
ಹಿಂದುಳಿದ ಆಯೋಗದಿಂದ ರಾಜ್ಯದಲ್ಲಿ ನಡೆಸಲಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ಶಿರಾದ ಶಿಕ್ಷಕಿರೊರ್ವರು ನಿಗದಿತ ಅವಧಿಗಿಂತ ಮೂರೇ ದಿನಗಳಲ್ಲಿ ಪೂರ್ಣಗೊಳಿಸಿದ್ದಾರೆ. ರಾಜ್ಯ ಸರ್ಕಾರ ಕೈಗೊಂಡಿರುವ ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿಯಲು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮುಂದಾಗಿದ್ದು, ಸೆ.22ರಿಂದ ಸಮೀಕ್ಷೆ ಪ್ರಾರಂಭವಾಗಿತ್ತು. ಸಮೀಕ್ಷೆಗೆ ತಾಲೂಕುಗಳಲ್ಲಿ ಗಣತಿದಾರರನ್ನು ನೇಮಿಸಲಾಗಿತ್ತು. ಸಮೀಕ್ಷಾ ಕಾರ್ಯದ ಮಧ್ಯೆ ಸರ್ವರ್, ನೆಟ್ವರ್ಕ್ ಸೇರಿ ಸಾಕಷ್ಟು ಸಮಸ್ಯೆಗಳಿಂದ ಗಣತಿದಾರರು ಸರ್ವೆ ಮಾಡಲು ಪರದಾಡುತ್ತಿದ್ದಾರೆ. ಇದರ ಮಧ್ಯೆ ಶಿರಾ ತಾಲ್ಲೂಕಿನ ಮದ್ದನಾಯಕನಹಳ್ಳಿ ಶಿಕ್ಷಕಿ ಆನಿತ.ವಿ ಮೂರು ದಿನಗಳಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರೈಸಿ ಕರ್ತವ್ಯ ಮೆರೆದಿದ್ದಾರೆ. ಜಿಲ್ಲಾಡಳಿತದಿಂದ ಮಧುಗಿರಿ ಉಪವಿಭಾಗಾಅಧಿಕಾರಿ ಗೂಟೂರು ಶಿವಪ್ಪ ಅಭಿನಂದಿಸಿದರು. ಈ ಸಂದರ್ಭದಲ್ಲಿ ತಹಸಿಲ್ದಾರ್ ಅನಂದ್ ಕುಮಾರ್, ಕಾರ್ಯ ನಿರ್ವಾಹಕ ಅಧಿಕಾರಿಗಳು ಹರೀಶ್. ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಸೇರಿ ಅಧಿಕಾರಿ ವರ್ಗದವರು ಹಾಜರಿದ್ದರು.




