6 year boy death in koppal :ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ 6ನೇ ವಾರ್ಡ್ ಮಹಬೂಬ್ ನಗರದಲ್ಲಿ ನೆನ್ನೆ ಸಂಜೆ 6 ವರ್ಷದ ಬಾಲಕನೊಬ್ಬ ಹಳ್ಳಕ್ಕೆ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಮೃತ ಬಾಲಕನನ್ನು ಆಜಾನ್ ಎಂದು ಗುರುತಿಸಲಾಗಿದೆ.
ಮನೆಯ ಪಕ್ಕದಲ್ಲೇ ಇದ್ದ ಹಳ್ಳದ ಬಳಿಯಲ್ಲಿ ಆಟವಾಡುತ್ತಿದ್ದ ಆಜಾನ್ ಅಚಾನಕ್ ಕಾಲು ಜಾರಿ ಹಳ್ಳಕ್ಕೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಸ್ಥಳೀಯರು ಕೂಡಲೇ ಹಳ್ಳದಲ್ಲಿ ಹುಡುಕಾಟ ನಡೆಸಿದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
ಇನ್ನು ಈ ಹಳ್ಳಕ್ಕೆ ಯಾವುದೇ ತಡೆಗೋಡೆ ಅಥವಾ ರಕ್ಷಣಾ ವ್ಯವಸ್ಥೆ ಇಲ್ಲದಿದ್ದುದೇ ಈ ದುರ್ಘಟನೆಗೆ ಕಾರಣವಾಗಿದೆ. ಈ ಬಗ್ಗೆ ನಾಗರಿಕರು ನಗರಸಭೆಗೆ ತಡೆಗೋಡೆ ನಿರ್ಮಾಣದ ಬಗ್ಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ, ನಗರಸಭೆ ಅಧಿಕಾರಿ ಗಳು ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ ಮತ್ತು ವಾರ್ಡ್ ಸದಸ್ಯರು ನೀಡಿ ಪರಿಶೀಲನೆ ನಡೆಸಿದರು.