
PAVAGADA NEWS : ರೈತರ ಬದುಕನ್ನು ಹಸನು ಮಾಡಲು ಬಹಳಷ್ಟು ಶ್ರಮಿಸಿದ್ದ ಏಕೈಕ ವ್ಯಕ್ತಿ ಎಂದರೆ ಅದು ನಾಡಪ್ರಭು ಕೆಂಪೇಗೌಡರು ಎಂದು ದೆಹಲಿಯ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಡಾ.ಟಿ.ಬಿ.ಜಯಚಂದ್ರ ಪಾವಗಡದಲ್ಲಿ ತಿಳಿಸಿದ್ರು.
ಪಾವಗಡ ತಾಲೂಕಿನ ಕೇಟಿಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ, ನಾಡಪ್ರಭು ಕೆಂಪೇಗೌಡರ ಪುತ್ತಳಿ ಅನಾವರಣ ಮತ್ತು ಕೆಂಪೇಗೌಡರ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಬೇರೆ ಬೇರೆ ರಾಷ್ಟ್ರಗಳಲ್ಲಿ ಕೆಂಪೇಗೌಡರ ಹೆಸರು ಪ್ರಸಿದ್ಧಿ ಪಡೆಯಲು ಮೂಲ ಕಾರಣ ಬೆಂಗಳೂರು ನಗರವೇ ಕಾರಣ ಎಂದರು. ಸ್ಥಳೀಯ ಶಾಸಕ ಎಚ್.ವಿ.ವೆಂಕಟೇಶ್ ಮಾತನಾಡಿ, ಕೆಂಪೇಗೌಡರು ನಾಡಿಗೆ ಭಗೀರಥ ಆದರೆ, ನಮ್ಮ ಜಿಲ್ಲೆಗೆ ಇಡೀ ಜಯಚಂದ್ರ ಭಗೀರಥ ಇದ್ದ ಹಾಗೆ ಎಂದರು.
ಚಿತ್ರದುರ್ಗ ಸಂಸದ ಗೋವಿಂದ ಎಂ ಕಾರಜೋಳ ಮಾತನಾಡಿ, ಈ ಕಾರ್ಯಕ್ರಮದ ಮಹಿಳೆಯರ ದಂಡು ನೋಡಿ, ಮುಂದಿನ ದಿನಗಳಲ್ಲಿ ಪ್ರಧಾನ ಮಂತ್ರಿ ಮೋದಿಯವರಿಗೆ ಹೇಳಿ, ಹೆಣ್ಣು ಮಕ್ಕಳಿಗೆ ಶೇಕಡಾ 60 ಪರ್ಸೆಂಟ್, ಗಂಡಸರಿಗೆ 40% ಮೀಸಲಾತಿ ನೀಡುವಂತಾಗಬೇಕೆಂಬ ರೀತಿಯಲ್ಲಿ ಹೆಣ್ಣು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ ಎಂದರು.
ಇದೇ ವೇಳೆ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ ಕೆಂಪೇಗೌಡರ ಬಗ್ಗೆ ಮಾತನಾಡಿದ್ರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ತಿಮ್ಮಾರೆಡ್ಡಿ, ತೋಟಗಾರಿಕೆ ಇಲಾಖೆಯ ಕೆ.ಆರ್.ದೇವರಾಜ್ ವನಿದ್ದೇಶ್ವರ. ದಂತ ವೈದ್ಯರಾದ ದೇವರಾಜ್, ಹೈಕೋರ್ಟ್ ವಕೀಲರಾದ ಕೆಪಿಜೆ ಸಿಂಹ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಪುಟ್ಟರಂಗಪ್ಪ, ವಿಎಸ್ಎಸ್ಎನ್ ಕಾರ್ಯದರ್ಶಿ ನಾಗರಾಜ್. ತಿಪ್ಪೇಸ್ವಾಮಿ ಇತರರು ಹಾಜರಿದ್ರು.




