ಶಿರಾ ತಾಲ್ಲೂಕಿನಲ್ಲಿ ವಿಜಯದಶಮಿ 2025 ಅಂಗವಾಗಿ ಆಯುಧ ಪೂಜೆ, ಕೆಎಸ್ಆರ್ಟಿಸಿ ಡಿಪೋ ಸಿಂಗಾರ, ತಹಶೀಲ್ದಾರ್ ಆನಂದ್ ಕುಮಾರ್ ಹಾಗೂ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಹಬ್ಬದ ಸಂಭ್ರಮ.

ನಾಡಿನಾದ್ಯಂತ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಎಲ್ಲೆಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಇತ್ತ ಶಿರಾ ತಾಲೂಕಿನಾದ್ಯಂತ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮನೆ ಹಾಗೂ ಕಚೇರಿಯನ್ನು ಹೂಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಶಕ್ತಿ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಹಾಗೂ ಪಾರ್ವತಿ ದೇವಿಯನ್ನು ಪೂಜೆಸಲಾಗುತ್ತಿದ್ದು, ಯಂತ್ರಗಳು, ವಾಹನಗಳು ಮತ್ತಿತರ ಸಾಧನಗಳನ್ನು ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.
ಶಿರಾ ನಗರದ ಕೆಎಸ್ಆರ್ಟಿಸಿ ಡಿಪೋದಲ್ಲಿ ಆಯುಧ ಪೂಜೆಯ ಸಂಭ್ರಮ ಕಳೆಗಟ್ಟಿದ್ದು, ಕೆಎಸ್ಆರ್ಟಿಸಿ ಬಸ್ಗಳನ್ನು ಸಿಂಗಾರ ಮಾಡಿ, ಪೂಜೆ ಸಲ್ಲಿಸಿ ಬಳಿಕ ಬೂದು ಕುಂಬಳಕಾಯಿಯನ್ನು ಹೊಡೆದು ಪ್ರಾರ್ಥನೆ ಸಲ್ಲಿಸಿದ್ರು. ಈ ವೇಳೆ ಡಿಪೋದಲ್ಲಿದ್ದ ಸಾಕಷ್ಟು ಮಂದಿ ಕೆಎಸ್ಆರ್ಟಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರು ಹಾಗೂ ಡಿಪೋ ಮ್ಯಾನೇಜರ್ ಭಾಗಿಯಾಗಿದ್ರು.
ಇತ್ತ ಶಿರಾ ತಾಲೂಕು ಅಡಳಿತ ಸೌದ ದಲ್ಲಿ ತಹಶಿಲ್ದಾರರ್ ಅನಂದ್ ಕುಮಾರ್ ಅವರ ತಮ್ಮ ಸಿಬ್ಬಂದಿ ವರ್ಗ ಒಂದೆಡೆ ಸೇರಿ ವಿಶೇಷ ಪೂಜೆ ಸಲ್ಲಿಸಿದ್ರೆ, ಮತ್ತೊಂದಡೆ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಕ್ಷೇತ್ರದ ಶಾಸಕ ಡಾ.ಟಿ.ಬಿ.ಜಯಚಂದ್ರ ರವರು ವಿಧಾನಸೌಧದ ತಮ್ಮ ಕಚೇರಿ ಮತ್ತು ಗೃಹ ಕಚೇರಿಯಲ್ಲಿ ಕುಟುಂಬ ಸದಸ್ಯರು ಹಾಗೂ ಸಿಬ್ಬಂದಿ ವರ್ಗದೊಂದಿಗೆ ಆಯುಧಪೂಜೆ ನೆರವೇರಿಸಿದ್ರು.




