
Thamma Movie first Song OUT:‘ಅನಿಮಲ್’ ಚಿತ್ರದ ಮೂಲಕ ಬಾಲಿವುಡ್ನಲ್ಲಿ ಗ್ಲಾಮರಸ್ ಆವತಾರದಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ, ಇದೀಗ ‘ಥಮ್ಮ’ (Thamma) ಎಂಬ ಹೊಸ ಹಾರರ್-ಕಾಮಿಡಿ ಚಿತ್ರದಲ್ಲಿ ಮತ್ತೊಮ್ಮೆ ಬೋಲ್ಡ್ ಲುಕ್ನಲ್ಲಿ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ. ಈ ಚಿತ್ರದ ಮೊದಲ ಹಾಡು ‘ತುಮ್ ಮೇರೆ ನಾ ಹುಯೇ’ ಇದೀಗ ಬಿಡುಗಡೆಯಾಗಿದ್ದು, ಆಯುಷ್ಮಾನ್ ಖುರಾನ ಜತೆ ರಶ್ಮಿಕಾ ಹಾಟ್ ಡ್ಯಾನ್ಸ್ ಮೂಲಕ ಕಮಾಲ್ ಮಾಡಿದ್ದಾರೆ.
ಈ ಹಾಡಿನಲ್ಲಿ ಇಬ್ಬರೂ ಕೆಮಿಸ್ಟ್ರಿ ಸಖತ್ ಹಾಟ್ ಆಗಿದ್ದು, ಈ ಹಾಡು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದ್ದು, ರಶ್ಮಿಕಾ-ಆಯುಷ್ಮಾನ್ ಜೋಡಿಯ ಕ್ಯೂಟ್ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಚಿತ್ರದಲ್ಲಿ ಪ್ರೇತಾತ್ಮದ ಪಾತ್ರ ವಹಿಸಿರುವ ರಶ್ಮಿಕಾ, ಇದೇ ಮೊದಲ ಬಾರಿಗೆ ಹಾರರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಆದಿತ್ಯ ಸರ್ಪೋದಾರರ್ ಈ ಚಿತ್ರದಲ್ಲಿ ಹೊಸ ಫ್ಲೇವರ್ ಕೊಡಲು ಪ್ರಯತ್ನಿಸಿದ್ದು, ಟ್ರೈಲರ್ ಕೂಡ ಈಗಾಗಲೇ ಗಮನ ಸೆಳೆದಿದೆ.

ಈ ಹಿಂದೆಯೂ ರಶ್ಮಿಕಾ ‘ಪುಷ್ಪ’ ಹಾಗೂ ‘ಅನಿಮಲ್’ ಸಿನಿಮಾಗಳಲ್ಲಿ ಗ್ಲಾಮರ್ ಲುಕ್ ಹಾಗೂ ಡ್ಯಾನ್ಸ್ ಮೂಲಕ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ್ದರೂ, ಈ ಬಾರಿ ‘ಥಮ್ಮ’ ಹಾಡಿನಲ್ಲಿ ಇನ್ನಷ್ಟು ಬೋಲ್ಡ್ ಲುಕ್ ಹಾಗೂ ಸ್ಟೆಪ್ಗಳ ಮೂಲಕ ಹೊಸ ಎಂಟ್ರಿ ನೀಡಿದ್ದಾರೆ.




