
ಪ್ರಕೃತಿಯನ್ನು ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ.. ಪ್ರಕೃತಿ ಒಲಿದರೆ ಮಾತ್ರ ಮನುಕುಲ ಸುಭೀಕ್ಷವಾಗಿರಲು ಸಾಧ್ಯ… ಅಕಸ್ಮಾತ್ ಪ್ರಕೃತಿ ಮುನಿದರೇ ಇಡೀ ಭೂ ಮಂಡಲವೇ ಅಲ್ಲೋಲ ಕಲ್ಲೋಲವಾಗುತ್ತೆ.. ಗಣಿಗಾರಿಕೆಯಿಂದ ಪ್ರಕೃತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ, ಹೀಗಾಗಿ ಗಣಿಗಾರಿಕೆಗೆ ಸರ್ಕಾರ ನಿರ್ಬಂಧವನ್ನು ಹೇರಿದ್ದು, ಅಗತ್ಯವಿರುವ ಕಡೆ ಮಾತ್ರ ಕಲ್ಲು ಗಣಿಕಾರಿಕೆ ನಡೆಸಲು ಮಾತ್ರ ಸರ್ಕಾರ ಪರ್ಮಿಷನ್ ನೀಡ್ತಾ ಇದೆ.. ಕೆಲವೊಂದು ನಿರ್ಬಂಧಿತ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಮಾಡೋದನ್ನ ಸರ್ಕಾರ ಸಂಪೂರ್ಣ ನಿಷೇಧಿಸಿದೆ. ಆದ್ರೆ ಕೆಲವೊಂದು ಕಡೆ ನಿಯಮ ಉಲ್ಲಂಘನೆ ಮಾಡಿ ಗಣಿಕೆಗಾರಿಕೆ ಮಾಡ್ತಾ ಇದ್ದು. ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತನೆ ಮಾಡ್ತಾ ಇದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಗೃಹ ಸಚಿವ ಪರಮೇಶ್ವರ್ ಅವರ ಕೊರಟಗೆರೆ ಕ್ಷೇತ್ರದಲ್ಲಿ ಎಗ್ಗಿಲ್ಲದೇ ಗಣಿಗಾರಿಕೆ ನಡೆಯುತ್ತಿದ್ದು, ಬಂಡೆ ಬ್ಲ್ಯಾಸ್ಟ್ ವೇಳೆ ಕಾರ್ಮಿಕರು ಸಾವನ್ನಪ್ಪಿದ್ರು ಇಷ್ಟೆಲ್ಲಾ ದುರಂತ ನಡೆಯುತ್ತಿದ್ರು ಕೂಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾತ್ರ ಕೈಚೆಲ್ಲಿ ಕೂತಿದೆ. ಇದ್ರಿಂದ ಜಿಲ್ಲೆಯಲ್ಲಿ ಎಗ್ಗಿಲ್ಲದೇ ಬಂಡೆ ಮಾಫೀಯಾ ನಡೆಯುತ್ತಿದೆ.

