
ಇಂದು ನಾವು ಮಾಡೋದು ಬಾಯಲ್ಲಿ ಕರಗುವಷ್ಟು ರುಚಿಕರವಾದ ಸಿಹಿ ಗೆಣಸಿನ ಹೋಳಿಗೆ! ಹಬ್ಬಕ್ಕಾಗಲಿ, ವಿಶೇಷ ದಿನಕ್ಕಾಗಲಿ, ಈ ಹೋಳಿಗೆ ಮನೆಯವರ ಮನಸೂರೆಗೊಳ್ಳೋದು ಖಚಿತ.
✨ ಬೇಕಾಗುವ ಪದಾರ್ಥಗಳು:
- ಗೆಣಸು – ½ ಕೆಜಿ
- ತೊಗರಿಬೇಳೆ – 1 ಕೆಜಿ
- ಬೆಲ್ಲ – 750 ಗ್ರಾಂ
- ಮೈದಾ ಹಿಟ್ಟು – ½ ಕೆಜಿ
- ಎಣ್ಣೆ – ಸ್ವಲ್ಪ
- ಅರಿಶಿಣ – ಸ್ವಲ್ಪ
- ಏಲಕ್ಕಿ ಪುಡಿ – ಸ್ವಲ್ಪ
🥣 ಮಾಡುವ ವಿಧಾನ:
- ಮೊದಲು ಮೈದಾ ಹಿಟ್ಟಿಗೆ ಸ್ವಲ್ಪ ಅರಿಶಿಣ ಮತ್ತು ಎಣ್ಣೆ ಸೇರಿಸಿ, ಮೃದುವಾದ ಕಣಕದ ಹದಕ್ಕೆ ಕಲಸಿ ಬೇರೆ ಇಟ್ಟುಕೊಳ್ಳಿ.
- ಗೆಣಸನ್ನು ಚೆನ್ನಾಗಿ ತೊಳೆದು ಬೇಯಿಸಿ, ಸಿಪ್ಪೆ ತೆಗೆದುಕೊಳ್ಳಿ.
- ಬೇಳೆಯನ್ನು ಕೂಡಾ ಮೆದುವಾಗಿ ಬೇಯಿಸಿ, ನೀರು ತೆಗೆದು ಅದಕ್ಕೆ ಬೆಲ್ಲ ಹಾಕಿ ಸ್ವಲ್ಪ ಹೊತ್ತು ಕುದಿಸಿ.
- ನಂತರ ಬೆಂದ ಬೇಳೆ ಮತ್ತು ಗೆಣಸನ್ನು ಒಟ್ಟಿಗೆ ನುಣ್ಣಗೆ ರುಬ್ಬಿ, ಉಂಡೆ ಕಟ್ಟಲು ಬರುವಷ್ಟು ಗಟ್ಟಿಯಾಗಿ ಹೂರಣ ತಯಾರಿಸಿ.
- ಈ ಹೂರಣವನ್ನು ಲಿಂಬು ಗಾತ್ರಕ್ಕೆ ಮಾಡಿ, ಮೈದಾ ಕಣಕದೊಳಗೆ ತುಂಬಿ ಬಾಳೆ ಎಲೆಯ ಮೇಲಿಟ್ಟು ಎಣ್ಣೆ ಹಚ್ಚಿ ಸಣ್ಣಗೆ ಲಟ್ಟಿಸಿ.
- ತವದ ಮೇಲೆ ಇಟ್ಟು ನಿಧಾನ ಉರಿಯಲ್ಲಿ ಎರಡೂ ಬದಿಯಲ್ಲಿ ಬಂಗಾರ ಬಣ್ಣ ಬರುವವರೆಗೆ ಬೇಯಿಸಿ.
- ಇದೋ ನಿಮ್ಮ ಮನೆಗೆ ಸಿದ್ಧವಾಗಿದೆ ಬಾಯಲ್ಲಿ ಕರಗುವ ಸಿಹಿ ಗೆಣಸಿನ ಹೋಳಿಗೆ! ಬಿಸಿ ಬಿಸಿ ಹೋಳಿಗೆಗೆ ತುಪ್ಪ ಹಚ್ಚಿ ಸವಿಯಿರಿ.




