
Brendan Taylor smashes world record century : ಝಿಂಬಾಬ್ವೆ ತಂಡದ ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ಬ್ರೆಂಡನ್ ಟೇಲರ್ ಹೊಸ ದಾಖಲೆ ನಿರ್ಮಿಸಿದ್ದಾರೆ. ತಮ್ಮ 39ನೇ ವಯಸ್ಸಿನಲ್ಲಿ ಟಿ20 ಕ್ರಿಕೆಟ್ ಇತಿಹಾಸದ ಅತ್ಯಂತ ಹಿರಿಯ ಶತಕವೀರರಾಗಿ ಗುರುತಿಸಿ ಕೊಂಡಿದ್ದಾರೆ.
ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ ಬೋಟ್ಸ್ವಾನಾ ಮುಖಾಮುಖಿಯಾ ಗಿತ್ತು. ಝಿಂಬಾಬ್ವೆ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಟೇಲರ್, ಆರಂಭದಿಂದಲೇ ಬಿರುಸಿನ ಆಟವಾಡಿದರು. ಕೇವಲ 46 ಎಸೆತಗಳಲ್ಲಿ ಶತಕ ಬಾರಿಸಿದ ಅವರು, ಒಟ್ಟು 54 ಎಸೆತಗಳಲ್ಲಿ 123 ರನ್ ಗಳಿಸಿ ಝಳಮಯ ಶತಕ ದಾಖಲಿಸಿದರು. ಈ ರನ್ಗಳಲ್ಲಿ 5 ಸಿಕ್ಸರ್ಗಳು ಮತ್ತು 16 ಫೋರ್ಗಳು, ಒಟ್ಟಾರೆ 20 ಬೌಂಡರಿಗಳು ಸೇರಿವೆ.
ಈ ಸಾಧನೆಯೊಂದಿಗೆ ಟೇಲರ್, ಟಿ20 ಇತಿಹಾಸದಲ್ಲೇ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರ ಪರ ಶತಕ ಸಿಡಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ಕೀರ್ತಿ ಗಳಿಸಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ಸಿಕಂದರ್ ರಾಝಾ ಅವರಿಗಿತ್ತು. 2024ರಲ್ಲಿ ಗಾಂಬಿಯಾ ವಿರುದ್ಧ ಶತಕ ಬಾರಿಸಿದ ರಾಝಾ ವಯಸ್ಸು 38 ಆಗಿತ್ತು. ಇದೀಗ ಬ್ರೆಂಡನ್ ಟೇಲರ್ ಅವರು ಈ ದಾಖಲೆಯನ್ನು ಮುರಿದು, ತಮ್ಮ ಹೆಸರಿನಲ್ಲಿ ಹೊಸ ಇತಿಹಾಸ ರಚಿಸಿದ್ದಾರೆ.