ಅಬ್ಬಬ್ಬ.. ರಾಶಿ ರಾಶಿಯಾಗಿ ಬಿದ್ದಿರೋ ಬೃಹತ್ ಕಲ್ಲುಗಳು.. ಇದು ಯಾವುದೋ ಕಾಡು, ಬೆಟ್ಟ ಗುಡ್ಡ ಪ್ರದೇಶ ಅಲ್ಲ.. ಇದು ವ್ಯಕ್ತಿಯೊಬ್ಬರಿಗೆ ಸೇರಿರೋ ಜಮೀನಿನಲ್ಲಿ ಬಿದ್ದಿರೋ ಕಲ್ಲುಗಳು… ದುಡ್ಡು ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ ಅಂತೆ… ದುಡ್ಡು ಸಿಗುತ್ತೆ ಅಂತಾ ಇಂಚು ಭೂಮಿನೂ ಬಿಡಲ್ಲ… ಮಣ್ಣನ್ನು ಬಿಡಲ್ಲ… ಕಲ್ಲನ್ನು ಬಿಡಲ್ಲ… ಅಷ್ಟು ದುರಾಸೆಯ ಜನರು.. ಚಾಪೆ ಕೆಳಗೆ ನುಗ್ಗಿ ದುಡ್ಡಷು ಮಾಡೋದನ್ನ ನೋಡ್ತಾ ಇದ್ದಾರೆ.. ಅಕ್ಕ ಪಕ್ಕದ ಜನ ಸಾಯ್ತಾ ಇದ್ರು ಪರವಾಗಿಲ್ಲ ಇವರಿಗೆ ದುಡ್ಡು ಮಾತ್ರ ಬೇಕು… ಗ್ರಾನೈಟ್ ದಂಧೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದು ಇಲ್ಲೋಬ್ಬ ಭೂಪ ಪರ್ಮಿಷನ್ ಇದೆ ಅಂತಾ ನೆಪ ಮಾತ್ರಕ್ಕೆ ಅನುಮತಿ ಪತ್ರ ಇಟ್ಟುಕೊಂಡು, ಜಮೀನಿನಲ್ಲಿದ್ದ ಕಲ್ಲುಗಳನ್ನು ಬಗೆದು ಸಂಪತ್ತನ್ನು ನಾಶ ಮಾಡ್ತಾ ಇರೋದಲ್ಲದೇ, ಅಕ್ಕಪಕ್ಕದ ಗ್ರಾಮಸ್ಥರ ಜೀವಕ್ಕೆ ಸಂಚಕಾರ ತರುವಂತಹ ಕೆಲಸ ಮಾಡಲಾಗ್ತಿದೆ. ತುಮಕೂರಿನಲ್ಲಿ ಎಗ್ಗಿದಲ್ಲದೇ ರಾಜಾರೋಷವಾಗಿ ಗಣಿಗಾರಿಕೆ ನಡೆಯುತ್ತಿರೋದನ್ನ ಪ್ರಜಾಶಕ್ತಿ ಟಿವಿ ಬಯಲಿಗೆಳೆಯುವ ಕೆಲಸವನ್ನು ಮಾಡ್ತಾ ಇದೆ,

ಹೌದು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿ.ಎಸ್ ಪುರ ಹೋಬಳಿಯ ಬೋರಪ್ಪನಹಳ್ಳಿ ಗ್ರಾಮದ ಸರ್ವೇ ನಂಬರ್ 35/1 ರ 2 ಎಕರೆ 8 ಕುಂಟೆ ಜಾಗದಲ್ಲಿ ಬಂಡೆಕಳ್ಳನೊಬ್ಬ ಭೂಮಿಯ ಒಡಲನ್ನು ಬಗೆದು ಕಲ್ಲುಗಳನ್ನು ಅಕ್ರಮವಾಗಿ ಸಾಗಾಟ ಮಾಡ್ತಾ ಇದ್ದಾನೆ… ಬೋರಪ್ಪನಹಳ್ಳಿ ಗ್ರಾಮದ ಸರ್ವೇ ನಂಬರ್ 35/1ರಲ್ಲಿರೋ ಜಮೀನು ಗಂಗಮ್ಮ ಹಾಗೂ ಲೇಟ್ ಗಂಗಾಧರಯ್ಯ ಎಂಬುವವರ ಹೆಸರಿನಲ್ಲಿ ಜಮೀನು ಇದ್ದು, ಈ ಜಮೀನಿನಲ್ಲಿ ಗಿರೀಶ್ ಎಂಬ ವ್ಯಕ್ತಿ ಜೆಸಿಬಿಗಳನ್ನು ಬಳಸಿ ಭೂಮಿಯನ್ನು ಬಗೆದು ಕಲ್ಲುಗಳನ್ನು ಹೊರತೆಗೆಯುತ್ತಿದ್ದಾನೆ,,, ರಾತ್ರಿ ವೇಳೆ ಆ ಬಂಡೆಗಳಿಗೆ ಮದ್ದುಗಳನ್ನು ಇಟ್ಟು ಬ್ಲ್ಯಾಸ್ಟ್ ಮಾಡೋದಲ್ಲದೇ, ಬೆಳಗ್ಗೆ ವೇಳೆ ಕಾರ್ಮಿಕರಿಂದ ಕಲ್ಲುಗಳನ್ನು ಹೊಡೆದು ಬಾಕ್ಸ್ ಮಾಡಿಸಿ ಅದನ್ನ ರಾತ್ರೋ ರಾತ್ರಿ ಬೇರೆಡೆಗೆ ರವಾನೆ ಮಾಡಿ ದುಡ್ಡು ಮಾಡಿಕೊಳ್ಳುತ್ತಿದ್ದಾನೆ.

