
Senior Sandalwood actress Kamalashree passes away : ಖ್ಯಾತ ಧಾರಾವಾಹಿ ACTRESS KAMALASHREE (76) ಅವರು ಸೆಪ್ಟೆಂಬರ್ 30 ರಂದು ನಿಧನರಾಗಿದ್ದಾರೆ. BREAST CANCER ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ ಬೆಂಗಳೂರಿನ KIDWAI ಕ್ಯಾನ್ಸರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಕಮಲಶ್ರೀ ಅವರು GATTIMELA ಧಾರಾವಾಹಿಯ ‘ವೇದಾಂತ್ ಅಜ್ಜಿ’ ಪಾತ್ರದಿಂದ ಮನೆಮಾತಾಗಿದ್ದರು. ಕನ್ನಡದ ಹಲವು ಜನಪ್ರಿಯ ಸೀರಿಯಲ್ಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು. ಕಾವೇರಿ ಕನ್ನಡ ಮೀಡಿಯಂ, ಪತ್ತೆದಾರಿ ಪ್ರತಿಭಾ, ಮತ್ತಿತರ ಧಾರಾವಾಹಿಗಳಲ್ಲಿಯೂ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು.
ಅವರು DR. RAJKUMAR ಬ್ಯಾನರ್ನ ಚಲನಚಿತ್ರಗಳಲ್ಲಿ ಹಾಗೂ ಹಲವಾರು ನಾಟಕಗಳಲ್ಲಿ ಸಹ ಅಭಿನಯಿಸಿದ್ದರು. ನಾಡಿನಾದ್ಯಂತ ಹಲವಾರು ಅಭಿಮಾನಿಗಳನ್ನು ಹೊಂದಿದ್ದ KAMALASHREE ಅವರ ಅಭಿನಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿತ್ತು.
ವೈಯಕ್ತಿಕ ಜೀವನದಲ್ಲಿ ಕಮಲಶ್ರೀ ಅವರಿಗೆ ಗಂಡ ಹಾಗೂ ಮಕ್ಕಳಿಲ್ಲ. ಕೊನೆಯ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳೊಂದಿಗೆ ಆರ್ಥಿಕ ಸಂಕಷ್ಟವನ್ನೂ ಎದುರಿಸುತ್ತಿದ್ದರು ಎನ್ನಲಾಗಿದೆ. ಇನ್ನು ಕಮಲಶ್ರೀ ಅವರ ಅಂತ್ಯಕ್ರಿಯೆ OCTOBER 1 ರಂದು (ನಾಳೆ) ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನೆರವೇರಲಿದೆ.




