ಬಂಗಾಳದಲ್ಲಿ ಸುವೇಂದು ʻಅಧಿಕಾರʼ – ಬಿಜೆಪಿ ಮೊದಲ CM ಆಗಿ ಪ್ರಮಾಣ ಸ್ವೀಕಾರ

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ ಶುರುವಾಗಿದೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಗ್ರೌಂಡ್ನಲ್ಲಿ ನಡೆದ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರು.
ಇನ್ನು ಈ ಐತಿಹಾಸಿಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಎನ್ಡಿಎ ಆಡಳಿತದ 20 ರಾಜ್ಯಗಳ ಮುಖ್ಯಮಂತ್ರಿಗಳು ಉಪಸ್ಥಿತರಿದ್ದರು.
READ THIS : ಬಿಟ್ಕಾಯಿನ್ ಹಗರಣಕ್ಕೆ ಟ್ವಿಸ್ಟ್ – ಕಿಂಗ್ಪಿನ್ ಶ್ರೀಕಿ ಅರೆಸ್ಟ್!

ಅಧಿಕಾರಿ ಜೊತೆಗೆ ಐವರು ಸಚಿವರ ಪ್ರಮಾಣವಚನ
ಇನ್ನೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸೇರಿದಂತೆ ಇತರ ಐದು ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಆರ್.ಎನ್.ರವಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ದಿಲೀಪ್ ಘೋಷ್, ಅಗ್ನಿಮಿತ್ರ ಪಾಲ್, ಅಶೋಕ್ ಕೀರ್ತನಿಯಾ, ಖುದಿರಾಮ್ ತುಡು, ನಿಸಿತ್ ಪ್ರಮಾಣಿಕ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಂಗಾಳದಲ್ಲಿ ಕಮಲ ಕಲರವ
ಇನ್ನು, ಪಟ್ಟಾಭಿಷೇಕ ಸಮಾರಂಭದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸಿದ್ದು, ಜನ್ಮ ವಾರ್ಷಿಕೋತ್ಸವದ ಅಂಗವಾಗಿ ರವೀಂದ್ರನಾಥ ಟ್ಯಾಗೋರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

MUST WATCH : MAY 15ಕ್ಕೆ DKSಗೆ CM ಪಟ್ಟ FIX..!? – ದೊಡ್ಡ ನಿರೀಕ್ಷೆಯಲ್ಲಿ DKS ಬಣ..!




