ರಾಜಕುಮಾರ್ ಸಮಾಧಿ ಸ್ಥಳದ ಬಗ್ಗೆ ನಟ ಚೇತನ್ ಅಹಿಂಸ ಆಕ್ಷೇಪ ವಿಚಾರವಾಗಿ, ನಿನ್ನೆ ಕ್ಷಮೆ ಕೇಳಿ ಇಂದು ನಟ Chetan Ahimsa ಉಲ್ಟಾ ಹೊಡೆದಿದ್ದಾರೆ.

ಡಾಕ್ಟರ್ ರಾಜಕುಮಾರ್ ಸಮಾಧಿ ಸ್ಥಳದ ಬಗ್ಗೆ ನಟ ಚೇತನ್ ಅಹಿಂಸ ಆಕ್ಷೇಪ ವಿಚಾರವಾಗಿ, ನಿನ್ನೆ ಕ್ಷಮೆ ಕೇಳಿ ಇಂದು ನಟ Chetan Ahimsa ಉಲ್ಟಾ ಹೊಡೆದಿದ್ದಾರೆ. ಇಂದು ಮತ್ತೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಚೇತನ್, ನನ್ನ ಮಾತಿನ ಮೇಲೆ ನಾನು ಇಂದು ಕೂಡ ನಿಲ್ಲುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ನಿನ್ನೆ ಕ್ಷಮೆ ಕೇಳಿ ಇಂದು ಮತ್ತೆ ತಮ್ಮ ಹೇಳಿಕೆಗೆ ಸಮರ್ಥನೆ ಮಾಡಿಕೊಂಡಿದ್ದಾರೆ.
ನಾನು ಹೇಳಿದ ಮಾತಿನ ಮೇಲೆ ಇಂದಿಗೂ ನಿಲ್ಲುತ್ತೇನೆ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಚೇತನ್ ಅಹಿಂಸಾ, “ನಾನು ಹೇಳಿದ ಮಾತಿನ ಮೇಲೆ ಇಂದಿಗೂ ನಿಲ್ಲುತ್ತೇನೆ. ನನ್ನ ಉದ್ದೇಶ ಡಾ. ರಾಜಕುಮಾರ್ ಅವರನ್ನು ಟಾರ್ಗೆಟ್ ಮಾಡುವುದಲ್ಲ. ಅವರಿಂದಲೇ ಹೋರಾಟದ ಪಾಠ ಕಲಿತಿದ್ದೇನೆ” ಎಂದು ಸ್ಪಷ್ಟಪಡಿಸಿದರು. ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಹೊಂದಿದ್ದಾರೆ ಎಂದೂ ಹೇಳಿದರು.
READ THIS : ವೈಟ್ ಹೌಸ್ನಲ್ಲಿ ಗುಂಡಿನ ಸದ್ದು – ಡೋನಾಲ್ಡ್ ಟ್ರಂಪ್ ಹೇಗೆ ಬಜಾವ್ ಆದ್ರು?

ಮಹಿಳಾ ನಿಂದನೆ ನಡೆದಿದೆ
ಇದೇ ವೇಳೆ, ಸಾರಾ ಗೋವಿಂದು ವಿರುದ್ಧವೂ ಚೇತನ್ ವಾಗ್ದಾಳಿ ನಡೆಸಿದ್ದು, “ನಿನ್ನೆ ನನ್ನ ಬಗ್ಗೆ ಬಳಸಿದ ಪದಗಳು ಸರಿಯಲ್ಲ. ಮಹಿಳಾ ನಿಂದನೆ ನಡೆದಿದೆ. ಕೆಲವು ಮಂದಿ ಗುಂಡಾಗಿರಿ ಮಾಡಲು ಬಂದಿದ್ದರು” ಎಂದು ಆರೋಪಿಸಿದರು.
ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ
ಸೌಜನ್ಯದಿಂದ ಮಾತನಾಡಿದರೆ ಒಪ್ಪುತ್ತೇನೆ ಆದರೆ ಧಮ್ಕಿ ಹಾಕಿದ್ರೆ ನಾನು ಒಪ್ಪಲ್ಲ. ಕಾನೂನನ್ನು ಕೈಗೆ ತೆಗೆದುಕೊಳ್ಳಬೇಕು ಅನ್ನುವುದನ್ನು ಒಪ್ಪುವುದಿಲ್ಲ ಮುಂದಿನ ದಿನಗಳಲ್ಲಿ ನಾವು ಕಾನೂನು ಹೋರಾಟ ಮಾಡುತ್ತೇವೆ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಅಂದಿದ್ದು, ನನ್ನ ಪೋಸ್ಟ್ ಅನ್ನು ಸಮರ್ಥಿಸಿಕೊಳ್ಳುತ್ತೇನೆ ಅದರಲ್ಲಿ ವಿಚಾರ ಇದೆ ಎಂದು ಮತ್ತೆ ತಮ್ಮ ಹೇಳಿಕೆಯನು ಸಮರ್ಥಿಸಿಕೊಂಡಿದ್ದಾರೆ.

MUST WATCH : CM FULL STRONG ಮೂಢನಂಬಿಕೆ ನಂಬೋದಿಲ್ಲ.. ಹೀಗ್ಯಾಕಂದ್ರು DKS ಆಪ್ತ .?




