
ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ಆರಸ ಅರಸಿ ಕಾಡಿನಿಂದನಾಡಿಗೆ ಬರ್ತಾ ಇದ್ದು, ಜನರನ್ನು ನಿದ್ದೆ ಗೆಡಿಸುವಂತೆ ಮಾಡ್ತಿದೆ. ಹುಲಿ, ಚಿರತೆ, ಕರಡಿ ಸೇರಿ ಹಲವು ಕಾಡು ಪ್ರಾಣಿಗಳು ಮನುಷ್ಯರ ಮೇಲೆ ಏಕಾಏಕಿ ಅಟ್ಯಾಕ್ ಮಾಡ್ತಾ ಇದ್ದು, ಒಂಟಿಯಾಗಿ ಜಮೀನಿಗೆ ತೆರಳಲು ಜನರು ಭಯ ಪಡುವಂತಾಗಿದೆ.
ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು, ಜನರನ್ನ ನಿದೆಗೆಡಿಸುವಂತೆ ಮಾಡ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಮಧುರೆನ ಹಳ್ಳಿ ಗ್ರಾಮದಲ್ಲಿ ಕರಡಿ ದಾಳಿ ಮಾಡಿದ್ದು, ಜನರು ಮನೆಯಿಂದ ಆಚೆ ಬರಲು ಹೆದರುತ್ತಿದ್ದಾರೆ. ಮಧುರೆನ ಹಳ್ಳಿ ಗ್ರಾಮದ ರಮೇಶ್ ಎಂಬಾತ ದನವನ್ನು ಮೇಯಿಸಲು ಅರಣ್ಯ ಪ್ರದೇಶಕ್ಕೆ ತೆರಳಿದ್ದ ವೇಳೆ ವ್ಯಕ್ತಿಯ ಮೇಲೆ ಏಕಾಏಕಿ ಕರಡಿ ಎಗರಿ ದಾಳಿ ಮಾಡಿದೆ. ಕರಡೀ ದಾಳಿಯಿಂದ ತಪ್ಪಿಸಿಕೊಳ್ಳಲು ರಮೇಶ್ ಮರವನ್ನು ಏರಿದ್ರು. ಮರವನ್ನು ಏರಿದ್ರು ಕೂಡ ಬಿಡದ ಕರಡಿ ರಮೇಶ್ ಮೇಲೆ ಅಟ್ಯಾಕ್ ಮಾಡಿದೆ.
ಕರಡಿ ದಾಳಿಯಿಂದ ರಮೇಶ್ ಮೈ ಮೇಲೆ ಗಂಭೀರಗಾಯಗಳಾಗಿದ್ದು, ರಕ್ತಸ್ರಾವ ಹೆಚ್ಚಾಗಿ ರಮೇಶ್ ಕಿರುಚಾಡಲಾರಂಭಿಸಿದ್ರು. ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಗಾಯಗೊಂಡ ರಮೇಶ್ ಅವರನ್ನು ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಇನ್ನು ಘಟನೆ ನಡೆದ ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಾಇದ್ರು . ಕೂಡಲೇ ಬೋನ್ಗಳನ್ನು ಇರಿಸಿ ಕರಡಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ರು. ಇತ್ತ ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.