ಇನ್ನು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ವ್ಯಕ್ತಿಯನ್ನು ನಮ್ಮ ವರದಿಗಾರರು ಪ್ರಶ್ನೆ ಮಾಡಿದ್ರೆ, ನಾವು ಇಲಾಖೆಯಿಂದ ಪರ್ಮಿಷನ್ ತಗೊಂಡೇ ಬಂಡೆ ಹೊಡೆಯುತ್ತಿದ್ದೇವೆ… ಅಂತಾ ಅನುಮತಿ ಪತ್ರವನ್ನು ಕೊಡ್ತಾರೆ… ಆದ್ರೆ ಆ ಪರ್ಮಿಷನ್ ಲೆಟರ್ನಲ್ಲಿ ಇರೋ ರೂಲ್ಸ್ನನ್ನು ಬ್ರೇಕ್ ಮಾಡಿ ಕಲ್ಲು ಗಣಿಗಾರಿಕೆ ನಡೆಸುತ್ತಿರೋದು ದಾಖಲೆ ಸಮೇತವನೇ ಸಿಕ್ಕಿ ಹಾಕಿಕೊಂಡಿದ್ದಾನೆ. ಇಲಾಖೆಯಿಂದ ಪರ್ಮಿಷನ್ ಇಲ್ಲದೇ ಕಪ್ಪು ಕಲ್ಲನ್ನು ಸಾಗಾಟ ಮಾಡುವಂತಿಲ್ಲ, ಅಲ್ಧೇ ಗಣಿಗಾರಿಕೆ ಮಾಡುವಾಗ ಯಾವುದೇ ಅವಘಡಗಳು ಜರುಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಆದ್ರೆ ಗಣಿಗಾರಿಕೆ ಮಾಡುತ್ತಿದ್ದ ಜಾಗದಲ್ಲಿ ಯಾವುದೇ ಕ್ರಮಗಳು ಕೂಡ ತೆಗೆದುಕೊಂಡಿಲ್ಲ. ಅಲ್ದೇ ಗಣಿಕಾರಿಕೆ ನಡೆಯುವ ಜಾಗದಲ್ಲಿ ಯಾವುದೇ ಬ್ಲ್ಯಾಸ್ಟ್ಞ ಆಗಲಿ, ಡ್ರಿಲ್ಲಿಂಗ್ ಆಗಲಿ ಮಾಡುವಂತಿಲ್ಲ ಅಂತಾ ನಿಯಮಗಳು ಇದ್ರು ಕೂಡ, ಗಿರೀಶ್ ಎಂಬುವವನು ರೂಲ್ಸ್ ಬ್ರೇಕ್ ಮಾಡಿ ಗಣಿಗಾರಿಕೆ ಮಾಡ್ತಿರೋದು ಕಂಡು ಬಂದಿದೆ. ಅಲ್ದೇ ಗಣಿಗಾರಿಕೆ ಮಾಡ್ತಾ ಇದ್ದೀರಾ ಅಂತಾ ಪ್ರಶ್ನೆ ಮಾಡಿದ್ರೆ ಆದೇಶ ಪತ್ರಿ ಇದೆ ಅದನ್ನ ಅಧಿಕಾರಿಗಳಿಗೆ ತೋರಿಸ್ತೀವಿ ಅಂತಾ ಬೇಜಾವ್ದಾರಿಯಾಗಿ ಉತ್ತರ ಕೊಡ್ತಾನೆ,,. ಅಲ್ದೇ ನಾವು ಗಣಿಗಾರಿಕೆ ಮಾಡ್ತಾ ಇಲ್ಲ ಅಂತಾ ವಾದ ಬೇರೆ ಮಾಡ್ತಾನೆ..
