
ಅರಸೀಕೆರೆಯಲ್ಲಿ ವಾಸವಿ ಸಕಾಲ ಸೇವಾ ಸಮಿತಿ ವತಿಯಿಂದ ಬಡವರಿಗೆ ಉಚಿತ ಕಣ್ಣಿನಹನಿಚಿಕಿತ್ಸಾ ಕಾರ್ಯಕ್ರಮಔನ್ನುಆಯೋಜಿಸಲಾಗಿತ್ತು. ನಗರದ ಪೇಟೆ ಬೀದಿಯಲ್ಲಿರುವ ವಾಸವಿ ಭವನದಲ್ಲಿ ವಾಸವಿ ಸಕಾಲ ಸೇವಾ ಸಮಿತಿ ಇವರ ವತಿಯಿಂದ ಸುಮಾರು 20 ತಿಂಗಳಿಂದ ಮೂಳೆಗಳ ಸಮಸ್ಯೆ, ಹಲ್ಲಿನ ಸಮಸ್ಯೆ, ಕಣ್ಣಿನ ಸಮಸ್ಯೆ ಇತರೆಕಾರ್ಯಕ್ರಮಗಳನ್ನುಮಾಡುತ್ತಬಡಬಗ್ಗರಿಗೆಸಹಾಯಮಾಡುತ್ತಿದೆ.
ವಿಶೇಷವೇನೆಂದರೆ ಆಯುರ್ವೇದಿಕೆ ಔಷಧಿ ವಿಧಾನದ ಕಣ್ಣಿಗೆ ಡ್ರಾಪ್ ಹಾಕಲಾಗುವುದು. ಇದರಿಂದ ಸುಮಾರು ಜನರಿಗೆ ತಲೆನೋವು ಹಾಗೂ ಕಣ್ಣಿನ ಸ್ವಚ್ಛತೆಯಾಗುತ್ತಿದೆ. ಈ ವೇಳೆ ಸಾರ್ವಜನಿಕರು ಮಾತನಾಡಿ, ನಮಗೆ ಅರಸೀಕೆರೆಯಲ್ಲಿ ಕಣ್ಣಿನ ಸಮಸ್ಯೆ ತಲೆನೋವಿಗೆ ಆಯುರ್ವೇದಿಕ್ಕಿಯ ಹನಿಯನ್ನು ಹಾಕುತ್ತಾರೆ ಹಾಗೂ ವಾಸವಿ ಸಲಹಾ ಸೇವಾ ಸಮಿತಿಯಿಂದ ಬಡವರ ಆರೋಗ್ಯದ ಕಾಳಜಿ ವಹಿಸುತ್ತಿದೆ ಎಂದು ಮಂಡಳಿಗೆ ಅಭಿನಂದನೆ ಸಲ್ಲಿಸಿದ್ರು
ಈ ವೇಳೆ ವಾಸವಿ ಸಲಹಾ ಸೇವಾ ಸಮಿತಿಯ ನಿರ್ದೇಶಕರಾದ ನಾಗೇಶ್ ಅವರು ಮಾತನಾಡಿ, ನಾವು ಸುಮಾರು 20 ತಿಂಗಳಿಂದ ಈ ಸೇವೆಯನ್ನು ಬಡವರಿಗೆ ನೀಡುತ್ತ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಈ ಉಚಿತ ಆರೋಗ್ಯ ಸೇವೆಯನ್ನು ವಿಸ್ತರಿಸುವ ಯೋಜನೆ ಹಾಕಿಕೊಂಡಿವೆ. ನಮ್ಮ ಕೈ ಲಾದಷ್ಟು ಬಡವರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದೇವೆ ಎಂದರು
ಪೇಟೆ ಬೀದಿಯಲ್ಲಿರುವ ಕನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಗುರುಕುಲ್ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಏಳು ವರ್ಷದಿಂದ 14 ವರ್ಷಗಳ ವಯೋಮಿತಿ ಇರುವ ಮಕ್ಕಳಿಗೆ ಸಂಸ್ಕಾರ ಸಂಸ್ಕೃತಿ ಬಗ್ಗೆ ಹೇಳಿಕೊಡಲಾಗುವುದು. ಇಂತಹ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಿಎಂದುಜಿಲ್ಲಾಧ್ಯಕ್ಷಶ್ರೀಕಾಂತ್ ಮನವಿಮಾಡಿಕೊಂಡರು.
ಈ ಕಾರ್ಯಕ್ರಮದಲ್ಲಿ ಮಂಡಳಿಯ ಅಧ್ಯಕ್ಷರಾದ ಪಾರ್ಥಸಾರಥಿ, ಕಾರ್ಯದರ್ಶಿ ಕೆ.ಆರ್.ಮುರಳಿಧರ್ , ನಿರ್ದೇಶಕರುಗಳಾದ ನಾಗೇಶ್, ಅಶೋಕ್, ವೈದ್ಯರಾದ ಶ್ರೀಧರ್ಮೂರ್ತಿ, ವೇಣುಗೋಪಾಲ್, ಸುದೇಶ್, ನಾರಾಯಣಿ, ವೈದ್ಯರಾದ ರಾಜತ್ ಅರುಣ್ ಬಾಲಾಜಿ ಇತರರು ಹಾಜರಿದ್ರು.

