ಕಾಂತಾರ ಚಾಪ್ಟರ್ 1 ರಿಲೀಸ್ ವೇಳೆ ಟಿಕೆಟ್ ಗಾಗಿ ಗಲಾಟೆ

ವಿಶ್ವದಾದ್ಯಂತ ಬಹು ನಿರೀಕ್ಷಿತ ಸಿನಿಮಾ ಕಾಂತಾರ ಚಾಪ್ಟರ್ 1 ರಿಲೀಸ್ ಆಗಿದ್ದು, ಜನರು ಈ ಚಿತ್ರವನ್ನ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಆದ್ರೆ, ಚಿತ್ರಮಂದಿರದ ಆಡಳಿತ ನಿರ್ಲಕ್ಷ್ಯದಿಂದ ವಾದ ವಿವಾದಗಳು ಉಂಟಾಗಿ ಚಿತ್ರಮಂದಿರದ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಶಿರಾದಲ್ಲಿ ನಡೆದಿದೆ.
ಶಿರಾದ ಭಾಗ್ಯಲಕ್ಷ್ಮಿ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದ್ದು, ಸಂಧಾನಕ್ಕೆ ಬಂದ ಪೊಲೀಸ್ ನ್ಯಾಯ ನೀಡುವ ಬದಲಿಗೆ ಜೇಬು ತುಂಬಿಸಿಕೊಂಡು ಹೋಗಿರುವ ಆರೋಪ ಕೇಳಿಬಂದಿದೆ. ಕಾಂತಾರ ಚಾಪ್ಟರ್ 1 ಚಿತ್ರ ಪ್ರದರ್ಶನಕ್ಕೂ ಮುನ್ನವೇ ಬೆಳಿಗ್ಗೆಯೇ ಥೀಯೇಟರ್ ನಲ್ಲಿ ಟಿಕೆಟ್ ಮಾರಾಟ ಮಾಡಿ, ಮತ್ತೇ ಮಧ್ಯಾಹ್ನ ಬಂದು ಸರದಿ ಸಾಲಿನಲ್ಲಿ ನಿಂತವ್ರಿಗೆ ಟಿಕೆಟ್ ನೀಡದೆ ಇದ್ದ ಕಾರಣ ಪ್ರೇಕ್ಷಕರಿಂದ ಥೀಯೇಟರ್ ಮುಂದೆ ಗಲಾಟೆ ನಡೆದಿದ್ದು, ಸಂಧಾನಕ್ಕೆ ಬಂದ ಪೊಲೀಸ್ರು, ಥೀಯೇಟರ್ ಮಾಲೀಕರ ಪರ ವಹಿಸಿ ಹಣ ಪಡೆದಿದ್ದಾರೆ ಎಂದು ರೊಚ್ಚಿಗೆದ್ದ ಯುವಕರು, ಪೇದೆ ಹಣ ಪಡೆಯುವ ವಿಡಿಯೋ ಮಾಡಿದ್ರು. ಇನ್ನು ತಕ್ಷಣ ಎಚ್ಚೆತ್ತ ಪೊಲೀಸ್ ವಿಡಿಯೋ ಡಿಲೀಟ್ ಮಾಡ್ಸಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.
ಇನ್ನು ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ವರದಿಗಾರರು ಥೀಯೇಟರ್ ಸಿಬ್ಬಂದಿಯನ್ನ ಪ್ರಶ್ನಿಸಿದ್ರೆ ಸಿಬ್ಬಂದಿ ಉಡಾಫೆ ಉತ್ತರವನ್ನ ನೀಡಿದ್ದಾರೆ.




