
MAHESH PU COLLAGE TUMKUR : ತುಮಕೂರಿನಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆ ಮಾಡಿದೆಎಲ್ಲೆಲ್ಲೂ ಆಯೂಧ ಪೂಜೆ ಮಾಡುವ ಮೂಲಕ ಹಬ್ಬವನ್ನು ಆಚರಿಸ್ತಾ ಇದ್ದಾರೆ. ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಒಂದಾದ ಮಹೇಶ್ ಪಿಯು ಕಾಲೇಜಿನಲ್ಲಿ ದಸರಾ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯ್ತು. ದಸರಾ ಅಂಗವಾಗಿ ಕಾಲೇಜಿಗೆ ತಳಿರು ತೋರಣದಿಂದ ಅಲಂಕಾರ ಮಾಡಲಾಗಿತ್ತು.
ತುಮಕೂರಿನ ಅಶೋಕನಗರದಲ್ಲಿರುವ MAHESH PU COLLEGE ಮಂಡಳಿಯಿಂದ ಆಯುಧ ಪೂಜೆ ಯನ್ನು ಮಾಡಲಾಯ್ತು, ಕಾಲೇಜು ಆಡಳಿತ ಕಚೇರಿಯಲ್ಲಿ ಸರಸ್ವತಿ ಹಾಗೂ ಲಕ್ಷ್ಮೀ ಫೋಟೋಗೆ ಸಂಪ್ರದಾಯ ಬದ್ಧವಾಗಿ ಪೂಜೆ ಮಾಡಲಾಗಿದ್ದು, ಮುಂಬರುವ ಪರೀಕ್ಷೆಗಳಿಗೆ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತರಲೆಂದು ಪ್ರಾರ್ಥಿಸಲಾಯ್ತು. ಇನ್ನು ಈ ಪೂಜೆ ಕಾರ್ಯಕ್ರಮದಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು ಕಾಲೇಜು ವಿದ್ಯಾರ್ಥಿಗಳು ಸರಸ್ವತಿ ದೇವಿಯ ಮುಂದೆ ವಿದ್ಯಾರ್ಥಿಗಳ ಆಯುಧಗಳಾದ ಪೆನ್ನು- ಪುಸ್ತಕಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಿದ್ರು. ಬಳಿಕ ಕಾಲೇಜು ವಾಹನಗಳಿಗೆ ವಿಶೇಷವಾಗಿ ಯಾವುದೇ ವಿಘ್ನಗಳು ಎದುರಾಗದಂತೆ ಪೂಜೆ ನೆರವೇರಿಸಲಾಯ್ತು. ಈ ವೇಳೆ ಕಾಲೇಜು ವಿದ್ಯಾರ್ಥಿಗಳಿಗೆ ಮಹೇಶ್ ಪಿಯು ಕಾಲೇಜು ಆಡಳಿತ ಮಂಡಳಿವತಿಯಿಂದ ಶುಭ ಹಾರೈಸಿದ್ರು

ಇನ್ನು ಮಹೇಶ್ ಪಿಯು ಕಾಲೇಜು ಆಡಳಿತ ಮಂಡಳಿಯಿಂದ ಭಕ್ತಿ ಭಾವದಿಂದ ದಸರಾ ಹಬ್ಬ ಆಚರಿ ಸಿದ್ದನ್ನ ಕಂಡು ವಿದ್ಯಾರ್ಥಿಗಳು ಫುಲ್ ಖುಷಿಯಾದ್ರು.
ಇತ್ತ ದಸರಾ ಅಂಗವಾಗಿ ಮಹೇಶ್ ಪಿಯು ಕಾಲೇಜು ಆಡಳಿತ ಮಂಡಳಿ ವತಿಯಿಂದ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಗಿಯ್ತು. ಇನ್ನು ದಸರಾ ಪೂಜಾ ಕಾರ್ಯಕ್ರಮದಲ್ಲಿ ಮಹೇಶ್ ಪಿಯು ಕಾಲೇಜಿನ ಕಾರ್ಯದರ್ಶಿ ಶಶಿಧರ್, ಪ್ರಾಂಶುಪಾಲರಾದ ವಿದ್ಯಾ ಪಾಟೀಲ್, ಸಿಬ್ಬಂದಿ ವರ್ಗ, ಹಾಗೂ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ರು.




