
KANTARA CHAPTER 1 ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ONLINE ನಲ್ಲಿ ಸೋರಿಕೆಯಾಗಿದೆ. ಈ ಹಿಂದೆಯೂ ಪುಷ್ಪ, ಅನಿಮಲ್ ಮತ್ತು ಬ್ರಹ್ಮಾಸ್ತ್ರ ಚಿತ್ರಗಳು ಪೈರಸಿ (piracy) ವೆಬ್ಸೈಟ್ಗಳಿಗೆ ಬಲಿಯಾಗಿತ್ತು. ಇದು ಕಾನೂನು ಬಾಹಿರವಾಗಿದೆ.
Movierulz, Moviesda ಮುಂತಾದ Piracy Website ಗಳು ಮತ್ತು ಹಲವು Telegram ಚಾನೆಲ್ಗಳಲ್ಲಿ ಚಿತ್ರದ ಅನಧಿಕೃತ ಪ್ರತಿಗಳು ಲಭ್ಯವಾಗಿದ್ದು, ಇವು ಚಲನಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ಗೆ ಗಂಭೀರ ಪೆಟ್ಟು ನೀಡಲಿದೆ ಎನ್ನಲಾಗಿದೆ.
ಆದರೆ ಈ ಕಾಪಿಗಳನ್ನು ಡೌನ್ಲೋಡ್ ಮಾಡುವ ಮುನ್ನ ಎಚ್ಚರವಿರಲಿ. ಯಾಕೆಂದರೆ ಇದನ್ನು ಡೌನ್ ಲೋಡ್ ಮಾಡಿಕೊಂಡರೆ ಭಾರತೀಯ ಹಕ್ಕುಸ್ವಾಮ್ಯ ಕಾನೂನಿನಡಿಯಲ್ಲಿ 2 ಲಕ್ಷ ರೂ. ವರೆಗೆ ದಂಡ, ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.
ಇನ್ನು ಚಿತ್ರದ ನಿರ್ಮಾಪಕರು ಹಾಗೂ ಚಿತ್ರತಂಡ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, Cyber Crime ಇಲಾಖೆಯ ಸಹಾಯದಿಂದ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.




