RUSSIAN WOMEN IN GOKARNA CAVE :ಗೋಕರ್ಣದ ರಾಮತೀರ್ಥ ಅರಣ್ಯದ ಗುಹೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ರಷ್ಯಾ ಮಹಿಳೆ ನೀನಾ ಕುಟೀನಾ ಮತ್ತು ಆಕೆಯ ಮಕ್ಕಳು ಪ್ರೆಯಾ (6) ಹಾಗೂ ಅಮಾ (4) ಅವರನ್ನು ಕೊನೆಗೂ ಸ್ವದೇಶಕ್ಕೆ ಕಳುಹಿಸುವಲ್ಲಿ ಗೋಕರ್ಣ ಪೊಲೀಸರು ಯಶಸ್ವಿಯಾದ್ದಾರೆ.
ಜುಲೈ 10 ರಂದು ಗೋಕರ್ಣದ ಪೊಲೀಸರು ನಿಯಮಿತ ಬೀಟ್ ಪರಿಶೀಲನೆಯ ಸಂದರ್ಭದಲ್ಲಿ ರಾಮತೀರ್ಥ ಅರಣ್ಯದ ಆಳವಾದ ಭಾಗದಲ್ಲಿ ಗುಹೆಯೊಂದರಲ್ಲಿ ವಾಸವಿದ್ದ ಈ ಕುಟುಂಬವನ್ನು ಪತ್ತೆಹಚ್ಚಿದರು. ಮಕ್ಕಳು ಹಾಗೂ ತಾಯಿ ಗುಹೆಯಲ್ಲೇ ವಾಸಿಸುತ್ತಿರುವ ಮಾಹಿತಿ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರು ರಕ್ಷಣೆ ನಡೆಸಿದರು.
ನಂತರ ಈಕೆಯ ಪತಿ ರಷ್ಯಾ ನಿವಾಸಿ ಡೋರ್ಶ್ಲೋಮೋ ಗೋಲ್ಡ್ಸ್ಟೈನ್ ಬೆಂಗಳೂರು ಹೈಕೋರ್ಟ್ನಲ್ಲಿ ರಷ್ಯಾಗೆ ಕಳಿಹಿಸುವಂತೆ ಅರ್ಜಿ ಸಲ್ಲಿಸಿದ್ದರು. ಅಂತಿಮವಾಗಿ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ, ಗೋಕರ್ಣ ಪೊಲೀಸರು ಮಹಿಳೆ ಮತ್ತು ಮಕ್ಕಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕಳುಹಿಸಿದ್ದಾರೆ.