
ರಾಜ್ಯ ಸರ್ಕಾರ ಸೆಪ್ಟಂಬರ್ 22ರಿಂದ ರಾಜ್ಯದಲ್ಲಿ ಹಿಂದೂಳಿದ ವರ್ಗಗಳ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನ ಕಟ್ಟುನಿಟ್ಟಾಗಿ ನಡೆಸ್ತಾಯಿದೆ, ಈ ಸಮೀಕ್ಷೆಯ ಸಂಫೂರ್ಣ ಜವಾಬ್ದಾರಿ ಶಿಕ್ಷಕರ ಹೆಗಲೆರಿದೆ, ಈ ನಿಟ್ಟಿನಲ್ಲಿ ದಸರಾ ಹಬ್ಬವನ್ನೂ ಬಿಟ್ಟು ಶಿಕ್ಷಕರು ಮನೆಮನೆಗೆ ಭೇಟಿ ನೀಡಿ ಸರ್ಕಾರ ನೀಡಿದ ಮಾರ್ಗದರ್ಶನದಲ್ಲೇ ಸಮೀಕ್ಷೆ ನಡೆಸುತ್ತಿದ್ದರೂ, ಶಿಕ್ಷಕರಿಗೆ ಕೆಲ ಕಿಡಿಗೇಡಿಗಳಿಂದ ಒಂದಲ್ಲ ಒಂದು ತೊಂದರೆ ಎದುರಾಗುತ್ತಲೇ ಇದೆ
ಸರ್ಕಾರದ ಈ ಸಮೀಕ್ಷೆಗೆ ಮೊದಲಿನಿಂದಲೂ ವಿಘ್ನಗಳು ಎದುರಾಗುತ್ತಲೆ ಇದೆ, ಕೆಲ ಜಾತಿಗಳಿಗೆ ಈ ಸಮೀಕ್ಷೆ ಇನ್ನೂ ಗೊಂದಲದ ಗೂಡಾಗೆ ಇದ್ದು ,ಇದು ಜಾತಿಗಣತೆ ಅಲ್ಲ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಪದೇ ಪದೇ ಸ್ಪಷ್ಟಪಡಿಸಿದ್ದಾಗಿಯೂ, ಈ ಧರ್ಮ ದಂಗಲ್ ಎಫೆಕ್ಟ್ ಈಗ ಸಮೀಕ್ಷೆಗೆ ತೆರಳುತ್ತಿರುವ ಶಿಕ್ಷಕರಿಗೆ ಎಡಬಿಡದೇ ಕಾಡುತ್ತಿದೆ, ಇಂತಹದ್ದೇ ಒಂದು ಘಟನೆ ಈಗ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ
ಹೌದು ರಾಜ್ಯದಲ್ಲಿ ಸಮೀಕ್ಷೆ ವೇಗದಲ್ಲಿ ತುಮಕೂರು 2ನೇ ಸ್ಥಾನದಲ್ಲಿದೆ, ಇದೇ ತುಮಕೂರಿನಲ್ಲಿ ಈಗ ಶಿಕ್ಷಕರಿಗೆ ರಕ್ಷಣೆ ಇಲ್ಲವಾ ಎಂಬ ಪ್ರಶ್ನೆ ಕೂಡ ಕೇಳಿಬರುತ್ತಿದೆ, ನಗರದ ಕೂಗಳತೆ ದೂರದಲ್ಲಿರುವ 6ನೇ ವಾರ್ಡ್ ಭೀಮಸಂದ್ರಪಾಳ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಶಿಕ್ಷಕಿ ಆಯೇಷಾ ಸಮೀಕ್ಷೆ ನಡೆಸಲು ತೆರಳಿರುತ್ತಾರೆ, ಈ ಸಂಧರ್ಭದಲ್ಲಿ ಅಲ್ಲೇ ಇದ್ದ ಕೆಲವರು ಈ ಶಿಕ್ಷಕಿ ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂಬ ಒಂದೇ ಕಾರಣಕ್ಕೆ ಮಾಹಿತಿ ನೀಡಲು ನಿರಾಕರಿಸುತ್ತಾರೆ, ಇದಲ್ಲದೆ ನೀವು ಮುಸ್ಲಿಂಮರು ನಾವು ಯಾಕೆ ನಿಮಗೆ ಮಾಹಿತಿ ಕೊಡಬೇಕು,ನಿನ್ನ ಐಡಿ ಕಾರ್ಡ್ ತೋರಿಸು ಎಂದು ಅವಾಚ್ಯ್ಚ ಶಬ್ಬಗಳಿಂದ ನಿಂದಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗ್ತಾಯಿದೆ
ಈ ಸಂಭಂದ ಶಿಕ್ಷಣ ಇಲಾಖೆ ಇದೀಗಾ ಮೌನ ವಹಿಸಿದೆ, ಘಟನೆ ನಡೆದಾಗಿನಿಂದಲೂ ಕ್ಷೇತ್ರ ಶಿಕ್ಷಣಾಧಿಕಾರಿ ಮಾಧ್ಯಮದವರ ದೂರವಾಣಿ ಕರೆ ಸ್ವೀಕರಿಸದೇ, ಭೇಟಿಗೂ ಸೀಗದೇ ಬೇಜವಾಬ್ದಾರಿ ವರ್ತನೆ ಮಾಡುತ್ತಿದ್ದಾರೆ. ಈ ಘಟನೆ ಬಗ್ಗೆ ಹಿಂದೂಳಿದ ವರ್ಗಗಳ ಉಪ ನಿರ್ದೇಶಕರಾಗಲಿ ಜಿಲ್ಲಾಡಳಿತವಾಗಲಿ ಹೊಣೆ ಹೊತ್ತುಕೊಳ್ಳದೆ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಏನೇ ಆಗಲಿ ಸರ್ಕಾರ ವಹಿಸಿರುವ ಕೆಲಸ ಮಾಡುತ್ತಿರುವ ಶಿಕ್ಷಕರ ಧರ್ಮ ನೋಡಿ ದರ್ಪ ತೋರಿರುವುದು ಅಮಾನವೀಯ ಕೃತ್ಯ, ಮುಂದೆ ಇದೇ ಮುಂದುವರೆದರೆ ಶಿಕ್ಷಕರಿಗೆ ಸಮೀಕ್ಷೆ ಮಾಡುವು ಸಂಧರ್ಭದಲ್ಲಿ ರಕ್ಷಣೆ ಕೊರತೆ ಎದುರಾಗಬಹುದು. ಈ ಬಗ್ಗೆ ಪೊಲೀಸ್ ಇಲಾಖೆ ಜಿಲ್ಲಾಡಳಿತ ಸ್ವಯಂ ದೂರು ದಾಖಲಿಸಿಕೊಂಡು ಕ್ರಮಕೈಗೋಳ್ಳತ್ತದೆಯಾ ಕಾದು ನೋಡಬೇಕು.