ಇನ್ನು ಬೋರಪ್ಪನಹಳ್ಳಿ ಗ್ರಾಮದಲ್ಲಿ ಗಣಿಗಾರಿಕೆ ಮಾಡಲು ಕೊಳ್ಳೆಗಾಲದಿಂದ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸಲಾಗ್ತಿದೆ. ಈ ಕಾರ್ಮಿಕರಿಗೆ ಗಣಿಕಾರಿಕೆ ಕೆಲಸ ಮಾಡುವಾಗ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದಿರೋದು ಕೂಡ ಕಂಡು ಬಂದಿದೆ. ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ಆಗ್ತಾ ಇರೋದನ್ನ ಬಂಡೆ ಹೊಡೆಯುವ ವ್ಯಕ್ಯಿಯೇ ಒಪ್ಪಿಕೊಂಡಿದ್ದಾರೆ…: ಇನ್ನು ಗಣಿಗಾರಿಕೆ ಮಾಡುವ ಜಾಗದಿಂದ ಕೇವಲ 100 ಮೀಟರ್ ದೂರದಲ್ಲಿ ಅಂಬೇಡ್ಕರ್ ವಸತಿ ಶಾಲೆಯೂ ಕೂಡ ಇದೆ… ಶಾಲೆಯ ಬಳಿಯೇ ದೊಡ್ಡ ಮಟ್ಟದಲ್ಲಿ ರಾಜಾರೋಷವಾಗಿ ಎಗ್ಗಿಲ್ಲದೇ ಬಂಡೆ ಮಾಫೀಯ ನಡೆಯುತ್ತಿದ್ದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾಗಲಿ, ಸಂಬಂಧಪಟ್ಟ ಯಾವೊಬ್ನ ಅಧಿಕಾರಿಗಳಾಗಲಿ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಗಣಿಗಾರಿಕೆ ನಡೆಯುತ್ತಿದ್ರು ಕೂಡ ಅಧಿಕಾರಿಗಳು ಕೈಚೆಲ್ಲಿ ಕೂತಿರೋದು ಹಲವು ಅನುಮಾನಗಳು ಮೂಡುತ್ತಿದ್ದು, ಈ ಬಂಡೆ ಮಾಫೀಯಾದಲ್ಲಿ ಅಧಿಕಾರಿಗಳು ಶಾಮೀಲು ಆಗಿದ್ದಾರಾ ಎಂಬ ಶಂಕೆ ವ್ಯಕ್ತವಾಗ್ತಿದೆ.
ಒಟ್ನಲ್ಲಿ ತುಮಕೂರಿನಲ್ಲಿ ಎಗ್ಗಿಲ್ಲದೇ, ನಿಯಮ ಉಲ್ಲಂಘನೆ ಮಾಡಿ ಬಂಡೆ ಮಾಫೀಯ ನಡೆಯುತ್ತಿದೆ. ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಬಂಡೆ ಮಾಫಿಯಾ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಸಂಪತ್ತಿನ ಜೊತೆಗೆ ಜನರ ಆರೋಗ್ಯ ಹಾಗೂ ಪ್ರಾಣವನ್ನು ಕಾಪಾಡಬೇಕಿದೆ.




