಕೋರಿದ್ರು.




