
ನಾಡಿನಾದ್ಯಂತ ದಸರಾ ಸಂಭ್ರಮ ಅದ್ದೂರಿಯಾಗಿ ನಡೆದಿದ್ದು, ಇತ್ತ ಶಿರಾ ನಗರದಲ್ಲಿ ವಿಜಯದಶಮಿ ಪ್ರಯುಕ್ತ ದಸರಾ ಉತ್ಸವ ಸಮಿತಿ ವತಿಯಿಂದ ಶ್ರೀ ದುರ್ಗಮ್ಮ ದೇವಿಯ ದೇವಸ್ಥಾನದ ಆವರಣದಲ್ಲಿ ಶ್ರೀ ದುರ್ಗಮ್ಮ ದೇವಿ ಸೇರಿದಂತೆ ನಗರದ ವಿವಿಧ ದೇವರುಗಳ ಮೆರವಣಿಗೆ ಅದ್ದೂರಿಯಾಗಿ ಜರುಗಿದ್ದು, ತಹಶೀಲ್ದಾರ್ ಆನಂದ್ ಕುಮಾರ್ ಅವರು ಬನ್ನಿ ಪೂಜೆಯನ್ನ ನೇರವೇರಿಸಿದ್ರು.
ಇನ್ನು ಉತ್ಸವದಲ್ಲಿ ಶಿರಾ ಶಾಸಕ ಟಿ.ಬಿ. ಜಯಚಂದ್ರ ಹಾಗೂ ತಹಶೀಲ್ದಾರ್ ಆನಂದ್ ಕುಮಾರ್ ಭಾಗವಹಿಸಿ, ವಿಶೇಷ ಪೂಜೆ ಹಾಗೂ ಬನ್ನಿ ಪೂಜೆಯಲ್ಲಿ ಪಾಲ್ಗೊಂಡ್ರು. ತಹಶೀಲ್ದಾರ್ ಅವರು ಬನ್ನಿಪೂಜೆ ನೆರವೇರಿಸಿ ಶುಭ ಹಾರೈಸಿದ್ರು. 11 ದಿನಗಳ ಕಾಲ ನಡೆದ ಶರನ್ನವರಾತ್ರಿ ಆಚರಣೆ ಬಳಿಕ, ವಿಜಯದಶಮಿ ದಿನದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಗರದಾದ್ಯಾಂತ ಜರುಗಿದವು. ಈರಗಾರ ಗುಡಿಯಿಂದ ಆರಂಭವಾದ ಕಳಸ ಮೆರವಣಿಗೆ, ಶ್ರೀ ದುರ್ಗಮ್ಮ ದೇವಾಲಯದವರೆಗೆ ಸಾಗಿದ್ದು, ಶ್ರೀ ದುರ್ಗಮ್ಮ ದೇವಿಯ ಭವ್ಯ ಮೆರವಣಿಗೆ ಬನ್ನಿ ಮಂಟಪದವರೆಗೆ ಸಾಗಿದ್ವು.
ಇನ್ನು ನಗರದ ನಾರಾಯಣಸ್ವಾಮಿ ದೇವಾಲಯ, ಉಜ್ಜಯಿನಿ ಮಠದ ವೃಷಭೇಂದ್ರ ಸ್ವಾಮಿ ಗದ್ದುಗೆ ಉತ್ಸವ ಸೇರಿದಂತೆ ನಗರದ ವಿವಿಧ ದೇವಾಲಯಗಳ ದೇವರ ಮೂರ್ತಿಗಳೊಂದಿಗೆ ಬನ್ನಿಮಂಟಪದಲ್ಲಿ ಸಾಮೂಹಿಕವಾಗಿ ಬನ್ನಿ ಪೂಜೆಯನ್ನ ನೇರವೇರಿಸೋ ಮೂಲಕ ಉತ್ಸವ ಸಂಭ್ರಮದಿಂದ ತೆರೆ ಕಂಡಿತು. ಈ ವೇಳೆ ನಗರದ ವಿವಿಧ ದೇವಾಲಯ ಸಮಿತಿಯ ಸದಸ್ಯರು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ರು.
https://prajashakthitv.com/?cat=46




