
WEST INDIES vs INDIA 1st Test 2025 : ವೇಗದ ಬೌಲರ್ಗಳಾದ ಮೊಹಮ್ಮದ್ ಸಿರಾಜ್ (Mohammed Siraj) ಮತ್ತು ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ದಾಳಿಗೆ ವೆಸ್ಟ್ ಇಂಡೀಸ್ ತಂಡ ತತ್ತರಿಸಿ ಹೋಗಿದೆ. ಗುರುವಾರ ಆರಂಭವಾದ ಮೊದಲ ಟೆಸ್ಟ್ನ ಮೊದಲ ದಿನದಾಟದಲ್ಲೇ ಕೇವಲ 162 ರನ್ಗಳಿಗೆ ಆಲೌಟ್ ಆಯಿತು.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ WEST INDIES vs INDIA 1st Test ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕೇವಲ 20 ರನ್ಗಷ್ಟರಲ್ಲೇ ಆರಂಭಿಕರಿಬ್ಬರ ವಿಕೆಟ್ಗಳು ಬಿದ್ದಿದ್ದರಿಂದ ತಂಡದ ಮೇಲೆ ತೀವ್ರ ಒತ್ತಡವುಯಿತು.
ಮೊಹಮ್ಮದ್ ಸಿರಾಜ್ ತನ್ನ 14 ಓವರ್ಗಳಲ್ಲಿ ಕೇವಲ 40 ರನ್ ನೀಡಿ 4 ಪ್ರಮುಖ ವಿಕೆಟ್ಗಳನ್ನು ಕಬಳಿಸಿದರು. ಜಸ್ಪ್ರೀತ್ ಬುಮ್ರಾ 42 ರನ್ಗಳಿಗೆ 3 ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ ಎರಡು ವಿಕೆಟ್ಗಳನ್ನು ತಮ್ಮದಾಗಿಸಿಕೊಂಡರು. ವಾಷಿಂಗ್ಟನ್ ಸುಂದರ್ ಕೂಡಾ ಒಂದು ವಿಕೆಟ್ ಪಡೆದರು.
ವಿಂಡೀಸ್ ಪರ ಜಸ್ಟಿನ್ ಗ್ರೀವ್ಸ್(32) ಅವರದ್ದೇ ಅತ್ಯಧಿಕ ಗಳಿಕೆ. ಇವರನ್ನು ಹೊರತುಪಡಿಸಿದರೆ 2021ರ ಬಳಿಕ ಟೆಸ್ಟ್ ಆಡಲಿಳಿದ ಶಾಯ್ ಹೋಪ್ 26 ಮತ್ತು ನಾಯಕ ರೋಸ್ಟನ್ ಚೇಸ್ 24 ರನ್ ಗಳಿಸಿದರು. 21 ರನ್ ಇತರ ರೂಪದಲ್ಲಿ ದಾಖಲಾಯಿತು.




