
MYSORE DASARA 2025 : ದೇಶದಾದ್ಯಂತ ಇಂದು ಆಯುಧ ಪೂಜೆ ಸಂಭ್ರಮಪೂರ್ಣವಾಗಿ ನಡೆಯುತ್ತಿದ್ದು, Mysore Amba Vilasa ಅರಮನೆಯೂ ಸಾಂಪ್ರದಾಯಿಕ ವೈಭವದಿಂದ ಮೆರೆಯಿತು. ರಾಜಕುಟುಂಬದವರ ಉಪಸ್ಥಿತಿಯಲ್ಲಿ ನಡೆದ ಈ ಆಚರಣೆಗೆ ವಿಶೇಷ ಆಕರ್ಷಣೆಯಾಗಿದೆ.
ಬೆಳಗ್ಗೆ 6 ಗಂಟೆಗೆ ಚಂಡಿಕಾ ಹೋಮದೊಂದಿಗೆ ಪೂಜೆ ಆರಂಭವಾಗಿದ್ದು, ನಂತರ 7:55ಕ್ಕೆ ಆಯುಧಗಳನ್ನು ಪುರಾತನ ಪದ್ದತಿಯಂತೆ ಅರಮನೆಯಿಂದ ಪಲ್ಲಕ್ಕಿಯಲ್ಲಿ ಕೋಡಿ ಸೋಮೇಶ್ವರ ದೇವಾಲಯಕ್ಕೆ(Temple) ಕೊಂಡೊಯ್ಯಲಾಯಿತು. ಅಲ್ಲಿ ವಿಶೇಷ ಪೂಜೆಯ ನಂತರ ಆಯುಧಗಳನ್ನು ಶುದ್ಧೀಕರಿಸಿ ಪುನಃ ಅರಮನೆಗೆ ತರುವ ಮೂಲಕ ಆಯುಧಪೂಜೆಗೆ ಚಾಲನೆ ನೀಡಲಾಯಿತು.
ಆನೆಬಾಗಿಲು ಮೂಲಕ ಆಯುಧಗಳನ್ನು ಕಲ್ಯಾಟ ಮಂಟಪಕ್ಕೆ ಕರೆತಂದು, ಅಲ್ಲೆ ಸಿಂಹಾಸನದ ಸಿಂಹಕ್ಕೆ ಜೋಡಣೆ ಮಾಡಿ ಪೂಜೆ ಸಲ್ಲಿಸಲಾಯಿತು. ನಂತರ ರಾಜಪುರೋಹಿತರ ಮಾರ್ಗದರ್ಶನದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪರಂಪರೆಯಂತೆ ಆಯುಧ ಪೂಜೆ ನೆರವೇರಿಸಿದರು.




