
Kantara Chapter 1 releases today : ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ (Kantara Chapter 1) ಸಿನಿಮಾ ಇಂದು (ಅ.2) ಪ್ರಯುಕ್ತ ವಿಶ್ವದಾದ್ಯಂತ Grand Release ಆಗಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆಯುತ್ತಿದೆ.
ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6:30ಕ್ಕೆ First Show ಆರಂಭವಾಗಿದ್ದು, ವೀರೇಶ್, ಸಂತೋಷ್ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಭರ್ಜರಿ ಉದ್ಘಾಟನೆ ಕಂಡಿದೆ.
ಇನ್ನು ಕರ್ನಾಟಕದಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಾಂತಾರ ಚಾಪ್ಟರ್ 1 ಬಿಡುಗಡೆಯಾಗಿದ್ದು, ಮೊದಲ ದಿನವೇ 2,000ಕ್ಕೂ ಅಧಿಕ ಶೋಗಳುನಡೆಯಲಿವೆ. ಭಾರತ ಮತ್ತು ಭಾರತೀಯ ಪ್ರಾಂತ್ಯಗಳ ಹೊರಗೂ 7,000ಕ್ಕೂ ಹೆಚ್ಚು Screen ಗಳಲ್ಲಿ ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ.
ಚಿತ್ರದ ಮುಖ್ಯ ಭೂಮಿಕೆಯಲ್ಲಿ Rishab Shetty, Rukmini Vasantha, ಗುಲ್ಶನ್ ದೇವಯ್ಯ, ಮತ್ತು ತಮಿಳು ನಟ ಜಯರಾಂ ಸೇರಿದಂತೆ ಹಲವು ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ.
ಕಾಂತಾರ 1 Premier Show ಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ನಟ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. Cinema Srory ಮತ್ತು Making ನಲ್ಲಿ ರಿಷಬ್ ಶೆಟ್ಟಿ ಯಶಸ್ವಿಯಾಗಿದ್ದಾರೆಂಬ ಮಾತುಗಳು ಪ್ರೀಮಿಯರ್ ಶೋ ವೇಳೆ ಕೇಳಿಬಂದಿವೆ.




