
ಅಕ್ಟೋಬರ್ 1ರಿಂದ ಹಲವಾರು ಹಣಕಾಸು ಮತ್ತು ಸೇವಾ ನಿಯಮಗಳಲ್ಲಿ ಬದಲಾವಣೆ ಜಾರಿಯಾಗುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಭಾರತೀಯ ರೈಲ್ವೆ ಇಲಾಖೆಯಿಂದ ಈ ಬದಲಾವಣೆಗಳ ಕುರಿತು ಮಾಹಿತಿ ನೀಡಲಾಗಿದೆ.
ಪ್ರಮುಖ ಬದಲಾವಣೆಗಳು:
🔹 ಬ್ಯಾಂಕ್ ಬಡ್ಡಿದರ ಸ್ವಾತಂತ್ರ್ಯ:
ಫ್ಲೋಟಿಂಗ್ ರೇಟ್ ಲೋನ್ನಲ್ಲಿ ಮೊದಲಿನ ಮೂರು ವರ್ಷದ ನಿಯಮ ಸಡಿಲಗೊಂಡಿದ್ದು, ಬ್ಯಾಂಕುಗಳು ಬೇಗ ಬಡ್ಡಿದರ ಪರಿಷ್ಕರಿಸಬಹುದು. ಗ್ರಾಹಕರು ಫಿಕ್ಸೆಡ್ ಇಂಟರೆಸ್ಟ್ನಿಂದ ಫ್ಲೋಟಿಂಗ್ ಇಂಟರೆಸ್ಟ್ಗೆ ಬದಲಾಯಿಸಿಕೊಳ್ಳಲು ಅವಕಾಶ ಹೊಂದಿದ್ದಾರೆ.
🔹 ಚಿನ್ನ ಮತ್ತು ಬೆಳ್ಳಿ ಅಡಮಾನ ಸಾಲ:
ಆಭರಣ ವ್ಯಾಪಾರಿಗಳಿಗೆ ನೀಡುವ ಸಾಲದಲ್ಲಿ ತಿದ್ದುಪಡಿ; ಬ್ಯಾಂಕುಗಳು ಗ್ರಾಹಕರಿಗೆ ಹೆಚ್ಚು ಅನುಕೂಲ ನೀಡಲಿದೆ.
🔹 ನಿರಂತರ ಚೆಕ್ ಕ್ಲಿಯರಿಂಗ್:
ಅಕ್ಟೋಬರ್ 4ರಿಂದ ನಿರಂತರ ಚೆಕ್ ಕ್ಲಿಯರಿಂಗ್ ಸಿಸ್ಟಂ ಜಾರಿಯಾಗುತ್ತದೆ. ಹಳೆಯ ಬ್ಯಾಚ್ ಕ್ಲಿಯರಿಂಗ್ ಕ್ರಮದ ಬದಲಿಗೆ, ಚೇಕ್ಸ್ ಬೇಗನೆ ಕ್ಲಿಯರ್ ಆಗಲಿವೆ.
🔹 ಗೋಲ್ಡ್ ಮೆಟಲ್ ಲೋನ್:
ಬ್ಯಾಂಕುಗಳು ಚಿನ್ನವನ್ನು ಸಾಲವಾಗಿ ನೀಡುವ ಅವಧಿಯನ್ನು 180 ದಿನದಿಂದ 270 ದಿನಗಳಿಗೆ ವಿಸ್ತರಿಸುತ್ತಿವೆ.
🔹 ಕ್ರೆಡಿಟ್ ಇನ್ಫಾರ್ಮೇಶನ್ ಸಿಸ್ಟಂ:
ಗ್ರಾಹಕರ ಕ್ರೆಡಿಟ್ ಮಾಹಿತಿ ವಾರದಿಂದ ವಾರಕ್ಕೆ ನಿಖರವಾಗಲು ಹೊಸ ರಿಪೋರ್ಟಿಂಗ್ ಸಿಸ್ಟಂ ಜಾರಿಗೆ ಬರಲಿದೆ.
🔹 ರೈಲ್ವೆ ಆನ್ಲೈನ್ ಟಿಕೆಟ್ ಬುಕ್ಕಿಂಗ್:
ಆನ್ಲೈನ್ ಟಿಕೆಟ್ ಬುಕ್ಕಿಂಗ್ ಮಾಡಲು ಆಧಾರ್ ಆಧಾರಿತ ಅಥೆಂಟಿಕೇಶನ್ ಕಡ್ಡಾಯವಾಗಿದೆ. ಏಜೆಂಟ್ಗಳು ದುರ್ಬಳಕೆ ಮಾಡದಂತೆ ಕ್ರಮ ಕೈಗೊಳ್ಳಲಾಗಿದೆ.
ಈ ನಿಯಮ ಬದಲಾವಣೆಗಳು ಅಕ್ಟೋಬರ್ 1ರಿಂದಲೇ ಜಾರಿಗೆ ಬರುತ್ತವೆ. ಬ್ಯಾಂಕಿಂಗ್, ಹಣಕಾಸು, ಮತ್ತು ರೈಲ್ವೆ ಸೇವೆಗಳನ್ನು ಬಳಸುವ ಪ್ರತಿಯೊಬ್ಬರ ಮೇಲೂ ನೇರ ಪರಿಣಾಮ ಬೀರುತ್ತವೆ. ಗ್ರಾಹಕರು ಹೊಸ ನಿಯಮಗಳ ಕುರಿತು ಎಚ್ಚರಿಕೆ ವಹಿಸಬೇಕು




